- 77ನೇ ಸ್ವಾತಂತ್ರ್ಯ ದಿನದ ಧ್ವಜಾರೋಹಣ ನೆರವೇರಿಸಿ ಹೇಳಿಕೆ
- ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು’
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು. ಕಾನೂನಿನ ಮುಂದೆ ಎಲ್ಲರೂ ಸರಿಸಮಾನರು ಎಂದು ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಲೆ ತಿಳಿಸಿದರು.
ಹೈಕೋರ್ಟ್ ಆವರಣದಲ್ಲಿ 77ನೇ ಸ್ವಾತಂತ್ರ್ಯ ದಿನದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, “ಸಮಾಜದಲ್ಲಿ ನ್ಯಾಯಾಂಗದ ಜವಾಬ್ದಾರಿ ಹಿರಿದಿದೆ. ಅದರ ಮೌಲ್ಯ ಹಾಗೂ ತತ್ವಗಳನ್ನು ನಾವೆಲ್ಲರೂ ಅರಿತುಕೊಳ್ಳಬೇಕು. ನ್ಯಾಯ ಪಡೆಯುವುದು ಪ್ರತಿಯೊಬ್ಬನ ನಾಗರಿಕನ ಹಕ್ಕು ಹೊರತು ವಿಶೇಷ ಸವಲತ್ತಲ್ಲ” ಎಂದರು.
“ನ್ಯಾಯ ಪಡೆಯಲು ಬಡವ, ಶ್ರೀಮಂತ ಮುಂತಾದ ಯಾವುದೇ ಮಾನದಂಡವಿಲ್ಲ. ಕಾನೂನಿನ ಮುಂದೆ ವ್ತಕ್ತಿಯ ಸಾಮಾಜಿಕ, ಆರ್ಥಿಕ ಅರ್ಹತೆ ಯಾವುದೇ ಪ್ರಭಾವ ಬೀರುವುದಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆ ನೀಡಿ ನ್ಯಾಯಾಂಗ ವ್ಯವಸ್ಥೆಯನ್ನು ಇನ್ನಷ್ಟು ಬಲಗೊಳಿಸಲು ನಾಯಾಧೀಶರು, ವಕೀಲರು ಶ್ರಮಿಸಬೇಕು. ನ್ಯಾಯಾಲಯದಲ್ಲಿ 2,72,041 ಪ್ರಕರಣಗಳು ಬಾಕಿ ಉಳಿದಿದ್ದು, ಇವುಗಳನ್ನು ಬೇಗ ವಿಲೇವಾರಿ ಮಾಡಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಕೋಮುವಾದಿ ಶಕ್ತಿಗಳ ವಿರುದ್ಧ ಮತ್ತೊಂದು ಸಂಗ್ರಾಮ ನಡೆಯಬೇಕು: ಡಿಕೆ ಶಿವಕುಮಾರ್
“ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನದಿಂದ ನಮಗೆ ಸ್ವಾತಂತ್ರ್ಯ ದೊರೆತಿದೆ. ಇದನ್ನು ಉಳಿಸಿಕೊಳ್ಳಬೇಕಾದ ಜವಾಬ್ದಾರಿ ನಮ್ಮ ಮೇಲಿದೆ” ಎಂದರು.
ಈ ಸಂದರ್ಭದಲ್ಲಿ ಉಚ್ಚ ನ್ಯಾಯಾಲಯದ ನ್ಯಾಯಾಧೀಶರುಗಳು, ಹೆಚ್ಚುವರಿ ಸಾಲಿಸಿಟರ್ ಜನರಲ್ ಶಾಂತಿಭೂಷಣ್, ವಕೀಲರ ಸಂಘದ ಅಧ್ಯಕ್ಷರಾದ ವಿವೇಕ್ ಸುಬ್ಬಾರೆಡ್ಡಿ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಜಿ. ರವಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಾಗ , ಕೆಲವೊಂದು ಸಂದರ್ಭಗಳಲ್ಲಿ ಅನೇಕ ನ್ಯಾಯಾಧೀಶರುಗಳು ವಿಚಾರಣೆಯಿಂದ ಹಿಂದೆ ಸರಿದದ್ದನ್ನು ನಾವು ಕಂಡಿದ್ದೇವೆ. ಉದಾಹರಣೆ : ರಾಘವೇಶ್ವರ ಭಾರತಿ ಪ್ರಕರಣ. ಇದು ಸರಿಯೇ ಮತ್ತು ಇದಕ್ಕೆ ಕಾರಣಗಳಾದರು ಏನು ?