ಹಿಂಸೆಯಿಂದ ನಲುಗಿದ ಜನರ ಸ್ವಾತಂತ್ರ್ಯದ ಪರಿಕಲ್ಪನೆ ಹೇಗಿರಬಹುದು?

Date:

ಎರಡು ವರ್ಷಗಳ ಹಿಂದೆ ರೈತರ ಹೋರಾಟದಲ್ಲಿ ಸುಮಾರು ಏಳುನೂರು ಮಂದಿ ಗತಿಸಿದರು. ಅವರ ಕುಟುಂಬಸ್ಥರು ಸ್ವಾತಂತ್ರ್ಯವನ್ನು ಹೇಗೆ ಬಗೆಯಬಹುದು? ಇತ್ತೀಚೆಗೆ ಮಣಿಪುರದಲ್ಲಿ ಜರುಗಿದ ಹಿಂಸೆಯಲ್ಲಿ ಇಬ್ಬರು ಕುಕಿ ಮಹಿಳೆಯರನ್ನು ಬೆತ್ತಲು ಮಾಡಿ, ಅವರ ಮೆರವಣಿಗೆಯನ್ನು ಮಾಡಿ, ಅತ್ಯಾಚಾರವನ್ನು ಮಾಡಲಾಯಿತು. ಅಲ್ಲಿನ ಹಿಂಸಾಕಾಂಡದಲ್ಲಿ ಆಗಿರುವ ಆಸ್ತಿ, ಪ್ರಾಣಹಾನಿಯನ್ನು ಅನುಭವಿಸಿದವರು ಸ್ವಾತಂತ್ರ್ಯದ ಪರಿಕಲ್ಪನೆಗೆ ಹೇಗೆ ಸ್ಪಂದಿಸಬಹುದು?

ನಾವು ಎಪ್ಪತ್ತಾರನೆಯ ಸ್ವಾತಂತ್ರ್ಯೋತ್ಸವವನ್ನು ಆಚರಿಸತ್ತಿದ್ದೇವೆ. ಸ್ವಾತಂತ್ರ್ಯ ಎಂಬ ಪರಿಕಲ್ಪನೆ ಎಂದು ಚಾಲ್ತಿಗೆ ಬಂದಿತು ಎಂಬುದು ನಿಖರವಾಗಿ ಗುರುತಿಸಲು ಸಾಧ್ಯವಾಗದಿದ್ದರೂ ದಾಸ್ಯ ಎಂಬ ವ್ಯವಸ್ಥೆ ಯಾವಾಗ ಬಂದಿತೋ, ಆ ಕಾಲದಿಂದಲೇ ಮಾನವರಲ್ಲಿ ಸ್ವಾತಂತ್ರ್ಯದ ಬಗೆಗೆ ತುಡಿತಗಳು ಮೂಡಿ ಬಂದವು ಎಂದು ಅರ್ಥೈಸಬಹುದು. ಇತಿಹಾಸದ ಪುಟಗಳನ್ನು ತಿರುಗಿಸಿದರೇ, ಮೊದಲ ಗುಲಾಮರ ವಿಪ್ಲವ 135-132 ಕ್ರಿ.ಪೂ. ದಲ್ಲಿ ಜರುಗಿತು ಎಂದು ತಿಳಿದು ಬರುತ್ತದೆ. ಅದು ರೋಮನ್‌ ಸಾಮ್ರಾಜ್ಯದ ವಿರುದ್ಧ ಈಗಿನ ಇಟಲಿಯ ಸಿಸಿಲಿಯಲ್ಲಿ ಜರುಗಿತು. ಯೂನುಸ್‌ ಎಂಬ ಸಿರಿಯಾದ ಒಬ್ಬ ಗುಲಾಮ ಸುಮಾರು 400 ಗುಲಾಮರೊಡನೆ ಈ ವಿಪ್ಲವಕ್ಕೆ ಕಾರಣನಾದ. ಇದನ್ನು ಪ್ರಥಮ ಗುಲಾಮಿ ಯುದ್ಧ ಎಂದು ಕರೆಯಲಾಗುತ್ತದೆ.

