ಸಿಡಿದ ಸೂರ್ಯನ ಭಾಗ; ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾದ ಬಾಹ್ಯಾಕಾಶ ವಿಜ್ಞಾನಿಗಳು

Date:

Advertisements
  • ಖಗೋಳಶಾಸ್ತ್ರಜ್ಞರನ್ನು ಸದಾ ಬೆರಗುಗೊಳಿಸುವ ನಕ್ಷತ್ರ ಸೂರ್ಯ
  • ಬಾಹ್ಯಾಕಾಶ ವಿಜ್ಞಾನಿಗಳ ಸಮುದಾಯವನ್ನು ಬೆರಗುಗೊಳಿಸಿದ ದೃಶ್ಯ

ಸೂರ್ಯ, ತನ್ನ ಅಗಾಧ ಗುರುತ್ವ ಬಲದ ಶಕ್ತಿಯಿಂದ ಇಡೀ ಸೌರವ್ಯೂಹವನ್ನು ನಿಯಂತ್ರಿಸುವ ನಕ್ಷತ್ರ. ಸೂರ್ಯನಲ್ಲಾಗುವ ಸಣ್ಣ ಬದಲಾವಣೆಯೂ, ಸೌರಮಂಡಲದ ಮೇಲೆ ಅಗಾಧ ಪರಿಣಾಮ ಬೀರುವ ಸಾಮರ್ಥ್ಯ ಹೊಂದಿದೆ.

ಖಗೋಳಶಾಸ್ತ್ರಜ್ಞರನ್ನು ಸದಾ ಬೆರಗುಗೊಳಿಸುವ ನಕ್ಷತ್ರವಾದ ಸೂರ್ಯ ಇದೀಗ ಇನ್ನೊಂದು ಭಾರಿ ಆಸಕ್ತಿದಾಯಕ ವಿದ್ಯಮಾನಕ್ಕೆ ಸಾಕ್ಷಿಯಾಗಿದೆ. ಸೂರ್ಯನ ಒಂದು ದೊಡ್ಡ ಭಾಗ ಸಿಡಿದು ಅದರ ಉತ್ತರ ಧ್ರುವದಲ್ಲಿ ಸುಂಟರಗಾಳಿಯಂಥ ಬೃಹತ್ ಸುಳಿ ಸೃಷ್ಟಿಯಾಗಿದೆ. ಈ ರೀತಿಯಲ್ಲಿ ಸೂರ್ಯನ ಭಾಗ ತುಂಡಾಗಿದ್ದಕ್ಕೆ ಕಾರಣವನ್ನು ವಿಜ್ಞಾನಿಗಳು ವಿಶ್ಲೇಷಿಸುತ್ತಿದ್ದಾರೆ. ಈ ವಿದ್ಯಮಾನದ ವಿಡಿಯೋ ದೃಶ್ಯ ಬಾಹ್ಯಾಕಾಶ ವಿಜ್ಞಾನಿಗಳ ಸಮುದಾಯವನ್ನು ಬೆರಗುಗೊಳಿಸಿದೆ.

ಈ ವಿಸ್ಮಯ ವಿದ್ಯಮಾನವನ್ನು ನಾಸಾದ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್‌ ಸೆರೆಹಿಡಿದಿದೆ. ಈ ವಿಡಿಯೋವನ್ನು ಕಳೆದ ವಾರ ಬಾಹ್ಯಾಕಾಶ ಹವಾಮಾನ ಮುನ್ಸೂಚಕರಾದ ಡಾ ತಮಿತಾ ಸ್ಕೋವ್ ಅವರು, ತಮ್ಮ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸೂರ್ಯನು ಸೌರ ಜ್ವಾಲೆಗಳನ್ನು ಹೊರಸೂಸುತ್ತಲೇ ಇರುತ್ತಾನೆ. ಅದು ಕೆಲವೊಮ್ಮೆ ಭೂಮಿಯ ಮೇಲಿನ ಸಂವಹನ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ವಿಜ್ಞಾನಿಗಳು ಇತ್ತೀಚಿನ ಬೆಳವಣಿಗೆಯ ಬಗ್ಗೆ ಹೆಚ್ಚು ಕಾಳಜಿ ವಹಿಸಿದ್ದಾರೆ.

