ಐದು ವರ್ಷದ ಮಗುವಿನ ಮೇಲೆ ತಂದೆ-ಮಗ ಸೇರಿ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸುಂಕದಕಟ್ಟೆ ಚಂದನ ಲೇಔಟ್ ನಿವಾಸಿ ನಾಗರಾಜು ಮತ್ತು ಆತನ 17 ವರ್ಷದ ಮಗನನ್ನು ಪೊಲೀಸರು ಬಂಧಿಸಿದ್ದಾರೆ.
ಕೃತ್ಯ ಎಸಗಿದ ಆರೋಪಿಗಳು ಸಂತ್ರಸ್ತೆಯ ತಾಯಿಯ ಸಂಬಂಧಿಕರಾಗಿದ್ದರು. ಹೀಗಾಗಿ, ಸಂತ್ರಸ್ತೆಯ ತಾಯಿ ಕೆಲಸಕ್ಕೆ ತೆರಳುವ ವೇಳೆ ತನ್ನ ಐದು ವರ್ಷದ ಮಗುವನ್ನು ಸಂಬಂಧಿಕರಾದ ಆರೋಪಿ ನಾಗರಾಜ್ ಮನೆಯಲ್ಲಿ ಬಿಟ್ಟು ಹೋಗುತ್ತಿದ್ದರು.
ಆರೋಪಿ ನಾಗರಾಜ್ ಕ್ರಷರ್ವೊಂದರಲ್ಲಿ ಸೂಪರ್ವೈಸರ್ ಆಗಿ ಕೆಲಸ ಮಾಡುತ್ತಿದ್ದನು. ಈತನ 17 ವರ್ಷದ ಮಗ ಪ್ರಥಮ ಪಿಯು ವಿದ್ಯಾರ್ಥಿ.
ತಾಯಿ ಮಗುವನ್ನು ಆರೋಪಿ ನಾಗರಾಜ ಮನೆಯಲ್ಲಿ ಬಿಟ್ಟು ತೆರಳುವಾಗ ಮಗುವಿನ ಮೇಲೆ ತಂದೆ-ಮಗ ಇಬ್ಬರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕ್ಯಾಶ್ಬ್ಯಾಕ್ ಆಫರ್ ಎಂದು ನಂಬಿಸಿ ಹೋಟೆಲ್ ಮಾಲೀಕನಿಗೆ ವಂಚನೆ
ಇತ್ತೀಚೆಗೆ ಮಗುವಿನ ವರ್ತನೆಯಲ್ಲಿ ಕೆಲವು ಬದಲಾವಣೆಯಾದ ಕಾರಣ ತಾಯಿ ಮಗುವನ್ನು ವಿಚಾರಿಸಿದ್ದಾರೆ. ಈ ವೇಳೆ, ಮಗು ನಡೆದ ಘಟನೆ ಬಗ್ಗೆ ವಿವರಿಸಿದೆ. ಬಳಿಕ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಲೈಂಗಿಕ ದೌರ್ಜನ್ಯ ನಡೆಸಿರುವುದು ಖಚಿತವಾಗಿದೆ.
ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗಳ ವಿರುದ್ಧ ಸಂತ್ರಸ್ತೆಯ ತಾಯಿ ದೂರು ದಾಖಲು ಮಾಡಿದ್ದಾರೆ. ದೂರಿನ ಮೇರೆಗೆ ಕಾಮಾಕ್ಷಿಪಾಳ್ಯ ಠಾಣೆಯ ಪೊಲೀಸರು ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿದ್ದಾರೆ.