‘ಕಿಂಗ್ ಫಿಶರ್’ ಬಿಯರ್‌ನಲ್ಲಿ ವಿಷಕಾರಿ ಅಂಶ ಪತ್ತೆ : ₹25 ಕೋಟಿ ಮೌಲ್ಯದ ಬಾಕ್ಸ್ ಜಪ್ತಿ

Date:

Advertisements
  • ಜು.17ರಂದು ತಪಾಸಣೆ; ಆಗಸ್ಟ್​ 2ರಂದು ‘ಮಾನವರ ಸೇವನೆಗೆ ಯೋಗ್ಯವಲ್ಲ’ ಎಂದು ವರದಿ
  • ₹25 ಕೋಟಿ ಮೌಲ್ಯದ 78,678 ಬಾಕ್ಸ್ ಬಿಯರ್ ವಶಕ್ಕೆ ಪಡೆದ ಅಬಕಾರಿ ಇಲಾಖೆ

‘ಕಿಂಗ್ ಫಿಷರ್ ಬಿಯರ್‌’ನಲ್ಲಿ ವಿಷಕಾರಿ ಅಂಶ ಪತ್ತೆಯಾಗಿರುವ ವಿಚಾರ ಬಯಲಾಗಿದ್ದು, ಈ ಹಿನ್ನೆಲೆಯಲ್ಲಿ 25 ಕೋಟಿ ರೂ. ಮೌಲ್ಯದ ಬಿಯರ್ ಅನ್ನು ಮೈಸೂರಿನ ಅಬಕಾರಿ ಇಲಾಖೆ ಜಪ್ತಿ ಮಾಡಿದೆ.

ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿರುವ ಯುನೈಟೆಡ್ ಬ್ರೆವರೀಸ್ ಕಂಪನಿ ಜುಲೈ 15ರಂದು ತಯಾರಿಸಿದ್ದ ಬಿಯರ್‌ನಲ್ಲಿ ಅಪಾಯಕಾರಿ ಅಂಶ ಪತ್ತೆಯಾಗಿರುವುದು ದೃಢಪಟ್ಟಿದೆ.

ಬಿಯರ್‌ನಲ್ಲಿರುವ ಸೆಡಿಮೆಂಟ್ ಎಂಬ ಅಂಶ ದೇಹಕ್ಕೆ ಅಪಾಯಕಾರಿ ಎಂಬುದು ಲ್ಯಾಬ್‌ನಲ್ಲಿ ನಡೆಸಲಾದ ತಪಾಸಣೆಯಲ್ಲಿ ಪತ್ತೆಯಾಗಿದ್ದು, ‘ಮಾನವರ ಸೇವನೆಗೆ ಯೋಗ್ಯವಲ್ಲ’ ಎಂದು ವರದಿ ನೀಡಿದೆ.

Advertisements
beer

ವಿಷಕಾರಿ ಅಂಶ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮದ್ಯವನ್ನು ಗ್ರಾಹಕರಿಗೆ ವಿತರಣೆ ಮಾಡದಂತೆ ಅಬಕಾರಿ ಇಲಾಖೆಯು ಸುತ್ತೋಲೆ ಹೊರಡಿಸಿದೆ. ಜೊತೆಗೆ ₹25 ಕೋಟಿ ಮೌಲ್ಯದ 78,678 ಬಿಯರ್ ಬಾಕ್ಸ್ ಅನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೈಸೂರು ಗ್ರಾಮಾಂತರ ಅಬಕಾರಿ ಉಪ ಆಯುಕ್ತ ಎ.ರವಿಶಂಕರ್ ಮಾಹಿತಿ ನೀಡಿದ್ದಾರೆ.

