ಚಿಕ್ಕಮಗಳೂರು | ಮಗಳ ಸಾವಿಗೆ ಕಾರಣ ತಿಳಿಯುತ್ತಿಲ್ಲ, ತನಿಖೆಯೂ ತ್ವರಿತವಾಗಿಲ್ಲ; ಅಮೂಲ್ಯ ಪೋಷಕರ ಅಳಲು

Date:

Advertisements

ನನ್ನ ಮಗಳು ಸಾವನ್ನಪ್ಪಿ 22 ದಿನಗಳು ಕಳಿದಿವೆ. ಆಕೆಯ ಮರಣೋತ್ತರ ಪರೀಕ್ಷೆಯ ವರದಿ ಇನ್ನೂ ಬಂದಿಲ್ಲ. ಪೊಲೀಸರು ತ್ವರಿತವಾಗಿ ತನಿಖೆ ನಡೆಸುತ್ತಿಲ್ಲ. ನನ್ನ ಮಗಳ ಸಾವಿಗೆ ಕಾರಣವೇನೆಂಬುದೇ ಇನ್ನೂ ತಿಳಿದಿಲ್ಲ. ಅವಳ ಸಾವು ಆತ್ಮಹತ್ಯೆಯೇ ಅಥವಾ ಬೇರೆ ಏನಾದರೂ ನಡೆದಿದೆಯೇ ಎಂಬ ಅನುಮಾನವಿದೆ – ಇದು ಕೊಪ್ಪ ತಾಲೂಕಿನ ಮುರಾರ್ಜಿ ವಸತಿ ಶಾಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ವಿದ್ಯಾರ್ಥಿನಿ ಅಮೂಲ್ಯ ತಾಯಿಯ ಅಳಲು.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹರಂದುರಿನ ಮುರಾರ್ಜಿ ವಸತಿ ಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಅಮೂಲ್ಯ ಜುಲೈ 27ರ ಮುಂಜಾನೆ ಶಾಲೆಯ ಶೌಚಾಲಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ತನ್ನ ಮಗಳ ಸಾವಿಗೆ ನಿಖರ ಕಾರಣವೇನೆಂದುತಿಳಿಯದೇ, ಚಿಂತಿಸುತ್ತಿದ್ದಾರೆ.

ತಾಲೂಕಿನ ನಾರ್ವೆ ಸೈಟ್ ನರಸೀಪುರ ಗ್ರಾಮದಲ್ಲಿರುವ ಅಮುಲ್ಯಳ ಮನೆಗೆ ಈದಿನ.ಕಾಮ್ ತಂಡ ಭೇಟಿ ನೀಡಿತ್ತು. ಆದಿ ಕರ್ನಾಟಕ ಸಮುದಾಯಕ್ಕೆ ಸೇರಿದ ಅಮೂಲ್ಯಳ ಪೋಷಕರು ಕೂಲಿ ಕೆಲಸ ಮಾಡಿ ಬದುಕುತ್ತಿದ್ದಾರೆ. ಮಗಳನ್ನು ಕಳೆದುಕೊಂಡಾಗಿನಿಂದ ತಂದೆ ಮಹೇಶ್, ತಾಯಿ ಆಶಾ ಹಾಗೂ ಸಹೋದರನಲ್ಲಿ ದುಖಃ ಮಡುಗಟ್ಟಿದೆ. ತಾಯಿ ದುರ್ಖದಲ್ಲಿಯೇ ಮೂಲೆ ಸೇರಿದ್ದಾರೆ. ತಂದೆ ದಿಕ್ಕುತೋಚದಂತೆ ಕಂಗಾಲಾಗಿದ್ದಾರೆ.

Advertisements
WhatsApp Image 2023 08 18 at 5.31.34 PM

“ಜುಲೈ 27ರಂದು ಮುಂಜಾನೆಯೇ ಶಾಲೆಯಿಂದ ಕರೆ ಬಂತು. ‘ನಿಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ’ ಎಂದು ತಿಳಿಸಿದರು. ಅಷ್ಟು ಚಿಕ್ಕ ವಯಸ್ಸಿನಲ್ಲಿ ಯಾರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆಕೆಗೆ ಅಂತಹ ಯಾವುದೇ ಸಮಸ್ಯೆಯೂ ಇರಲಿಲ್ಲ. ಅಕೆ ಆತ್ಮಹತ್ಯೆ ಮಾಡಿಕೊಳ್ಳುವವಳಲ್ಲ. ಆಕೆಯ ಸಾವಿನ ಬಗ್ಗೆ ನಮಗೆ ಅನುಮಾನವಿದೆ” ಎಂದು ಕಣ್ಣೀರಾಕುತ್ತಲೇ ಅಮುಲ್ಯ ತಾಯಿ ತಿಳಿಸಿದರು.

