ಚಿತ್ರದುರ್ಗ | ಕೊಲೆಯಾದ ದಲಿತ ವಿದ್ಯಾರ್ಥಿನಿ ಮನೆಗೆ ಎಸ್ಎಫ್ಐ ನಿಯೋಗ; ಪೋಷಕರ ಭೇಟಿ

Date:

Advertisements

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಕೋವೆರಹಟ್ಟಿ ಗ್ರಾಮದ ಕೊಲೆಗೀಡಾದ ದಲಿತ ವಿದ್ಯಾರ್ಥಿನಿ ವರ್ಷಿತಾ ಮನೆಗೆ ಭಾರತ ವಿದ್ಯಾರ್ಥಿ ಫೆಡರೇಷನ್‌ (ಎಸ್ಎಫ್ಐ) ರಾಜ್ಯ ಉಪಾಧ್ಯಕ್ಷ ಬಸವರಾಜ ಎಸ್ ನೇತೃತ್ವದ ನಿಯೋಗ ಮತ್ತು ಚಿತ್ರದುರ್ಗ ಕಾರ್ಯಕರ್ತರು ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಲಾಯಿತು.
ವಿದ್ಯಾರ್ಥಿನಿ ಚಿತ್ರದುರ್ಗದ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ನಲ್ಲಿ ಇದ್ದು ದ್ವಿತೀಯ ವರ್ಷದ ಬಿಎ ಪದವಿ ಓದುತ್ತಿದ್ದಳು.

ಚಿತ್ರದುರ್ಗ ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವೀತಿಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದು, ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ ವಸತಿ ಸೌಲಭ್ಯ ಪಡೆದ ವಿದ್ಯಾರ್ಥಿನಿ ಮನೆಗೆ ಹೋಗುತ್ತೇನೆಂದು ಆಗಸ್ಟ್ 14 ರಂದು ಸಂಜೆ ಹೋಗಿದ್ದಾಳೆ. ಅವಳ ಪೋನ್ ಸ್ವಿಚ್ ಆಫ್ ಆಗಿ ಎರಡು ದಿನಗಳ ನಂತರ ಅವರ ತಾಯಿ ಜ್ಯೋತಿ ಹಾಸ್ಟೆಲ್, ಕಾಲೇಜ್ ವಿಚಾರಣೆ ಮಾಡಿದಾಗ ಕಾಣೆಯಾಗಿದ್ದ ವಿಷಯ ತಿಳಿದು. ಬೇಸರದಿಂದ ಇದ್ದ ಕುಟುಂಬಕ್ಕೆ ಆಗಸ್ಟ್-19ರ ತಡರಾತ್ರಿಯೇ ಪರಿಚಯಸ್ಥರ ಮೂಲಕ ವಿದ್ಯಾರ್ಥಿನಿ ಅರೆಬೆಂದ ಮೃತ ದೇಹ ಪತ್ತೆಯಾದ ಸುದ್ದಿ ಕೇಳಿ ಸಿಡಿಲು ಬಡಿದಂತಾಗಿದೆ.

ವಿದ್ಯಾರ್ಥಿನಿ ವರ್ಷಿತಾ ಕುಟುಂಬ ದಲಿತ ಸಮುದಾಯದ ಕಡು ಬಡತನದಿಂದ ಕೂಡಿದ್ದು ತಂದೆ ತಿಪ್ಪೇಶಪ್ಪ,‌ ತಾಯಿ ಜ್ಯೋತಿ ದಿನಗೂಲಿ ಕೆಲಸ ಮಾಡಿ ಸಣ್ಣ ಮನೆಯಲ್ಲಿ ವಾಸವಾಗಿದ್ದಾರೆ. ಗಂಡು ಮಕ್ಕಳಿಲ್ಲದ ಮನೆಗೆ ಹಿರಿಯ ಮಗಳಾಗಿದ ವರ್ಷಿತಾ ತಂಗಿಯರಿಬ್ಬರು ವಿದ್ಯಾಭ್ಯಾಸವನ್ನು ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಮೂವರು ಸರ್ಕಾರಿ ವಸತಿ ನಿಲಯ ಆಸರೆಯಲ್ಲಿ ಉನ್ನತ ಶಿಕ್ಷಣ ಭವಿಷ್ಯದ ಕನಸು ಕಟ್ಟಿಕೊಂಡಿದ್ದರು.

