ರಾಯಚೂರು | ಜಿಲ್ಲೆಯ ಅಭಿವೃದ್ಧಿಗೆ ಕ್ರಮ; ಅಧಿಕಾರಿಗಳೊಂದಿಗೆ ಸಚಿವರ ಸಭೆ

Date:

Advertisements

ರಾಯಚೂರು ಜಿಲ್ಲೆಗೆ ಅಂಟಿಕೊಂಡಿರುವ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಕಿತ್ತೊಗೆಯಲು ಜಲಶಕ್ತಿ ಅಭಿಯಾನ, ಅಪೌಷ್ಟಿಕತೆ ನಿವಾರಣೆ, ಗರ್ಭಿಣಿ ಮಹಿಳೆಯರಿಗೆ ಪೌಷ್ಟಿಕತೆ, ಸಮರ್ಪಕ ಶುದ್ಧ ಕುಡಿಯುವ ನೀರಿನ ಸರಬರಾಜು, ಅಂತರ್ಜಲ ಮಟ್ಟ ಹೆಚ್ಚಳ, ವೈಜ್ಞಾನಿಕವಾಗಿ ನೀರಿನ ಸಂರಕ್ಷಣೆ ಸೇರಿದಂತೆ ಎಲ್ಲ ಯೋಜನೆಗಳನ್ನು ಸಮಗ್ರವಾಗಿ ಅನುಷ್ಠಾನಗೊಳಿಸಬೇಕು ಎಂದು ಸಚಿವ ಎನ್‌.ಎಸ್‌ ಬೋಸರಾಜು ಹೇಳಿದ್ದಾರೆ.

ಕೇಂದ್ರ ಸರ್ಕಾರದ ಜಂಟಿ ಕಾರ್ಯದರ್ಶಿ ಸುಬೋದ್ ಯಾದವ್ ಮತ್ತು ಜಿಲ್ಲೆಯ ಅಧಿಕಾರಿಗಳೊಂದಿಗೆ ಬೋಸರಾಜ್ ಅವರು ಸಭೆ ನಡೆಸಿದ್ದಾರೆ. “ರಾಯಚೂರು ಜಿಲ್ಲೆ ಎಂದ ತಕ್ಷಣ ಅಪೌಷ್ಟಿಕತೆ ನೆನಪಿಗೆ ಬರುತ್ತದೆ. ಸರ್ಕಾರದ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ” ಎಂದು ತಿಳಿಸಿದರು.

“ಜಿಲ್ಲೆಯ ಸಿರವಾರ, ಮಸ್ಕಿ ತಾಲೂಕಿನಲ್ಲಿ ಅಂತರ್ಜಲ ಸಮೃದ್ಧಿಗಾಗಿ ವೈಜ್ಞಾನಿಕವಾಗಿ ಯೋಜನೆಗಳನ್ನು ರೂಪಿಸಬೇಕು. ಸಿರವಾರ ತಾಲೂಕಿನ ಚಿಂಚರಕಿ, ಹೀರಾ, ಅತ್ತನೂರು ಶಾಶ್ವತ ನೀರಿನ ಸಮಸ್ಯೆ ಪರಿಹರಿಸಲು ಗಮನಹರಿಸಬೇಕು” ಎಂದು ಅಧಿಕಾರಿಗಳಿಗೆ ಸೂಚಿಸಿದರು.

Advertisements

ಸಭೆಯಲ್ಲಿ ಜಿಲ್ಲಾಧಿಕಾರಿ ಎಲ್. ಚಂದ್ರಶೇಖರ್ ನಾಯಕ, ಜಿಲ್ಲಾ ಪಂಚಾಯ್ತಿ ಸಿಇಓ ರಾಹುಲ್ ತುಕಾರಾಂ ಪಾಂಡ್ವೆ, ಕೃಷಿ ವಿವಿ ಕುಲಪತಿ ಹನುಮಂತಪ್ಪ, ಐಎಎಸ್ ಪ್ರೇಕ್ಷಾರ್ಥಿ ಸಾಹಿತ್ಯ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ನವಜಾತ ಶಿಶುವನ್ನು ರಸ್ತೆ ಬದಿ ಬಿಟ್ಟು ಹೋದ ಪೋಷಕರು!

ರಾಯಚೂರು ತಾಲೂಕಿನ ಕಲ್ಮಲಾ ಗ್ರಾಮದ ಕಲ್ಲೂರು ರಸ್ತೆಯ ಬಳಿಯಲ್ಲಿ ಇಂದು ಹೃದಯವಿದ್ರಾವಕ...

ರಾಯಚೂರು | ಗ್ರಾಮವನ್ನು ಪಟ್ಟಣ ಪಂಚಾಯತ್ ಮೇಲ್ದರ್ಜೆಗೆ ಏರಿಸಬಾರದು : ಗ್ರಾಮಸ್ಥರ ಪ್ರತಿಭಟನೆ

ಲಿಂಗಸೂಗೂರು ತಾಲ್ಲೂಕಿನ ಗುರುಗುಂಟ ಗ್ರಾಮವನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆರಿಸಬಾರದು ಎಂದು ರಾಜ್ಯ...

ರಾಯಚೂರು | ಶೀಲಹಳ್ಳಿ ಸೇತುವೆ ಮುಳುಗಡೆ : ನಾಲ್ಕು ಗ್ರಾಮಕ್ಕೆ ಸಂಪರ್ಕ ಕಡಿತ

ಲಿಂಗಸುಗೂರು ತಾಲ್ಲೂಕಿನ ಶೀಲಹಳ್ಳಿ ಸೇತುವೆ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ಮುಳುಗಿದ್ದು,...

ರಾಯಚೂರು | ನಿರಂತರ ಮಳೆ : ಸೂರ್ಯಕಾಂತಿ ಬೆಳೆಗೆ ಕೀಟ ಬಾಧೆ

ಜಿಲ್ಲೆಯಲ್ಲಿ ನಿರಂತರ ವಾರದಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆ ಸೂರ್ಯಕಾಂತಿ ಬೆಳೆಗಾರರ...

Download Eedina App Android / iOS

X