ʼʼಮನುಷ್ಯ ಮನುಷ್ಯರ ನಡುವೆ ಸಂಬಂಧವನ್ನು ಬೆಸೆಯುವ ಮಾನವೀಯತೆಯ ಗಾಂಧಿ ವಾದ ಮತ್ತು ಕಮ್ಮುನಿಸ್ಡ್ ಸಿದ್ದಾಂತ ಎರಡು ಒಂದೇ ಮಾದರಿʼʼ ಎಂದು ಕಮ್ಮುನಿಸ್ಟ್ ಪಾರ್ಟಿ ಆಫ್ ಇಂಡಿಯಾದ (ಸಿಪಿಐ) ದಾವಣಗೆರೆ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು ಅಭಿಪ್ರಾಯಪಟ್ಟರು.
ದಾವಣಗೆರೆ ನಗರದ ಅಶೋಕ ರಸ್ತೆಯಲ್ಲಿರುವ ಪಂಪಾಪತಿ ಭವನದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದ (CPI) ದಾವಣಗೆರೆ ಜಿಲ್ಲಾ ಮಂಡಳಿ ನೇತೃತ್ವದಲ್ಲಿಂದು ನಡೆದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 156ನೇ ಜಯಂತಿ ಉದ್ದೇಶಿಸಿ ಮಾತನಾಡಿದ ಅವರು, ʼʼಮಹಾತ್ಮ ಗಾಂಧೀಜಿ ಅವರು ಭಾರತ ದೇಶವನ್ನು ಸ್ವತಂತ್ರಗೊಳಿಸುವಲ್ಲಿ ಅವರು ವಹಿಸಿದ ಪಾತ್ರವನ್ನು ಸ್ಮರಿಸಿದರೆ ಮಹಾತ್ಮ ಗಾಂಧಿ ಯವರು ಮಹಾ ಮಾನವತಾ ವಾದಿಗಳಾಗಿದ್ದರು. ಗಾಂಧಿವಾದ ಮತ್ತು ಕಮ್ಯುನಿಸಂ ಸಿದ್ದಾಂತ ಎರಡು ಒಂದೇ ಆಗಿದ್ದು ಒಬ್ಬ ಮನುಷ್ಯ ಮತ್ತೊಬ್ಬ ಮನುಷ್ಯನನ್ನು ಮನುಷ್ಯನನ್ನಾಗಿ ನೋಡುವ ಸಿದ್ಧಾಂತವಾಗಿದೆʼʼ ಎಂದರು.
ʼʼಕಮ್ಯುನಿಸ್ಟ್ ಪಕ್ಷ ಭಾರತದಲ್ಲಿ ಸ್ಥಾಪನೆಯಾಗಿ 100 ವರ್ಷ ತುಂಬಿರುವ ಈ ಸಂದರ್ಭದಲ್ಲಿ ನಮ್ಮ ಕಾರ್ಯಕರ್ತರು ಮಾನವೀಯತೆ ಮೆರೆಯುವುದರೊಂದಿಗೆ ದುಡಿಯುವ ಎಲ್ಲಾ ವರ್ಗಗಳ ಮನುಷ್ಯನಿಗಿರುವ ಸಂಕೋಲೆಗಳನ್ನು ತೆಗೆದು ಹಾಕುವುದರೊಂದಿಗೆ ಕಮ್ಯುನಿಸಂ ಸಿದ್ದಾಂತವನ್ನು ವಿಸ್ತರಿಸಬೇಕಾಗಿದೆʼʼ ಎಂದರು.

ಸಿಪಿಐ ಜಿಲ್ಲಾ ಸಹಕಾರ್ಯದರ್ಶಿ ಮತ್ತು ರೈತ ಕಾರ್ಮಿಕರ ಕಲ್ಯಾಣಾಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರಾದ ಹೆಚ್ ಜಿ ಉಮೇಶ್ ಮಾತನಾಡಿ ʼʼಪ್ರಸ್ತುತ ಸಂದರ್ಭದಲ್ಲಿ ಮಹಾತ್ಮ ಗಾಂಧಿಯವರ ಆದರ್ಶವನ್ನು ನಾವು ಪಾಲಿಸಬೇಕಾಗಿರುವುದು ಇಂದಿನ ದಿನಗಳಲ್ಲಿ ತುಂಬಾ ಅಗತ್ಯವಿದೆʼʼ ಎಂದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಬೆಸ್ಕಾಂ ಉಗ್ರಾಣದಲ್ಲಿ3.85 ಕೋಟಿ ರೂ ಹಗರಣ: ಸಾಮಗ್ರಿಗಳ ದುರುಪಯೋಗ ದೂರು ದಾಖಲು
ಸಿಪಿಐ ಮುಖಂಡರುಗಳಾದ ಜಿ ಯಲ್ಲಪ್ಪ, ಚಿನ್ನಪ್ಪ, ಸರೋಜಾ, ಎ ತಿಪ್ಪೇಶ್, ರಾಜು ಕೆರನಹಳ್ಳಿ, ರೈಡರ್ ರಂಗಸ್ವಾಮಿ, ಹೆಚ್ ಎಸ್ ಚಂದ್ರು, ಮೌನೇಶಾಚಾರ್, ಚಮನ್ ಸಾಬ್, ಶಿವಕುಮಾರ್ ಶೆಟ್ಟರ್, ಮಹೇಶ್ ತೋಳಹುಣಸೆ, ಆನಂದ್ ಹರಪನಹಳ್ಳಿ, ಏಳುಕೋಟಿ ಇನ್ನು ಮುಂತಾದವರು ಮಹಾತ್ಮ ಗಾಂಧೀಜಿಯವರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.