ಕ್ರಿ ಪೂ 73ರಲ್ಲಿ ಸ್ಪಾರ್ಟಕಸ್‌ ಎಂಬ ಗುಲಾಮ/ಗ್ಲೆಡಿಯೇಟರ್ ಶಕ್ತಿಶಾಲಿ ರೋಮನ್‌ ಸಾಮ್ರಾಜ್ಯದ ವಿರುದ್ಧ ದಂಗೆಯೆದ್ದ. ಇದನ್ನು ಮೂರನೇ ಗುಲಾಮರ/ಗ್ಲೆಡಿಯೇಟರ್ (ಪುರಾತನ ರೋಮ್‌ ಸಾಮ್ರಾಜ್ಯದಲ್ಲಿ, ಒಂದು ಅಖಾಡದಲ್ಲಿ ಸಹಮಾನವರ ಅಥವಾ ಕಾಡು ಪ್ರಾಣಿಗಳ ಜೊತೆ ಆಯುಧಗಳೊಡನೆ ಕದನವನ್ನು ಮಾಡುವ ವ್ಯಕ್ತಿ)/ಸ್ಪಾರ್ಟಕಸ್‌ ವಿಪ್ಲವ ಎಂದು ಇತಿಹಾಸಜ್ಞರು ಗುರುತಿಸುತ್ತಾರೆ. ಸುಮಾರು ಐದು ಸಂದರ್ಭಗಳಲ್ಲಿ ಆತನ ನಾಯಕತ್ವದ ಗುಲಾಮರಿಗೆ ಜಯ ಲಭಿಸುತ್ತದೆ. ಕೊನೆಗೆ ಅವರು ಸೋಲುತ್ತಾರೆ. ಕ್ರಿ ಪೂ 71ರಲ್ಲಿ ಆತನನ್ನು ಗಲ್ಲಿಗೆ ಏರಿಸಲಾಗುತ್ತದೆ.

ನಾಗರಿಕತೆ ಮುಂದುವರೆದಂತೆ ವಿಶ್ವದ ಅನೇಕ ಪ್ರಾಂತ್ಯಗಳಲ್ಲಿ ಗುಲಾಮ ಪದ್ಧತಿ ವಿರುದ್ಧ ವ್ಯಾಪಕ ನೆಲೆಯಲ್ಲಿ ಧೀರೋದಾತ್ತ ಹೋರಾಟಗಳು ಜರುಗಿ ಸ್ವಾತಂತ್ರ್ಯದ ಕಹಳೆ ಮೊಳಗುತ್ತದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ನಮ್ಮ ದೇಶದ ಸ್ವಾತಂತ್ರ್ಯದ ಇತಿಹಾಸ ತಿಳಿದ ಸಂಗತಿಯಾಗಿದೆ. 1947ರಲ್ಲಿ ನಮಗೆ ಸ್ವಾತಂತ್ರ್ಯ ದೊರೆತ ಶೈಶವದಲ್ಲೇ ನಮ್ಮ ಸಂವಿಧಾನ ಕರ್ತೃ ಡಾ ಬಿ ಆರ್‌ ಅಂಬೇಡ್ಕರ್‌ ಅವರು “ ನಮಗೆ ರಾಜಕೀಯ ಸ್ವಾತಂತ್ರ್ಯ ಲಭಿಸಿದೆ. ಆದರೆ ಸಾಮಾಜಿಕ/ಆರ್ಥಿಕ ಸ್ವಾತಂತ್ರ್ಯ ನಮ್ಮ ಪ್ರಜೆಗಳಿಗೆ ದೊರಕಬೇಕು “ ಎಂದು ಮನನೀಯ ಮಾತುಗಳನ್ನು ಆಡಿದ್ದರು.

ಪ್ರಸ್ತುತ ನಾವು ಎತ್ತ ಸಾಗಿದ್ದೇವೆ? ನಮ್ಮ ಪ್ರಭುತ್ವ ಸ್ವಾತಂತ್ರ್ಯದ ಬಗೆಗೆ ಹೇಗೆ ಸ್ಪಂದಿಸುತ್ತಿದೆ? ಸಂವಿಧಾನದಲ್ಲಿ ಪ್ರಸ್ತಾಪಿಸಲ್ಪಟ್ಟಿರುವ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿವಿಧ ಹಕ್ಕುಗಳು ಜನತೆಗೆ ನಿಜವಾದ ಅರ್ಥದಲ್ಲಿ ದೊರಕುತ್ತಿವೆಯೇ? ಎಂಬ ಪ್ರಶ್ನೆಗಳು ಪ್ರಜ್ಞಾವಂತರನ್ನು ಕಾಡುತ್ತಿವೆ.

ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಭಾರತದಾದ್ಯಂತ ಅನೇಕ ತೆರನಾದ ಸಮಾರಂಭಗಳು ಜರುಗುತ್ತವೆ. ನಮ್ಮ ರಾಷ್ಟ್ರಧ್ವಜಕ್ಕೆ ವಂದನೆ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಪಟ/ಪ್ರತಿಮೆಗಳಿವೆ ಮಾಲಾರ್ಪಣೆ, ಸಿಹಿ ಹಂಚುವಿಕೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಆದರೆ ಇವುಗಳಿಗಷ್ಟೇ ಒಬ್ಬ ಪ್ರಜೆ ತನ್ನನ್ನು ಸೀಮಿತಗೊಳಿಸಿಕೊಂಡರೇ ಅದು ಸರಿಯೇ ಎಂಬ ಪ್ರಶ್ನೆ ಏಳುತ್ತದೆ. ದೇಶಾದ್ಯಂತ ಜರುಗುತ್ತಿರುವ ಹಲವು ಸಾಮಾಜಿಕ/ರಾಜಕೀಯ/ಆರ್ಥಿಕ/ ಸಾಂಸ್ಕೃತಿಕ ನಕಾರಾತ್ಮಕ ವಿದ್ಯಮಾನಗಳಿಗೆ ಕುರುಡಾಗಿ, ಸಾಂಕೇತಿಕವಾಗಿ ಸ್ವಾತಂತ್ರ್ಯೋತ್ಸವ ಆಚರಿಸುವ ಪರಿ ವರ್ಷಗಳು ಕಳೆಯುತ್ತಿರುವಂತೆ ಜರುಗುತ್ತ ಬರುತ್ತಿರುವುದು ಯೋಚನೀಯ ವಿಷಯವೇ ಸರಿ.

ಕೋಮು ದಂಗೆಗಳಲ್ಲಿ ಮೃತರಾದವರ ಮನೆಯವರು ಸ್ವಾತಂತ್ರ್ಯದ ಬಗೆಗೆ ಹೇಗೆ ಪ್ರತಿಕ್ರಿಯಿಸಬಹುದು?

ಎರಡು ವರ್ಷಗಳ ಹಿಂದೆ ರೈತರ ಹೋರಾಟದಲ್ಲಿ ಸುಮಾರು ಏಳುನೂರು ಮಂದಿ ಗತಿಸಿದರು. ಅವರ ಕುಟುಂಬಸ್ಥರು ಸ್ವಾತಂತ್ರ್ಯವನ್ನು ಹೇಗೆ ಬಗೆಯಬಹುದು? ಇತ್ತೀಚೆಗೆ ಮಣಿಪುರದಲ್ಲಿ ಜರುಗಿದ ಹಿಂಸೆಯಲ್ಲಿ ಇಬ್ಬರು ಕುಕಿ ಮಹಿಳೆಯರನ್ನು ಬೆತ್ತಲು ಮಾಡಿ, ಅವರ ಮೆರವಣಿಗೆಯನ್ನು ಮಾಡಿ, ಅತ್ಯಾಚಾರವನ್ನು ಮಾಡಲಾಯಿತು. ಅಲ್ಲಿನ ಹಿಂಸಾಕಾಂಡದಲ್ಲಿ ಆಗಿರುವ ಆಸ್ತಿ, ಪ್ರಾಣಹಾನಿಯನ್ನು ಅನುಭವಿಸಿದವರು ಸ್ವಾತಂತ್ರ್ಯದ ಪರಿಕಲ್ಪನೆಗೆ ಹೇಗೆ ಸ್ಪಂದಿಸಬಹುದು? ಭಾರತದಾದ್ಯಂತ ದಲಿತ ಮತ್ತು ಇತರ ದಮನಿತ ಸಮುದಾಯಗಳ ಮೇಲೆ ಜರುಗುತ್ತಲೇ ಇರುವ ನಾನಾ ಹಿಂಸೆಗಳ ಹಿನ್ನೆಲೆಯಲ್ಲಿ ಸಂತ್ರಸ್ತರು ಸ್ವಾತಂತ್ರ್ಯದ ಬಗೆಗೆ ಎಂತಹ ಅಭಿಪ್ರಾಯಗಳನ್ನು ಹೊಂದಿರಬಹುದು? ಸಾಲಗಳ ಬಾಧೆಯಿಂದ ನೇಣಿಗೆ ಶರಣಾದ ಲಕ್ಷಗಟ್ಟಲೆ ರೈತರ ಕುಟುಂಬಸ್ಥರು ಸ್ವಾತಂತ್ರ್ಯದ ಪರಿಕಲ್ಪನೆಗೆ ಹೇಗೆ ಮುಖಾಮುಖಿಯಾಗಬಹುದು? ಕೋಮು ದಂಗೆಗಳಲ್ಲಿ ಮೃತರಾದವರ ಮನೆಯವರು ಸ್ವಾತಂತ್ರ್ಯದ ಬಗೆಗೆ ಹೇಗೆ ಪ್ರತಿಕ್ರಿಯಿಸಬಹುದು?