ವಿಷಕಾರಿ ಅಂಶ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಕಿಂಗ್​ ಫಿಶರ್​ ಕಂಪನಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಿಂಗ್ ಫಿಶರ್ ಸ್ಟ್ರಾಂಗ್ ಹಾಗೂ ಕಿಂಗ್ ಫಿಶರ್ ಅಲ್ಟ್ರಾ ಲ್ಯಾಗರ್ ಬಿಯರ್​ನಲ್ಲಿ ವಿಶಕಾರಿ ಅಂಶ ಪತ್ತೆಯಾಗಿದೆ. 7C ಹಾಗು 7E ಬ್ಯಾಚ್​ನಲ್ಲಿ ಎಲ್ಲಾ ಬಿಯರ್‌ಗಳನ್ನು ಜಪ್ತಿ ಮಾಡಿದ್ದು, ಕೆಮಿಕಲ್​ ಪರೀಕ್ಷೆಯಲ್ಲಿ ಅಪಾಯಕಾರಿ ಅಂಶ ಪತ್ತೆಯಾಗಿದೆ. ಅಷ್ಟೂ ಪ್ರಮಾಣದ ಬಿಯರ್​​ ಬಾಟೆಲ್​ ನಾಶ ಮಾಡುವುದಕ್ಕೆ ನಿರ್ಧಾರ ಮಾಡಲಾಗಿದೆ ಎಂದು ರವಿಶಂಕರ್ ತಿಳಿಸಿದ್ದಾರೆ.

ಜುಲೈ 17ರಂದು ತಪಾಸಣೆ, ಆಗಸ್ಟ್​ 2ರಂದು ವರದಿ

ಜುಲೈ 17ರಂದು ಬಿಯರ್​ನ ಸ್ಯಾಂಪಲ್ ಪಡೆದು ತಪಾಸಣೆಗಾಗಿ ರವಾನೆ ಮಾಡಲಾಗಿತ್ತು. ಆ.2 ರಂದು ಮಾನವನ ಆರೋಗ್ಯಕ್ಕೆ ಹಾನಿಕಾರಕ ಅಂಶ ಪತ್ತೆಯಾಗಿದ್ದು, ‘ಅನ್ ಫಿಟ್ ಫಾರ್ ಹ್ಯೂಮನ್ ಕನ್ಸಂಪ್ಷನ್’ ಅಂದರೆ ಮಾನವರ ಸೇವನೆಗೆ ಯೋಗ್ಯವಲ್ಲ ಎಂದು ತಿಳಿಸಲಾಗಿತ್ತು. ಮಾನವರು ಸೇವಿಸಲು ಯೋಗ್ಯವಲ್ಲ ಅನ್ನೋ ಬೆಂಗಳೂರಿನ ಲ್ಯಾಬ್​ನಿಂದ ಬಂದಿದೆ. ನಾವು ಮೈಸೂರು ಡಿಸಿ ಹಾಗು ಅಬಕಾರಿ ಡಿಸಿ ಇಬ್ಬರಿಗೂ ಪತ್ರ ಬರೆದು ಮುಂದಿನ ಕ್ರಮಕ್ಕೆ ಮನವಿ ಮಾಡಿದ್ದೇನೆ ಎಂದು ಮೈಸೂರು ಗ್ರಾಮಾಂತರ ಉಪ ಅಬಕಾರಿ ಆಯುಕ್ತ ಎ. ರವಿಶಂಕರ್​ ಮಾಹಿತಿ ನೀಡಿದ್ದಾರೆ.

ಬೆಂಗಳೂರು ಸೇರಿದಂತೆ ರಾಜ್ಯದ ಇತರ ಕಡೆಗೆ 78,678 ಬಿಯರ್​ ಪೂರೈಕೆ ಮಾಡಲಾಗಿತ್ತು ಎನ್ನಲಾಗಿದೆ. ಇದೀಗ ಎಲ್ಲ ಬಾಟಲ್​ಗಳ ಮಾರಾಟ ತಡೆ ಹಿಡಿಯಲಾಗಿದೆ ಎಂದು ತಿಳಿಸಿದ್ದಾರೆ.