“ಅಮುಲ್ಯ ಯಾರ ಸಹವಾಸಕ್ಕೂ ಹೋಗುತ್ತಿದ್ದವಳಲ್ಲ. ತಾನಾಯಿತು, ತನ್ನ ಕೆಲಸವಾಯಿತು ಎಂಬಂತಿದ್ದಳು. ಮೊಬೈಲ್‌ ಬಳಸುವ ಗೀಳೂ ಆಕೆಗಿರಲಿಲ್ಲ. ಆಕೆಯ ಸಾವಿಗೂ ಕೆಲವು ದಿನಗಳ ಹಿಂದೆಯಷ್ಟೇ ಹಾಸ್ಟೆಲ್‌ಗೆ ಹೋಗಿ ಮಾತನಾಡಿಸಿಕೊಂಡು ಬಂದಿದ್ದೆವು. ಬುಕ್, ಚಪ್ಪಲಿ, ಕೊಡೆಬೇಕೆಂದು ಕೇಳಿದ್ದಳು. ಅವುಗಳನ್ನು ಕೊಡಿಸಿದ್ದೆವು. ಸಂತೋಷವಾಗಿಯೇ ಇದ್ದಳು. ಅವಳು ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ” ಎಂದು ಅವರು ಹೇಳಿದರು.

“ಮಗಳನ್ನು ಆ ಸ್ಥಿತಿಯಲ್ಲಿ ನೋಡಿದರೆ, ಅನುಮಾನ ಬರುತ್ತಿತ್ತು. ತಲೆ ಕೂದಲು ಸಮೇತ ಹಗ್ಗ ಕಟ್ಟಲು ಸಾಧ್ಯವೇ? ಆಕೆ ಶೌಚಾಲಯಕ್ಕೆ ಹೋಗುವಾಗ ಕಾಲಿಗೆ ಚಪ್ಪಲಿ ಹಾಕುತ್ತಿದ್ದಳು. ಅವತ್ತು ಆಕೆಯ ಕಾಲಿನಲ್ಲಿ ಚಪ್ಪಲಿಯೂ ಇರಲಿಲ್ಲ. ಆಕೆ ಹಗ್ಗ ಕಟ್ಟಿಕೊಂಡಿದ್ದರೆ, ನೆರವಿಗೆ ಬಕೆಟ್‌ಅನ್ನಾದರೂ ಬಳಸಬೇಕಿತ್ತು. ಬಕೆಟ್‌ ಬೀಳಬೇಕಿತ್ತು. ಶಬ್ದ ಬರಬೇಕಿತ್ತು. ಅಲ್ಲದೆ, ಕತ್ತಲೆಯ ಸಮಯದಲ್ಲಿ ಆಕೆ ಒಬ್ಬಳೇ ಓಡಾಡುತ್ತಿರಲಿಲ್ಲ. ಶೌಚಾಲಯಕ್ಕೆ ಹೋಗುವಾಗ ಸ್ನೇಹಿತೆಯರನ್ನು ಕರೆದುಕೊಂಡು ಹೋಗುತ್ತಿದ್ದಳು. ಘಟನೆಯ ದಿನ ಆಕೆಯ ಚಪ್ಪಲಿಗಳು ಮೇಲಿನ ಮಹಡಿಯಲ್ಲಿತ್ತೆಂದು ಆಕೆಯ ಸ್ನೇಹಿತೆಯರು ಹೇಳಿದ್ದಾರೆ. ಇದೆಲ್ಲವೂ ಅನುಮಾನ ಹುಟ್ಟಿಸಿದೆ” ಎಂದು ತಾಯಿ ಹೇಳಿದರು.

WhatsApp Image 2023 08 18 at 5.25.27 PM

“ಮಗಳ ಮರಣೋತ್ತರ ಪರೀಕ್ಷೆಯ ವರದಿ ಇನ್ನೂ ಬಂದಿಲ್ಲ. ಕೇಳದರೆ ಒಂದು ವಾರ ಬಿಟ್ಟು ಬನ್ನಿ ಎಂದು ಹೇಳುತ್ತಾರೆ. ಪೊಲೀಸ್‌ ಠಾಣೆಯಲ್ಲಿ ಕೇಳಿದರೆ, ಸಾಹೇಬ್ರು (ಎಸ್‌ಐ) ರಜೆ ಇದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ, ತನಿಖೆ ನಡೆಸುತ್ತೇವೆಂದು ಹೇಳುತ್ತಾರೆ. ತನಿಖೆಯೇ ಸರಿಯಾಗಿ ನಡೆಯುತ್ತಿಲ್ಲ” ಎಂದು ಅಮುಲ್ಯ ತಂದೆ ಮಹೇಶ್ ಆರೋಪಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಬಿಲ್ಕಿಸ್‌ ಬಾನು ಪ್ರಕರಣ | ಆಯ್ದ ವ್ಯಕ್ತಿಗಳಿಗೆ ಮಾತ್ರ ಏಕೆ ಕ್ಷಮಾದಾನ?; ಗುಜರಾತ್‌, ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ

ದಸಂಸ ಮುಖಂಡರು ಜುಲೈ 31ರಂದು ಚಿಕ್ಕಮಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದು, ತಹಶೀಲ್ದಾರ್‌ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಜಿಲ್ಲಾಧಿಕಾರಿಗೆ ಒತ್ತಾಯಿಸಿದ್ದರು. ಆ ನಂತರ, ಆಗಸ್ಟ್‌ 2ರಂದು ಶೃಂಗೇರಿ ಶಾಸಕರು ಅಮುಲ್ಯ ಕುಟಂಬಸ್ಥರು ಭೇಟಿ ಮಾಡಿ, ಸಾಂತ್ವನ ಹೇಳಿದ್ದರು. ಆಗಸ್ಟ್‌ 4ರಂದು ಸಮಾಜ ಕಲ್ಯಾಣ ಇಲಾಖೆಯಿಂದ 4 ಲಕ್ಷ ರೂ. ಪರಿಹಾರ ಕೊಡಿಸಿದ್ದರು.

ಆಗಸ್ಟ್‌ 17ರಂದು ಈದಿನ.ಕಾಮ್‌ ತಂಡ ಕೊಪ್ಪ ಪೊಲೀಸ್‌ ಠಾಣೆಗೆ ಭೇಟಿ ನೀಡಿ, ಪ್ರಕರಣದ ಬಗ್ಗೆ ವಿಚಾರಿಸಿದ್ದು, “ಇನ್ನೂ ಮರಣೋತ್ತರ ಪರೀಕ್ಷೆ ವರದಿ ಬಂದಿಲ್ಲ. ಮಂಗಳೂರಿನಿಂದ ಬರಬೇಕು. ಒಂದು ತಿಂಗಳು ಆಗಬಹುದು. ವರದಿ ಏನು ಹೇಳುತ್ತದೆಂದು ತಿಳಿದುಕೊಂಡು ತನಿಖೆ ನಡೆಸುತ್ತೇವೆ” ಎಂದು ಠಾಣೆಯ ಸಿಬ್ಬಂದಿ ಉಮಾಶಂಕರ್ ತಿಳಿಸಿದ್ದಾರೆ.

ಹರಂದೂರು ವಸತಿ ಶಾಲೆಗೆ ಭೇಟಿ ನೀಡಿ ಮುಖ್ಯ ಶಿಕ್ಷಕಿ ರಜನಿಯವರೊಂದಿಗೆ ಈದಿನ.ಕಾಮ್ ತಂಡ ಚರ್ಚಿಸಿದೆ. “ಅಮುಲ್ಯ ಜುಲೈ 17ರಂದು ತನಗೆ ನಾಗರ ದೋಷವಿದೆ ಎಂದು ಸ್ನೇಹಿತರೊಂದಿಗೆ ಹೇಳಿಕೊಂಡಿದ್ದಳು. ಅದು ಶಿಕ್ಷಕರಿಗೆ ತಿಳಿದು, ಶಿಕ್ಷಕರು ಇದೆಲ್ಲ ಮೂಢನಂಬಿಕೆ. ಇದನ್ನೆಲ್ಲ ನಂಬಬಾರದು. ತಲೆ ಕೆಡಿಸಿಕೊಳ್ಳಬಾರದು ಎಂದು ತಿಳಿ ಹೇಳಿದ್ದರು. ಆಕೆಯೂ ಅದನ್ನು ಮರೆತು, ಆರಾಮಾಗಿದ್ದಳು. ಆದರೆ, ಇದ್ದಕ್ಕಿದ್ದಂತೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನೆಗೆ ಕಾರಣವೇನೆಂದು ಗೊತ್ತಾಗುತ್ತಿಲ್ಲ. ಘಟನೆಯ ನಂತರ ಶಾಲೆಯಲ್ಲಿಯೂ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಹೆದರಿರುವ ಕೆಲವು ಪೋಷಕರು ತಮ್ಮ ಮಕ್ಕಳನ್ನು ಟಿಸಿ ಪಡೆದುಕೊಂಡು ಕರೆದೊಯ್ಯುತ್ತಿದ್ದಾರೆ. ಪ್ರಕರಣದ ತನಿಖೆಗೆ ಬೇಕಾಗಿರುವ ಮಾಹಿತಿಯನ್ನು ಪೊಲೀಸ್ ಅವರಿಗೆ ಕೊಟ್ಟಿದ್ದೇವೆ” ಎಂದು ಮುಖ್ಯಶಿಕ್ಷಕಿ ತಿಳಿಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಗಿರಿಜಾ ಎಸ್‌ ಜಿ
ಗಿರಿಜಾ ಎಸ್‌ ಜಿ
ಪತ್ರಕರ್ತೆ, ಸಾಮಾಜಿಕ ಕಾರ್ಯಕರ್ತೆ, ಮಹಿಳಾ ಪರ ಹೋರಾಟಗಾರ್ತಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X