ಬಡವರು ವಾಸಿಸುತ್ತಿರುವ ಜಾಗಕ್ಕೆ ಅವರೇ ಮಾಲೀಕರು: ಮಾಜಿ ಸಚಿವ ಎಚ್ ಆಂಜನೇಯ

Date:

Advertisements

ಭೂಮಿ, ವಸತಿ ವಂಚಿತರಲ್ಲಿ ಯಾರು ಸರ್ಕಾರಿ ಭೂಮಿಯಲ್ಲಿ ಉಳಿಮೆ ಮಾಡುತ್ತಿದ್ದಾರೋ, ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡು ಬದುಕುತ್ತಿದ್ದಾರೋ ಆ ಜಾಗಕ್ಕೆ ಅವರೇ ಮಾಲೀಕರು. ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಹೇಳಿದ್ದಾರೆ. ಸರ್ಕಾರದ ಪ್ರತಿನಿಧಿಯಾಗಿ ನಾನೂ ಹೇಳುತ್ತಿದ್ದೇನೆ. ನಾನು ನಿಮ್ಮ ಪ್ರತಿನಿಧಿಯೂ ಕೂಡ ಎಂದು ಮಾಜಿ ಸಚಿವ ಎಚ್‌ ಆಂಜನೇಯ ಹೇಳಿದ್ದಾರೆ.

ರಾಜ್ಯದ ಸಮಸ್ತ ಬಡಜನರ ಭೂಮಿ ಮತ್ತು ವಸತಿ ಸಮಸ್ಯೆಗಳಿಗೆ ಶಾಶ್ವತ ಹಾಗೂ ಸಮಗ್ರ ಪರಿಹಾರ ರೂಪಿಸಲು ಶೀಘ್ರವೇ ಉನ್ನತ ಮಟ್ಟದ ಸಭೆ ಕರೆಯಬೇಕು. ಭೂ ವಂಚಿತರ ಹಕ್ಕುಗಳ ಖಾತ್ರಿಗಾಗಿ ಕ್ರಮ ಕೈಗೊಳಲು ಸಚಿವರು, ಅಧಿಕಾರಿಗಳು ಮತ್ತು ಹೋರಾಟಗಾರರನ್ನು ಒಳಗೊಂಡ ‘ಹೈಪವರ್ ಕಮಿಟಿ’ ರಚಿಸಬೇಕು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಒತ್ತಾಯಿಸಿದೆ. ಸೋಮವಾರ, ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ‘ಬರಿಹೊಟ್ಟೆ ಸತ್ಯಾಗ್ರಹ’ ನಡೆಸಿದೆ.

ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ, ಪ್ರತಿಭಟನಾಕಾರರ ಹಕ್ಕೊತ್ತಾಯ ಸ್ವೀಕರಿಸಿ ಅವರು ಮಾತನಾಡಿದರು. “ಹಲವಾರು ಜನ ಅನಕ್ಷರಸ್ಥರು ಇರುತ್ತಾರೆ. ಉಳಿಮೆ ಮಾಡುತ್ತಿದ್ದರೂ ಅರ್ಜಿ ಹಾಕುವುದು ಗೊತ್ತಿರುವುದಿಲ್ಲ. ಹಾಗಾಗಿ ಸರ್ಕಾರವೇ ಪ್ರಮಾಣಿಕವಾಗಿ ಸರ್ವೇ ಮಾಡಬೇಕು” ಎಂದರು.

Advertisements

“ಉಳುವವನೇ ಭೂಮಿ ಒಡೆಯ ಮತ್ತು ವಾಸಿಸುವನೇ ಮನೆಯ ಒಡೆಯ ಎಂದು ನಾವು ಹಿಂದೆಯೂ ಹೇಳಿದ್ದೆವು. ಈಗಲೂ ಹೇಳುತ್ತಿದ್ದೇವೆ. ಬಡಜನರ ಪರವಾಗಿ ಕಾಯಿದೆ ಮಾಡಲು ನಮ್ಮ ಸರ್ಕಾರ ಸದಾ ಸಿದ್ದವಿದೆ” ಎಂದು ಹೇಳಿದರು.

“ಸರ್ಕಾರ ಯಾವಾಗಲೂ ನಿಮ್ಮ ಪರವಾಗಿ ಇರುತ್ತದೆ. ನಿಮ್ಮನ್ನು ಒಕ್ಕಲೆಬ್ಬಿಸುವ, ನಿಮ್ಮ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡುವುದಿಲ್ಲ. ಈಗ ಸಿಗುತ್ತಿರುವ ಆಶ್ರಯ ಮನೆಗೆ ಸುಮಾರು 1.7 ಲಕ್ಷ ರೂ. ಸಿಗುತ್ತಿದೆ. ಇದು ಸಾಲದು ಈ ಹಣ ಎರಡು ಪಟ್ಟು ಅಥವಾ ಮೂರು ಪಟ್ಟು ಹೇಚ್ಚಾಗಬೇಕು” ಎಂದು ಆಂಜನೇಯ ಹೇಳಿದರು.