Advertisements
1002556010

ಶಿಕ್ಷಣದ ಅವಶ್ಯಕತೆಗೆಂದು ತಾಯಿ ಕೂಲಿ ಕೆಲಸ ಮಾಡಿ ಮೊಬೈಲ್ ಕೊಡಿಸಿದ್ದು ಕೊಲೆಗೆಡುಕರ ದಾಳಕ್ಕೆ ಸಿಲುಕಿ ರಾಷ್ಟ್ರೀಯ ಹೆದ್ದಾರಿ ಬಳಿ ಅರೆಬರೆಯಾಗಿ ಬೆಂದು ಸಾವಿಗೀಡಾದ ವಿದ್ಯಾರ್ಥಿನಿ ಕುಟುಂಬ ದುಖಃದಲ್ಲಿ ಮುಳುಗಿದೆ.

ವಿದ್ಯಾಭ್ಯಾಸ ಮುಗಿಸಿ ಕುಟುಂಬದ ಜವಾಬ್ದಾರಿ ಹೊರಬೇಕಾಗಿದ ವಿದ್ಯಾರ್ಥಿನಿಯ ಮೇಲೆ ತಾಯಿ ಇಬ್ಬರು ತಂಗಿಯರು ಅವಲಂಬಿತವಾಗಿದ್ದರು. ಅವಳಿಲ್ಲದೆ ಕುಟುಂಬಕ್ಕೆ ಆಸರೆ ಯಾರು? ವಸತಿ ನಿಲಯದಿಂದ ಹೋದ ಬಳಿಕ ನಿಮ್ಮ ಮಗಳು ಬಂದಿದ್ದಾಳಾ? ಇಲ್ವಾ? ಎಂದು ಒಂದು ಪೋನ್ ಮಾಡಿದ್ದರೆ ಸಾಕಾಗಿತ್ತು, ನನ್ನ ಮಗಳನ್ನು ಉಳಿಸಿಕೊಳ್ಳುತ್ತಿದೆವು. ಹಾಸ್ಟೆಲ್ ನಿಂದ ಹೋಗಿ 5-6 ದಿನಗಳಾಗಿದೆ, ಅಂದರೆ ಸರ್ಕಾರಿ ವಸತಿ ನಿಲಯದ ನಿಲಯ ಪಾಲಕರ ನಿರ್ಲಕ್ಷ್ಯತನವೇ ಮಗಳು ಬಲಿಯಾಗುವುದಕ್ಕೆ ಪ್ರಮುಖ ಕಾರಣವೆಂದು ತಾಯಿ ಜ್ಯೋತಿ ಗಂಭೀರ ಆರೋಪ ಮಾಡಿದ್ದಾರೆ.

