ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇಂಗ್ಲೆಂಡ್, ಕೆನಡಾ ಮತ್ತು ಆಸ್ಟ್ರೇಲಿಯಾ ದೇಶಗಳು ಪ್ಯಾಲೆಸ್ತೀನ್‌ನನ್ನು ರಾಷ್ಟ್ರವಾಗಿ ಮಾನ್ಯತೆ ನೀಡಿದ ಬೆನ್ನಲ್ಲೆ ಎಚ್ಚರಿಕೆ ನೀಡಿದ್ದಾರೆ.
ಈ ಮೂರು ದೇಶಗಳು ಭಾನುವಾರದಂದು ಪ್ಯಾಲೆಸ್ತೀನ್‌ನನ್ನು ಔಪಚಾರಿಕವಾಗಿ ರಾಷ್ಟ್ರದ ಮಾನ್ಯತೆ ನೀಡಿದ್ದವು.
ಪ್ರಧಾನಿ ಕಚೇರಿಯಿಂದ ಬಿಡುಗಡೆಯಾದ ಹೇಳಿಕೆಯಲ್ಲಿ, ನೆತನ್ಯಾಹು, “ಜೋರ್ಡಾನ್ ನದಿಯ ಪಶ್ಚಿಮಕ್ಕೆ ಯಾವುದೇ ಪ್ಯಾಲೆಸ್ತೀನ್ ರಾಷ್ಟ್ರವಿರುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಗಾಜಾ ಪಟ್ಟಿಯಲ್ಲಿ ಯುದ್ಧ ತೀವ್ರಗೊಂಡಿರುವಾಗ ಮತ್ತು ಇಸ್ರೇಲ್ ಮೇಲೆ ಅಂತಾರಾಷ್ಟ್ರೀಯ ಒತ್ತಡ ಹೆಚ್ಚುತ್ತಿರುವ ಸಂದರ್ಭದಲ್ಲಿ, ಇಂಗ್ಲೆಂಡ್, ಕೆನಡಾ ಮತ್ತು ಆಸ್ಟ್ರೇಲಿಯಾ ದೇಶಗಳು ಭಾನುವಾರದಂದು ಪ್ಯಾಲೆಸ್ತೀನ್‌ನನ್ನು ರಾಷ್ಟ್ರವಾಗಿ ಔಪಚಾರಿಕವಾಗಿ ಮಾನ್ಯತೆ ಮಾಡಿವೆ. ಈ ದೇಶಗಳ ಮೂರು ಪ್ರಧಾನ ಮಂತ್ರಿಗಳು, ಈ ಕ್ರಮವು ಗಾಜಾದಲ್ಲಿ ನಡೆಯುತ್ತಿರುವ ದಾಳಿಯ ಮಧ್ಯೆ ಶಾಶ್ವತ ಶಾಂತಿಗೆ ಮತ್ತು ಎರಡು-ರಾಷ್ಟ್ರದ ಪರಿಹಾರಕ್ಕೆ ದಾರಿಯಾಗಲಿದೆ ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ‘ಆಳಂದ’ ಕ್ಷೇತ್ರದ ಆಕ್ಷೇಪಕ್ಕೆ ಅರೆಬರೆ ಉತ್ತರಕೊಟ್ಟ ಚುನಾವಣಾ ಆಯೋಗ
ಹಲವು ವರ್ಷಗಳಿಂದ, ದೇಶೀಯ ಮತ್ತು ವಿದೇಶಗಳೆರಡರ ಅಪಾರ ಒತ್ತಡದ ನಡುವೆಯೂ ಆ ಭಯೋತ್ಪಾದಕ ರಾಜ್ಯದ ರಾಜ್ಯದ ಸೃಷ್ಟಿಯನ್ನು ನಾನು ತಡೆದಿದ್ದೇನೆʼ ಎಂದು ನೆತನ್ಯಾಹು ಹೇಳಿದ್ದಾರೆ.
ಈ ನಡುವೆ ಪೋರ್ಚುಗಲ್ ಕೂಡ ಪ್ಯಾಲೆಸ್ತೀನ್‌ಗೆ ಔಪಚಾರಿಕವಾಗಿ ರಾಷ್ಟ್ರದ ಮಾನ್ಯತೆ ನೀಡಿದೆ.
ನೆತನ್ಯಾಹು ಅವರ ಹೇಳಿಕೆಯು ಇಸ್ರೇಲ್ ಸರ್ಕಾರದ ಯುದ್ಧ ಗುರಿಗಳನ್ನು ಮತ್ತು ಗಾಜಾ ಪಟ್ಟಿಯಲ್ಲಿ ನಡೆಯುತ್ತಿರುವ ನಿರಂತರ ಬಾಂಬ್ ದಾಳಿಗಳನ್ನು ಪ್ರತಿಬಿಂಬಿಸುತ್ತದೆ. ಅಂತಾರಾಷ್ಟ್ರೀಯ ಸಮುದಾಯದ ಒತ್ತಡದ ಹೊರತಾಗಿಯೂ, ಇಸ್ರೇಲ್ ತನ್ನ ಕಾರ್ಯಾಚರಣೆಯನ್ನು ಮುಂದುವರಿಸಿದೆ.