ಹಕ್ಕೊತ್ತಾಯ ಸಲ್ಲಿಸಿ ಮಾತನಾಡಿದ ಹೋರಾಟ ಸಮಿತಿಯ ಕುಮಾರ್ ಸಮತಳ, “ವಿವಿಧ ರೀತಿಯ ಸರ್ಕಾರಿ ಭೂಮಿಗಳಲ್ಲಿ ಮತ್ತು ಕೆಲವೊಮ್ಮೆ ಖಾಸಗಿ ಭೂಮಿಗಳಲ್ಲೂ ಬಗರ್‌ಹುಕುಂ ಸಾಗುವಳಿ ಮಾಡುತ್ತ ಅದರ ಹಕ್ಕುಪತ್ರಕ್ಕಾಗಿ ಫಾರಂ ನಂ.50, 53, 57ರಲ್ಲಿ ಅರ್ಜಿ ಸಲ್ಲಿಸಿರುವವರು, ಗುಡಿಸಲು-ಮನೆಗಳ ಹಕ್ಕುಪತ್ರಕ್ಕಾಗಿ 94ಸಿ/94ಸಿಸಿಯಡಿ ಅರ್ಜಿ ಸಲ್ಲಿಸಿರುವವರು, ಅರಣ್ಯ ಹಕ್ಕು ಕಾಯ್ದೆಯಡಿ ಆದಿವಾಸಿ ಮತ್ತು ಪಾರಂಪರಿಕ ಅರಣ್ಯ ಹಕ್ಕುದಾರ ರೈತರು, ರಾಜ್ಯದೆಲ್ಲೆಡೆ ಹಕ್ಕುಪತ್ರಗಳು ದೊರಕಿಲ್ಲದ ಸ್ಲಂ ನಿವಾಸಿಗಳು, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿರುವವರು; ನಗರ-ಪಟ್ಟಣ-ಪಂಚಾಯ್ತಿ ಸರಹದ್ದಿನ ಮಿತಿಯ ಕಾಯ್ದೆ ಬರುವ ಮೊದಲಿಂದಲೇ ಸಾಗುವಳಿ ಮಾಡುತ್ತಿದ್ದಾರೆ. ಅವರೆಲ್ಲರೂ ತಾವು ಸಾಗುವಳಿ ಮಾಡುತ್ತಿರುವ ಭೂಮಿಯ ಹಕ್ಕಿಗಾಗಿ ಅರ್ಜಿ ಸಲ್ಲಿಸಿದ್ದರೂ, ಅವರಿಗೆ ಹಕ್ಕುಪತ್ರಗಳನ್ನು ನೀಡಲಾಗಿಲ್ಲ. ಈಗ ಈ ಕಾಯ್ದೆಯ ನೆಪ ಹೇಳಿ ವಂಚಿಸಲಾಗುತ್ತಿದೆ. ಪರಿಣಾಮ, 60ರಿಂದ 70 ಲಕ್ಷ ಕುಟುಂಬಗಳ (ಸುಮಾರು ಮೂರೂವರೆ ಕೋಟಿ ಜನರು) ಸ್ವಂತ ಭೂಮಿಯಲ್ಲಿ ದುಡಿದು, ಸ್ವಂತ ಸೂರಿನಡಿ ಗೌರವದಿಂದ ಬಾಳುವ ಕನಸು ನಶಿಸುತ್ತಿದೆ. ಈಚಿನ ವರ್ಷಗಳಲ್ಲಿ ಫಲವತ್ತಾದ ಕೃಷಿ ಭೂಮಿಗಳನ್ನು ಕೈಗಾರಿಕೆ ಮತ್ತಿತರ ಕೃಷಿಯೇತರ ಉದ್ದೇಶಗಳಿಗೋಸ್ಕರ ಭೂ ಸ್ವಾಧೀನ ಮಾಡುತ್ತಿರುವುದು ಕೂಡ ಎಲ್ಲೆಡೆಯ ರೈತರನ್ನು ಕಂಗೆಡಿಸಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಸ್ವಾತಂತ್ರ್ಯದ 76ನೇ ವರ್ಷಾಚರಣೆಯ ಸಮಯದಲ್ಲಾದರೂ ಭೂಮಿ ಮತ್ತು ವಸತಿ ವಂಚಿತರ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರೆಯಲೇಬೇಕು. ಅದಕ್ಕಾಗಿ 2018ರಲ್ಲಿ ನಡೆದಿದ್ದ ಉನ್ನತ ಮಟ್ಟದ ಸಭೆಯ ರೀತಿಯಲ್ಲಿ ಮತ್ತೊಂದು ಸಭೆಯನ್ನು ನಡೆಸಬೇಕು. ಸಭೆಗೆ ಕಂದಾಯ, ಅರಣ್ಯ, ವಸತಿ, ಗ್ರಾಮೀಣಾಭಿವೃದ್ಧಿ ಮತ್ತು ಸಮಾಜ ಕಲ್ಯಾಣ ಮಂತ್ರಿಗಳಲ್ಲದೆ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ಭೂಮಿ ವಸತಿ ಹೋರಾಟ ಸಮಿತಿಯ ನಿಯೋಗವನ್ನು ಆಹ್ವಾನಿಸಬೇಕು. ಎಲ್ಲ ಸಮಸ್ಯೆಗಳ ಬಗ್ಗೆ ಕೂಲಂಕಷವಾಗಿ ಚರ್ಚೆ ನಡೆಸಬೇಕು” ಎಂದು ಒತ್ತಾಯಿಸಿದ್ದಾರೆ.