Advertisements

ನಾಸಾದ ಪ್ರಕಾರ ಸೌರ ಜ್ವಾಲೆಯು ಸೂರ್ಯನ ಮೇಲ್ಮೈಯಿಂದ ಹೊರಕ್ಕೆ ವಿಸ್ತರಿಸುವ ದೊಡ್ಡ ಪ್ರಕಾಶಮಾನವಾದ ಲಕ್ಷಣವಾಗಿದೆ. ಈ ಹಿಂದೆ ಇಂತಹ ಹಲವಾರು ನಿದರ್ಶನಗಳು ಪತ್ತೆಯಾಗಿವೆ. ಆದರೆ ಈ ಬಾರಿ ಈ ಸೌರ ಜ್ವಾಲೆ ಸೂರ್ಯನ ಬೃಹತ್‌ ಭಾಗವನ್ನೇ ದೂರ ಸರಿಸಿರುವುದು ಖಗೋಳ ವಿಜ್ಞಾನ ಸಮುದಾಯವನ್ನು ದಿಗ್ಭ್ರಮೆಗೊಳಿಸಿದೆ.

ಸೂರ್ಯನ ಈ ಬೃಹತ್‌ ಭಾಗವು ಸರಿಸುಮಾರು 60 ಡಿಗ್ರಿ ಅಕ್ಷಾಂಶದಲ್ಲಿ, ಧ್ರುವವನ್ನು ಸುತ್ತಲು ಸರಿಸುಮಾರು 8 ಗಂಟೆಗಳನ್ನು ತೆಗೆದುಕೊಂಡಿತು ಎಂಬುದು ಹೆಚ್ಚಿನ ಅವಲೋಕನದಿಂದ ತಿಳಿದುಬಂದಿದೆ. ಇದರರ್ಥ, ಈ ಘಟನೆಯಲ್ಲಿ ಸಮತಲ ಗಾಳಿಯ ವೇಗದ ಅಂದಾಜಿನ ಮೇಲಿನ ಮಿತಿಯು, ಸೆಕೆಂಡಿಗೆ 96 ಕಿಲೋಮೀಟರ್ ಅಥವಾ ಸೆಕೆಂಡಿಗೆ 60 ಮೈಲುಗಳಷ್ಟಿತ್ತು ಎಂದು ಡಾ. ಸ್ಕೋವ್ ಮಾಹಿತಿ ನೀಡಿದ್ದಾರೆ.

ಸೌರ ಜ್ವಾಲೆಗಳು ಸಾಮಾನ್ಯ ಸಂಗತಿಯಾಗಿದ್ದರೂ, ಈ ನಿರ್ದಿಷ್ಟ ಸೌರ ಜ್ವಾಲೆ ಅದೆಷ್ಟು ಪ್ರಬಲವಾಗಿತ್ತೆಂದರೆ, ಸೂರ್ಯನ ಬೃಹತ್‌ ಭಾಗವೊಂದನ್ನೇ ತನ್ನತ್ತ ಸೆಳೆದಿದೆ. ಈ ಅಪರೂಪದ ವಿದ್ಯಮಾನ, ಸೌರ ಜ್ವಾಲೆಗಳ ಕುರಿತು ಹೆಚ್ಚಿನ ಅಧ್ಯಯನಕ್ಕೆ ನಮ್ಮನ್ನು ಪ್ರೋತ್ಸಾಹಿಸಿದೆ ಎಂದು ನಾಸಾ ಹೇಳಿದೆ.