ಗುಣಮಟ್ಟದ ಬಿಯರ್ ತಯಾರು ಮಾಡದ ಕಾರಣಕ್ಕಾಗಿ ಯುನೈಟೆಡ್ ಬ್ರಿವರಿಸ್ ಕಂಪನಿ ವಿರುದ್ಧ ಅಬಕಾರಿ ಕಾಯ್ದೆಯಡಿ ಎಫ್​ಐಆರ್ ದಾಖಲು ಮಾಡಲಾಗಿದೆ. ಇಲಾಖಾ ಮಟ್ಟದಲ್ಲಿ ತನಿಖೆ ಮಾಡಲು ಇಲಾಖಾ ಮಟ್ಟದಲ್ಲಿ ಸಮಿತಿ ರಚನೆ ಮಾಡಲಾಗಿದೆ.

mysore

ಮೈಸೂರಿನ ನಂಜನಗೂಡಿನಲ್ಲಿರುವ ಯುನೈಟೆಡ್ ಬ್ರೆವರೀಸ್ ಕಂಪನಿ

ಬೆಂಗಳೂರಿಗೆ 11 ಸಾವಿರ ಬಿಯರ್​ ಬಾಟಲ್​ ಸೇರಿದಂತೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ಸರಬರಾಜು ಆಗಿದೆ. ಆದರೆ ಅದರಲ್ಲಿ ಎಷ್ಟು ಮಾರಾಟ ಆಗಿದೆ ಅನ್ನೋ ಲೆಕ್ಕವನ್ನು ಅಧಿಕಾರಿಗಳು ನೀಡಿಲ್ಲ. ಈ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿದುಬರಬೇಕಿದೆ.

ಕಂಪನಿ ಹೇಳಿದ್ದೇನು?

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೈಸೂರಿನ ಯುನೈಟೆಡ್ ಬ್ರೆವರೀಸ್ ಕಂಪನಿ, ‘ಜುಲೈ 15 ರಂದು ತಯಾರಿಸಿದ್ದ ಕಿಂಗ್‌ಫಿಶರ್ ಅಲ್ಟ್ರಾ ಬಿಯರ್ ಬಾಟಲಿಗಳಲ್ಲಿ ಲೋಪ ಹೊಂದಿದೆ. ಈ ಬಗ್ಗೆ ನಾವು ತಕ್ಷಣ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಮತ್ತು ಅವರ ತನಿಖೆಗೆ ಸಹಕರಿಸುತ್ತಿದ್ದೇವೆ. ಇದು ಕಿಂಗ್‌ಫಿಷರ್ ಅಲ್ಟ್ರಾದ ಒಂದೇ ಬ್ಯಾಚ್‌ನಲ್ಲಿ ಮಾತ್ರ ಕಂಡು ಬಂದಿದೆ. ಕಿಂಗ್‌ಫಿಷರ್ ಸ್ಟ್ರಾಂಗ್‌ನಲ್ಲಿ ಅಲ್ಲ’ ಎಂದು ಹೇಳಿದೆ.

‘ನಾವು ಕಿಂಗ್‌ಫಿಷರ್ ಅಲ್ಟ್ರಾ ಬ್ಯಾಚ್‌ಅನ್ನು ಎನ್‌ಎಬಿಎಲ್‌ನಿಂದ ಮಾನ್ಯತೆ ಪಡೆದ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿದ್ದೇವೆ. ಆದ್ದರಿಂದ ಇದು ಆರೋಗ್ಯದ ಮೇಲೆ ಯಾವುದೇ ಅಪಾಯಗಳನ್ನು ಉಂಟುಮಾಡುವುದಿಲ್ಲ ಎಂದು ಪರೀಕ್ಷೆಯಲ್ಲಿ ದೃಢಪಡಿಸಿದೆ. ನಾವು ಅಧಿಕಾರಿಗಳೊಂದಿಗೆ ಸಂಪರ್ಕ ಹೊಂದಿದ್ದೇವೆ. ನಮ್ಮ ಗ್ರಾಹಕರ ಸುರಕ್ಷತೆಗೆ ಆದ್ಯತೆ ನೀಡುವುದು ನಮ್ಮ‌ ಕರ್ತವ್ಯ’ ಎಂದು ಕಂಪನಿಯವಕ್ತಾರರು ತಿಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X