ಜಸ್ಟೀಸ್ ನಾಗಮೋಹನ್ ದಾಸ್ ಆಯೋಗವು ಅಲೆಮಾರಿ ಜಾತಿ ಗುಂಪಿಗೆ ನೀಡಿದ್ದ ಶೇ. 1ರಷ್ಪು ಮೀಸಲಾತಿ ಎಂಬ ಅನ್ನವನ್ನು ಕಿತ್ತುಕೊಂಡ ಸರ್ಕಾರ ಅದನ್ನು ಲಂಬಾಣಿ ಭೋವಿ ಕೊರಮ ಕೊರಚ ಗುಂಪಿಗೆ ಕೊಟ್ಟಿದೆ. ಯಾರದೋ ಅಸಹಾಯಕರ ಅನ್ನವನ್ನು ಕಸಿದು ಇನ್ಯಾರೋ ಹೊಟ್ಟೆ ತುಂಬಿದವರಿಗೆ ನೀಡುವ ಮನುಧರ್ಮವನ್ನು ಸರ್ಕಾರ ಪ್ರದರ್ಶಿಸಿದೆ ಎಂದು ಸ್ಲಂ ಜನಾಂದೋಲನ ರಾಜ್ಯ ಸಂಚಾಲಕ ಎ. ನರಸಿಂಹಮೂರ್ತಿ ಆರೋಪಿಸಿದರು.
ಅಲೆಮಾರಿಗಳು ಹೋರಾಟ ಬೆಂಬಲಿಸಿ ಬೆಂಗಳೂರು ಚಲೋಗೆ ಶುಕ್ರವಾರ ತುಮಕೂರು ಇಸ್ಮಾಯಿಲ್ ನಗರದಲ್ಲಿ ಚಾಲನೆ ನೀಡಿ ಮಾತನಾಡಿದ ಆವರು ಒಳಮೀಸಲಾತಿ ಯನ್ನು ಜಾರಿ ಮಾಡಲು ಸುಪ್ರೀಂ ಕೋರ್ಟ್ ನೀಡದ ತೀರ್ಪುನ್ನು ಆಧಾರಿಸಿ ನಾಗಮೋಹನ್ ದಾಸ್ ವರದಿ ನೀಡಿದ್ದಾರೆ. ತಾಯಿ ಕರುಳನ್ನೇ ಕಿತ್ತು ಮಾಲೆ ಹಾಕಿಕೊಂಡಿರುವ ಮುಖ್ಯ ಮಂತ್ರಿ ಸಿದ್ಮರಾಮಯ್ಯ ಮತ್ತು ಸಮಾಜ ಕಲ್ಯಾಣ ಸಚಿವಮಹದೇವಪ್ಪ ಕನ್ನಡ ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಈ ಅಸಮಾನತೆಯ ಗುಣ ಈ ನಾಡಿನ ಅಲೆಮಾರಿಗಳಿಗೆ ಬಗೆದ ದ್ರೋಹ ಅಲ್ಲವೇ ಎಂದು ಪ್ರಶ್ನಿಸಿದರು
ಇದನ್ನು ಸಾಮಾಜಿಕ ನ್ಯಾಯದ ಸರ್ಕಾರ ಎನ್ನಬಹುದೇ ? ಸಮ ಪಾಲು ಸಮ ಬಾಳು, ಅಂದರೆ ಇದೇನೇ?, ತಮ್ಮದೇ ಸರ್ಕಾರದ ಇಂತಹ ಅನ್ಯಾಯದ ಕ್ರಮವನ್ನು ನೋಡಿಕೊಂಡು ಕೂತಿರಲು ಸಾಧ್ಯವೇ ಇಂತಹ ಅನ್ಯಾಯ ಸಂಬಂಧಿಸಿದ್ದಲ್ಲವೇ ? ಮನುಷ್ಯತ್ವಕ್ಕೆ ಸಂಬಂಧಿಸಿದ್ದಲ್ಲವೇ ನಮ್ಮಗೆ ಮನುಷ್ಯತ್ವ ಇಲ್ಲವೇ?
ಸದಾಕಾಲ ಅಂಬೇಡ್ಕರ್ ಬುದ್ಧ ಬಸವಣ್ಣನವರ ಸಿದ್ದಾಂತ ಬೋಧೆ ಮಾಡುವ ರಾಜ್ಯ ಸರ್ಕಾರ ಈ ಅನ್ಯಾಯದ ದ್ರೋಹದ ಟಿಪ್ಪಣಿ ರೂಪಿಸಿ ಕ್ಯಾಬಿನೆಟ್ ಅನುಮೋದನೆ ಪಡೆದು ವಿಧಾನ ಸಭೆಯಲ್ಲಿ ಒಪ್ಪಿಗೆ ಪಡೆದಿರುವುದು ಅಸಂವಿಧಾನಿಕ ನಡೆಯಾಗಿದೆ ಎಂದರು.
ಸರ್ಕಾರಕ್ಕೆ ಬುದ್ಧಿ ಕಲಿಸಿ ಅಲೆಮಾರಿಗಳಿಗೆ ಅವರ ಪಾಲಿನ ನ್ಯಾಯ ಧಕ್ಕಿಸಬೇಕು.ಕರ್ನಾಟಕದಲ್ಲಿ ಅಂಬೇಡ್ಕರ್ ಸಿದ್ದಾಂತ ನೇಣಿಗೆರಿಸಿದ ಕೀರ್ತಿ ಈ ಸರ್ಕಾರಕ್ಕೆ ಸಲ್ಲುತ್ತದೆ. ಬುದ್ಧನ ಕರುಣೆಯನ್ನು ಸಮಾಧಿ ಮಾಡಿದವರು ನಾವಾಗುವುದು ಬೇಡ. ಬುದ್ಧ ಬಸವ, ಅಂಬೇಡ್ಕರ್ ಮಾರ್ಗದಲ್ಲಿ ಹೋರಾಟ ಯಶಸ್ವಿ ಗೊಳ್ಳಿಸಬೇಕು. ಅಲೆಮಾರಿಗಳನ್ನು ಭೋವಿ ಲಂಬಾಣಿಗಳಿಂದ ಪ್ರತ್ಯೇಕಿಸಿ ಅವರ ಪಾಲು ಕೊಡಿಸಬೇಕು. ಅಲೆಮಾರಿಗಳ ಮಕ್ಕಳ ಶಿಕ್ಷಣ ಉದ್ಯೋಗ ದೊರಕಿಸಬೇಕು. ಇಲ್ಲದಿದ್ದರೆ ಸರ್ಕಾರವೇ ಅಲೆಮಾರಿಗಳಿಗೆ ವಿಷ ಕೊಡುವ ಸಂದರ್ಭ ಬರಬಹುದು ಎಂದರು.
ಇದೇ ಸಂದರ್ಭದಲ್ಲಿ ಗುಬ್ಬಿ ಹಂದಿ ಜೋಗಿ ಮುಖಂಡ ಮಾರಣ್ಣ, ತುಮಕೂರು ಅಲೆಮಾರಿ ಸಂಘದ ವೆಂಕಟೇಶ್, ತುಮಕೂರು ಸ್ಲಂ ಸಮಿತಿಯ ಕಣ್ಣನ್ ಅನುಪಮಾ, ಕೃಷ್ಣ ಮೂರ್ತಿ ಉಪಸ್ಥಿತರಿದ್ದರು.