ದಶಕಗಳಿಂದ ಸೂರ್ಯನನ್ನು ಗಮನಿಸುತ್ತಿರುವ ಅಮೆರಿಕದ ನ್ಯಾಷನಲ್ ಸೆಂಟರ್ ಫಾರ್ ಅಟ್ಮಾಸ್ಫಿಯರಿಕ್ ರಿಸರ್ಚ್‌ನ ಸೌರ ಭೌತಶಾಸ್ತ್ರಜ್ಞ ಸ್ಕಾಟ್ ಮ್ಯಾಕಿಂತೋಷ್, ಸೌರ ಜ್ವಾಲೆಯ ತುಣುಕು ಮುರಿದುಹೋದಾಗ ಸಂಭವಿಸಿದಂತಹ ಇಂತಹ ಬೃಹತ್‌ ಸುಂಟರಗಾಳಿಯನ್ನು ನಾನು ಹಿಂದೆಂದೂ ನೀಡಿಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬಾರ್ಡ್‌ ಪ್ರಮಾದ | 100 ಬಿಲಿಯನ್ ಷೇರು ನಷ್ಟ ಅನುಭವಿಸಿದ ಆಲ್ಫಾಬೆಟ್ ಇಂಕ್

ಬಾಹ್ಯಾಕಾಶ ವಿಜ್ಞಾನಿಗಳು ಈಗ ಈ ವಿಚಿತ್ರ ಘಟನೆಯ ಬಗ್ಗೆ ಹೆಚ್ಚಿನ ವಿವರಗಳನ್ನು ಸಂಗ್ರಹಿಸಲು ಮತ್ತು ಸ್ಪಷ್ಟವಾದ ಚಿತ್ರವನ್ನು ಪ್ರಸ್ತುತಪಡಿಸಲು ಆರಂಭಿಸಿದ್ದಾರೆ. ನಮ್ಮ ಮಾತೃ ನಕ್ಷತ್ರವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದ್ದು, ಈ ತಿಂಗಳು ಭೂಮಿಯ ಮೇಲಿನ ಸಂವಹನ ವ್ಯವಸ್ಥೆಯನ್ನು ಅಡ್ಡಿಪಡಿಸಿದ ಅನೇಕ ಶಕ್ತಿಶಾಲಿ ಸೌರ ಜ್ವಾಲೆಗಳನ್ನು ಸೂರ್ಯ ಹೊರಸೂಸಿದ್ದಾನೆ ಎಂದು ನಾಸಾದ ಖಗೋಳ ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾರತೀಯ ಟ್ರಾವೆಲ್ ಏಜೆಂಟ್‌ಗಳಿಗೆ ಟ್ರಂಪ್‌ ಸರ್ಕಾರದ ವಿಸಾ ನಿರ್ಬಂಧ; ಇನ್ನು ಮುಂದೆ ಅಮೆರಿಕ ಪ್ರವಾಸ ಕಷ್ಟವೆ?

ಡಿಎಸ್-160 ಅರ್ಜಿ ತುಂಬುವುದು, ಪಾಸ್‌ಪೋರ್ಟ್ ವಿವರಗಳ ನಿರ್ವಹಣೆ, ದಾಖಲೆಗಳ ಸಕಾಲಿಕ ಅಪ್ಲೋಡ್‌...

ವಿದೇಶಿ ಮಾಧ್ಯಮಗಳು ಕಂಡಂತೆ ಭಾರತ – ಪಾಕ್‌ ಸಂಘರ್ಷ

ಭಾರತ - ಪಾಕ್‌ ಸಂಘರ್ಷದ ಸಮಯದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಹಲವು ಮಾಧ್ಯಮಗಳು...

ನಾವು ಪಾಕಿಸ್ತಾನಿಯರಲ್ಲ ಎಂದ ಬಲೂಚಿಗಳು; ಏನಿದು ನೆರೆಯ ದೇಶದ ಬಲೂಚಿಸ್ತಾನ ಹೋರಾಟ?

ಬಲೂಚಿಸ್ತಾನವು ಪಾಕಿಸ್ತಾನದ ಅತಿದೊಡ್ಡ ಪ್ರಾಂತ್ಯವಾಗಿದ್ದರೂ, ಆರ್ಥಿಕ ಮತ್ತು ಸಾಮಾಜಿಕವಾಗಿ ದೇಶದ ಇತರ...

Download Eedina App Android / iOS

X