“ಬಡಜನರ ಭೂಮಿ ವಸತಿ ಸಮಸ್ಯೆಯನ್ನು ಯದ್ಯೋಪಾದಿಯಲ್ಲಿ ಬಗೆಹರಿಸಲು ಕ್ಯಾಬಿನೆಟ್ ಸಚಿವರೊಬ್ಬರ ಅಧ್ಯಕ್ಷತೆಯಲ್ಲಿ  ‘ಹೈ ಪವರ್ ಕಮಿಟಿ’ ರಚಿಸಬೇಕು. ಎಲ್ಲ ಕ್ಷೇತ್ರಗಳಲ್ಲೂ ತಡಮಾಡದೆ ಭೂ ಮಂಜೂರಾತಿ ಸಮಿತಿಗಳನ್ನು ರಚಿಸಬೇಕು. ಅದರಲ್ಲಿ ಭೂಮಿ ಹೋರಾಟದ ಒಬ್ಬ ಪ್ರತಿನಿಧಿಯನ್ನೂ ಒಳಗೊಳ್ಳಬೇಕು” ಎಂದು ಆಗ್ರಹಿಸಿದರು.

ಪ್ರತಿಭಟನಾಕಾರರ ಹಕ್ಕೊತ್ತಾಯಗಳು:

1. ಭೂ ಮಂಜೂರಾತಿ ಪ್ರಕ್ರಿಯೆಯನ್ನು ಸರಳ ಮತ್ತು ತ್ವರಿತಗೊಳಿಸಬೇಕು. ತಿರಸ್ಕೃತ ಅರ್ಜಿಗಳನ್ನೂ ಮರುಪರಿಶೀಲನೆಗೆ ತೆಗಡದುಕೊಳ್ಳಬೇಕು.

2. ಜಿಪಿಎಸ್ ಸರ್ವೆ ಮತ್ತು ಸ್ವಯಂ ಘೋಷಿತ ಪ್ರಮಾಣ ಪತ್ರದ ಆಧಾರದ ಮೇಲೆ ಫಾರಂ ನಂಬರ್ 50, 53, 57, 94ಸಿ, 94ಸಿಸಿ ಅಡಿ ಅರ್ಜಿ ಹಾಕಿರುವ ಬಡವರೆಲ್ಲರಿಗೂ ಆರು ತಿಂಗಳೊಳಗಾಗಿ ಭೂಮಿ, ವಸತಿ ಹಕ್ಕುಪತ್ರ ಸಿಗುವಂತಾಗಬೇಕು.

3. ನಗರದ ಸ್ಲಂ ನಿವಾಸಿಗಳಿಗೆ ಕೂಡಲೇ ಹಕ್ಕುಪತ್ರಗಳನ್ನು ವಿತರಿಸಬೇಕು.

4. ಅರಣ್ಯ ಹಕ್ಕು ಕಾಯ್ದೆಯನ್ನು ಅದರ ಮೂಲ ತತ್ವಕ್ಕೆ ಚ್ಯುತಿ ಬರದಂತೆ ಜರಿಗೆ ತರಬೇಕು.

5. ಕಂದಾಯ ಭೂಮಿಗಳನ್ನು ಮಂಜೂರು ಮಾಡಲು ಅರಣ್ಯ ಇಲಾಖೆ ಅನುಮತಿಸಬೇಕು ಎಂಬ ನಿಯಮ ಜಾರಿಗೆ ತರಬೇಕು.

6. ಐದು ಎಕರೆಗಿಂತ ಕಡಿಮೆ ಭೂಮಿ ಇರುವ, ಸ್ವಂತ ಮನೆ ಇಲ್ಲದ ರೈತರನ್ನು, ಬಡವರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಬಾರದು . 