ಇದನ್ನು ಓದಿ ಸ್ವಾತಂತ್ರ್ಯದ ಆಶಯ ಇಂದು ಕಿಂಚಿತ್ ಆದರೂ ಉಳಿದಿದೆಯೇ…?

ಇನ್ನು ಹಲವು ನಗ್ನ, ಕರ್ಕಶ ಪ್ರಶ್ನೆಗಳು ಇವೆ. ಅವುಗಳಿಗೆ ನಾವು ಹೇಗೆ ಸ್ಪಂದಿಸುತ್ತ ಬಂದಿದ್ದೇವೆ ಎಂದು ಪ್ರಾಮಾಣಿಕವಾಗಿ ಆತ್ಮಾವಲೋಕನವನ್ನು ಮಾಡಿಕೊಂಡು ಯಾವ ರೀತಿಯಲ್ಲಿ ಸಮಾಜದ ಒಟ್ಟಾರೆ ಹಿತದಲ್ಲಿ ಮಧ್ಯಪ್ರವೇಶವನ್ನು ಮಾಡಬಹುದು ಎಂಬುವುದರತ್ತ ನಮ್ಮ ಆಲೋಚನೆಗಳು ಸರಿದರೇ, ಆಗ ಸ್ವಾತಂತ್ರ್ಯೋತ್ಸವಕ್ಕೆ ನೈಜಾರ್ಥ ಲಭಿಸುತ್ತದೆ. ಕಾರ್ಲ್‌ ಮಾರ್ಕ್ಸ್‌ ಅನ್ವಯ ಮಾನವರು ಸಾಮಾಜಿಕ ಜೀವಿಗಳು. ಅವರು ತಮ್ಮ ಸಾಮಾಜಿಕ ಸಂಬಂಧಗಳಿಗೆ ಮೂರ್ತರೂಪವನ್ನು ನೀಡಿ, ಅದನ್ನು ಇತ್ಯಾತ್ಮಕವಾಗಿ ಅಭಿವೃದ್ಧಿಪಡಿಸಿದರೆ ಮಾತ್ರ ತಮ್ಮ ಸ್ವಾತಂತ್ರ್ಯವನ್ನು ಪಡೆಯಬಹುದು.

ಮ ಶ್ರೀ ಮುರಳಿ ಕೃಷ್ಣ
+ posts

ಬರಹಗಾರ, ಸಾಮಾಜಿಕ ಕಾರ್ಯಕರ್ತ

ಪೋಸ್ಟ್ ಹಂಚಿಕೊಳ್ಳಿ:

ಮ ಶ್ರೀ ಮುರಳಿ ಕೃಷ್ಣ
ಮ ಶ್ರೀ ಮುರಳಿ ಕೃಷ್ಣ
ಬರಹಗಾರ, ಸಾಮಾಜಿಕ ಕಾರ್ಯಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕವಿನಮನ | ಗೌರಿ ಎಂಬ ಬೆಳಕು

ಆಗಾಗ ಅಂದುಕೊಳ್ಳುತ್ತೇನೆ"ನಾನು ಮೊದಲು ಹೀಗಿರಲಿಲ್ಲ"ಭಯವಿತ್ತು, ಭವಿಷ್ಯದ ಅಳುಕಿತ್ತು."ಜೋಕೆ, ಪ್ರಭುತ್ವ ನಿನ್ನ ಮುಕ್ಕಿ...

ಗೌರಿ ಲಂಕೇಶ್‌ ಹತ್ಯೆಯಾಗಿ ಏಳು ವರ್ಷ: ಕುಂಟುತ್ತ ಸಾಗಿದೆ ಆರೋಪಿಗಳ ವಿಚಾರಣೆ

ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆಯಾಗಿ ಇಂದಿಗೆ (ಸೆ. 5) ಏಳು ವರ್ಷಗಳಾಗಿವೆ....

ಕಾಮುಕರನ್ನು ಸಾಕುತ್ತಿದೆ ಬಿಜೆಪಿ; ಇನ್ನೆಲ್ಲಿ ಮಹಿಳೆಯರ ರಕ್ಷಣೆ?

ದೇಶದಲ್ಲಿ ಭ್ರೂಣ ಹತ್ಯೆಯನ್ನ ಸಂಪೂರ್ಣವಾಗಿ ತಡೆದು, ಸಮಾಜದಲ್ಲಿರುವ ಲಿಂಗ ತಾರತಮ್ಯ ಮನೋಭಾವ...