1002556016

ಪೊಲೀಸ್ ಇಲಾಖೆಯು ಈ ಪ್ರಕರಣವನ್ನು ಸಮಗ್ರ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥ ಆರೋಪಗಳಿಗೆ ಕಠಿಣ ಶಿಕ್ಷೆ ವಿಧಿಸಲು ನ್ಯಾಯಾಲಯಕ್ಕೆ ಸಂಪೂರ್ಣ ವರದಿ ಸಲ್ಲಿಸಬೇಕು. ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ, ಮಹಿಳಾ ಆಯೋಗವು ಖಾಸಗಿ ವಸತಿ ನಿಲಯಗಳು, ಪಿಜಿ ಸೆಂಟರ್ ಸೇರಿದಂತೆ ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ವಿದ್ಯಾರ್ಥಿನಿಯರ ಮೇಲೆ ಹೆಚ್ಚು ನಿಗಾ ವಹಿಸಬೇಕು, ಉಚಿತ ಆರೋಗ್ಯ ತಪಾಸಣೆ ನಡೆಸಬೇಕು. ಪ್ರತಿ ರಾತ್ರಿ ವಸತಿ ನಿಲಯಗಳಲ್ಲಿ ರಾತ್ರಿ ಕಾವಲುಗಾರು ನೇಮಕಾ ಮಾಡಬೇಕು. ನಿರಂತರವಾಗಿ ತಿಂಗಳಿಗೊಮ್ಮೆ ಪಾಲಕರು ಸಭೆ ನಡೆಸಿ ಸುತ್ತೋಲೆ ಹೊರಡಿಸಬೇಕು. ಮೃತ ವಿದ್ಯಾರ್ಥಿನಿ ಕುಟುಂಬಕ್ಕೆ ಕನಿಷ್ಠ 25 ಲಕ್ಷ ಪರಿಹಾರ ಘೋಷಣೆ ಮಾಡಬೇಕು ಎಂದು ಎಸ್ ಎಫ್ ಐ ಮುಖಂಡರು ಒತ್ತಾಯಿಸಿದರು.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಕೆರೆ ನೀರು ಪೋಲು, ನೀರಾವರಿ ಇಲಾಖೆ ನಿರ್ಲಕ್ಷ್ಯ; ದುರಸ್ತಿಗೆ ರೈತಸಂಘದ ಮುಖಂಡರ ಆಗ್ರಹ

ಭೇಟಿ ವೇಳೆ ಎಸ್ಎಫ್ಐ ರಾಜ್ಯ ಉಪಾಧ್ಯಕ್ಷ ಬಸವರಾಜ ಎಸ್, ರಾಜ್ಯ ಸಮಿತಿ ಸದಸ್ಯರಾದ ಅನಂತರಾಜ್ ಬಿ ಎಮ್, ಶಿವಾರೆಡ್ಡಿ, ಮುಖಂಡರಾದ ರಕ್ಷಿತಾ ಎಸ್ ಎ, ಮುದ್ದುಶ್ರೀ ಡಿ, ಐಶ್ವರ್ಯ ಕೊಲಮ್, ಸಾಯಿ ವರ್ಷಿಣಿ, ರಕ್ಷಿತಾ ದುರ್ಗದ ಪಾಲಯ, ಸಿಂಧು ಇ, ಪವಿತ್ರ ಎಸ್ ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧರ್ಮಸ್ಥಳ ಪ್ರಕರಣ | ನನ್ನ ಬಂಧನ ರಾಜಕೀಯ ಪಿತೂರಿಯ ಭಾಗ: ಮಹೇಶ್ ಶೆಟ್ಟಿ ತಿಮರೋಡಿ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಚಿಕ್ಕಮಗಳೂರು l ಪೋಕ್ಸೋ ಪ್ರಕರಣ: ಆರೋಪಿಗಳಿಗೆ ದಂಡ, ತಲಾ ಹತ್ತು ವರ್ಷ ಜೈಲು ಶಿಕ್ಷೆ

ಪೋಕ್ಸೋ ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗೆ ತಲಾ ಹತ್ತು ವರ್ಷ ಜೈಲು ಶಿಕ್ಷೆ...

ಚಿಕ್ಕಮಗಳೂರು l ಅಕ್ರಮ ಪ್ಲಾಸ್ಟಿಕ್ ಮಾರಾಟ: ನಗರಸಭೆ ಅಧಿಕಾರಿಗಳು ದಾಳಿ

ಚಿಕ್ಕಮಗಳೂರು ನಗರದಲ್ಲಿ ಪ್ಲಾಸ್ಟಿಕ್ ನಿಷೇಧವಿದ್ದರೂ ಅಕ್ರಮವಾಗಿ ಪ್ಲಾಸ್ಟಿಕ್ ಉತ್ಪನ್ನಗಳನ್ನು ಸಂಗ್ರಹಿಸಿ ಮಾರಾಟ...

Download Eedina App Android / iOS

X