7. ಭೂಮಿಯೂ ಇಲ್ಲದ, ಮನೆಯೂ ಇಲ್ಲದ ಕಡುಬಡವರಿಗೆ ಸ್ವಂತ ಸೂರನ್ನು ಕಲ್ಪಿಸುವುದು ಸರ್ಕಾರದ ಆದ್ಯತೆಯಾಗಬೇಕು . ಲಭ್ಯವಿರುವ ಸರ್ಕಾರಿ ಭೂಮಿಗಳನ್ನು ವಸತಿ ರಹಿತರಿಗೆ ನಿವೇಶನ ಕಲ್ಪಿಸಲು ಬಳಸಬೇಕು. 

8. ಈಗಾಗಲೇ 4-5 ದಶಕಗಳಿಂದ ಅರ್ಜಿ ಹಾಕಿ ಕಾಯುತ್ತಿರುವ ಬಗರ್ ಹುಕುಂ ರೈತರ ಜಮೀನುಗಳನ್ನು ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ , ಪಟ್ಟಣ ಪಂಚಾಯಿತಿ ಮಿತಿಯ ಕಾಯ್ದೆಯಡಿ ತರದೆ, ಕೂಡಲೇ ಬಗರ್ ಹುಕುಂ ರೈತರಿಗೆ ಮಂಜೂರು ಮಾಡಬೇಕು 

9. ಭೂ ಸ್ವಾಧೀನ ಪ್ರಕ್ರಿಯೆಯನ್ನು ಪುಜಾತಾಂತ್ರಿಕಗೊಳಿಸಬೇಕು. ಬಲವಂತದ ಭೂಸ್ವಾಧೀನವನ್ನು ನಿಲ್ಲಿಸಬೇಕು. ಈಗಾಗಲೇ ಅನ್ಯಾಯವಾಗಿರುವ ರೈತರಿಗೆ ನ್ಯಾಯ ದೊರಕಿಸಿಕೊಡಬೇಕು . 

10. ರೈತರು ಹಾಗೂ ಹೋರಾಟಗಾರರ ಮೇಲೆ ಕಂದಾಯ, ಅರಣ್ಯ, ಅಧಿಕಾರಿಗಳು ಹಾಗೂ ಪೋಲೀಸರು ಹಾಕಿರುವ ಕೇಸುಗಳನ್ನು ಹಿಂತೆಗೆದುಕೊಳ್ಳಬೇಕು. 

ಸತ್ಯಾಗ್ರಹದಲ್ಲಿ ಹೋರಾಟ ಸಮಿತಿಯ ನೂರ್ ಶ್ರೀಧರ್, ಬಡಗಲಪುರ ನಾಗೇಂದ್ರ, ಕುಮಾರ್ ಸಮತಳ, ಮಲ್ಲಿಗೆ, ಗೌರಿ, ವೀರಸಂಗಯ್ಯ, ಪೂರ್ಣಿಮಾ, ಸಿದ್ದರಾಜು, ವಸಂತ ರಾಜ್ ಕಹಳೆ, ಕರಿಯಪ್ಪ ಗುಡಿಮನಿ ಸೇರಿದಂತೆ ನೂರಾರು ಪ್ರತಿಭಟನಾಕಾರರು ಇದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಾಲೂರು | ‘ಕೆಲಸ ನೀಡದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’!

ಮಾಲೂರಿನ ವರ್ಗಾ ಕಂಪನಿ ಮುಚ್ಚುವುದನ್ನು ವಿರೋಧಿಸಿ ಇಂದು ಮಾಲೂರಿನಲ್ಲಿ ಕಾರ್ಮಿಕರು ಬೃಹತ್...

ಗಣೇಶ ಚತುರ್ಥಿಗೆ ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು

ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯು ಬೆಂಗಳೂರು-ಮಂಗಳೂರು...

ಬೆಳ್ತಂಗಡಿ | ಸೌಜನ್ಯ ಪ್ರಕರಣ ಮರು ತನಿಖೆಗೆ ವಿವಿಧ ಸಂಘಟನೆಗಳ ಮುಖಂಡರ ಒತ್ತಾಯ

ಬೆಂಗಳೂರಿನಿಂದ ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ತ್ರಿಮೂರ್ತಿ ಅವರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ...

ಚಿಕ್ಕಮಗಳೂರು | ಐದಳ್ಳಿ ಗ್ರಾಮದಲ್ಲಿ ನಿಲ್ಲದ ಕಾಡಾನೆಗಳ ದಾಂಧಲೆ: ಬೆಳೆ ನಾಶ; ಕ್ರಮಕ್ಕೆ ರೈತರ ಒತ್ತಾಯ

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ನಡುವೆ ಕಾಡಾನೆಗಳ ದಾಂಧಲೆ ಮಿತಿ...

Download Eedina App Android / iOS

X