ಬೆಂಗಳೂರು | ಕ್ಯಾಶ್‌ಬ್ಯಾಕ್ ಆಫರ್ ಎಂದು ನಂಬಿಸಿ ಹೋಟೆಲ್‌ ಮಾಲೀಕನಿಗೆ ವಂಚನೆ

Date:

ಹೋಟೆಲ್‌ ಮಾಲೀಕರೊಬ್ಬರಿಗೆ ಆನ್‌ಲೈನ್ ಪೇಮೆಂಟ್‌ ಆ್ಯಪ್‌ನಲ್ಲಿ ಕ್ಯಾಶ್ ಬ್ಯಾಕ್ ಬರುತ್ತದೆ ಎಂದು ನಂಬಿಸಿ ಅಕೌಂಟ್‌ನಿಂದ ಸಾವಿರಾರು ರೂಪಾಯಿ ಹಣ ವರ್ಗಾವಣೆ ಮಾಡಿಸಿಕೊಂಡು ದುಷ್ಕರ್ಮಿಗಳು ಪರಾರಿಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಬಿರಿಯಾನಿ ಹೋಟೆಲ್‌ ಮಾಲೀಕ ಪಾರುಲ್ ಷಾ ಮೋಸಹೋದ ವ್ಯಕ್ತಿ. ಇವರು ನಗರದ ದಯಾನಂದ ಲೇಔಟ್‌ನ ರಾಮಮೂರ್ತಿನಗರದಲ್ಲಿ ಬಿರಿಯಾನಿ ಹೋಟೆಲ್ ನಡೆಸುತ್ತಿದ್ದಾರೆ.

ಎಂದಿನಂತೆ ಶನಿವಾರವೂ ಪಾರುಲ್ ಷಾ ಹೋಟೆಲ್ ಕೆಲಸದಲ್ಲಿ ತೋಡಗಿದ್ದರು. ಈ ವೇಳೆ, ಇಬ್ಬರು ಅಪರಿಚಿತರು ಸುಮಾರು ಮಧ್ಯಾಹ್ನ 1 ಗಂಟೆಗೆ ಹೋಟೆಲ್‌ಗೆ ಬಂದಿದ್ದಾರೆ. ತಮ್ಮನ್ನು ಬ್ಯಾಂಕ್ ಎಕ್ಸಿಕ್ಯೂಟಿವ್ ಎಂದು ಪರಿಚಯಿಸಿಕೊಂಡಿದ್ದಾರೆ.  

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಬಳಿಕ ಹೊಟೇಲ್ ಮಾಲೀಕ ಪಾರುಲ್ ಷಾ ಅವರಿಗೆ ಆ್ಯಪ್​​ ಮೂಲಕ ಆನ್​​ಲೈನ್​​ ಪೇಮೆಂಟ್​ ಮಾಡಿದರೇ ನಿತ್ಯ ₹300 ಕ್ಯಾಶ್‌ಬ್ಯಾಕ್ ಬರುತ್ತದೆ ಎಂದು ತಿಳಿಸಿದ್ದಾರೆ. ಇದನ್ನು ನಂಬಿದ ಪಾರುಲ್ ಷಾ ಅವರು ಅಪರಿಚಿತರ ಕೈಗೆ ಆ್ಯಪ್ ಡೌನ್‌ಲೋಡ್ ಮಾಡಲು ತಮ್ಮ ಮೊಬೈಲ್ ಕೊಟ್ಟಿದ್ದಾರೆ. ಜತೆಗೆ ತಮ್ಮ ಬ್ಯಾಂಕ್ ಮಾಹಿತಿ ಸಹ ನೀಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಆ.16 ಮತ್ತು 17 ರಂದು ವಿದ್ಯುತ್ ವ್ಯತ್ಯಯ

ಅಪರಿಚಿತರು ಮೊಬೈಲ್‌ನಲ್ಲಿ ಆ್ಯಪ್​​ ಇನ್‌ಸ್ಟಾಲ್‌ ಆಗಿದೆ ಎಂದು ಹೇಳಿ, ವಾಪಾಸ್ ಮೊಬೈಲ್ ನೀಡಿ ತೆರಳಿದ್ದಾರೆ. ಇದಾದ ಕೆಲವೇ ಗಂಟೆಗಳ ಬಳಿಕ ಪಾರುಲ್ ಷಾ ಅವರ ಬ್ಯಾಂಕ್ ಖಾತೆಯಿಂದ ₹52 ಸಾವಿರ ಹಣ ವರ್ಗಾವಣೆಯಾಗಿರುವುದು ತಿಳಿದಿದೆ.

ಕೂಡಲೇ ಗಾಬರಿಗೊಂಡ ಪಾರುಲ್ ಷಾ ಅವರು ಹತ್ತಿರದ ಪೊಲೀಸ್‌ ಠಾಣೆಗೆ ತೆರಳಿ ದೂರು ದಾಖಲು ಮಾಡಿದ್ದಾರೆ.

ಸದ್ಯ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ಪ್ರತಿ ಮನೆಯಿಂದ ₹100 ಘನತ್ಯಾಜ್ಯ ಶುಲ್ಕ ಸಂಗ್ರಹಕ್ಕೆ ಎಎಪಿ ವಿರೋಧ

ಪ್ರತಿವರ್ಷ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಬಜೆಟ್‌ನಲ್ಲಿ ಕಸ ವಿಲೇವಾರಿಗೆಂದೇ ಹಣ...

ಜೂನ್‌ 16ರಂದು ಬೆಳಗ್ಗೆ 6 ಗಂಟೆಯಿಂದಲೇ ನಮ್ಮ ಮೆಟ್ರೋ ಆರಂಭ

ಜೂನ್ 16ರಂದು ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆ (ಯುಪಿಎಸ್‌ಸಿ) ನಡೆಯುವ ಕಾರಣ...

ವಂಚನೆ, ಜೀವ ಬೆದರಿಕೆ ಆರೋಪ: ಕೇಂದ್ರ ಸಚಿವ ಸೋಮಣ್ಣ ಪುತ್ರನ ವಿರುದ್ಧ ಎಫ್‌ಐಆ‌ರ್

ತುಮಕೂರು ಲೋಕಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿ, ಕೇಂದ್ರ ಸಚಿವರಾಗಿ ಅಧಿಕಾರ ವಹಿಸಿಕೊಂಡ...

ನಮ್ಮ ಮೆಟ್ರೋ | ಸುರಂಗ ಕೊರೆಯುವ ಟಿಬಿಎಂ ಯಂತ್ರಗಳಿಗೆ ಅಡ್ಡ ಬಂದ ಬಂಡೆ; ಪಿಂಕ್ ಲೈನ್ ಕಾಮಗಾರಿ ವಿಳಂಬ

ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಮದ್ದಾಗಿ ಕಾರ್ಯನಿರ್ವಹಣೆ ಮಾಡುತ್ತಿರುವ 'ನಮ್ಮ ಮೆಟ್ರೋ' ಇನ್ನೂ...