ಆಂಧ್ರಪ್ರದೇಶ-ಬೆಂಗಳೂರು ಬಸ್‌ನಲ್ಲಿ ಪ್ರಯಾಣಿಕರ ಲ್ಯಾಪ್‌ಟಾಪ್, ಮೊಬೈಲ್ ಸೇರಿದಂತೆ ಇನ್ನಿತರ ದುಬಾರಿ ಬೆಲೆಯ ವಸ್ತುಗಳನ್ನು ಕದಿಯುತ್ತಿದ್ದ ಇಬ್ಬರು ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರು ಮೂಲತಃ ಆಂಧ್ರಪ್ರದೇಶದವರು. ಬಂಧಿತರಿಂದ 39 ಲ್ಯಾಪ್‌ಟಾಪ್‌ಗಳನ್ನು ಕೊಡಿಗೇಹಳ್ಳಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆಂಧ್ರಪ್ರದೇಶ-ಬೆಂಗಳೂರು, ಬೆಂಗಳೂರು-ಆಂಧ್ರಪ್ರದೇಶ ರಾತ್ರಿ ವೇಳೆ ಸಂಚರಿಸುವ ಈ ಬಸ್‌ಗಳಲ್ಲಿ ಕಳ್ಳರು ಹೊಂಚು ಹಾಕಿ ಪ್ರಯಾಣಿಕರು ಮಲಗಿದ್ದಾಗ ಅವರ ಲ್ಯಾಪ್‌ಟಾಪ್, ಮೊಬೈಲ್ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ಕದ್ದು ಪರಾರಿಯಾಗುತ್ತಿದ್ದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | 63 ವರ್ಷದ ಅಜ್ಜಿಗೆ ಪ್ರೀತಿಸಿ ಮೋಸ ಮಾಡಿದ 70 ವರ್ಷದ ಅಜ್ಜ: ದೂರು ದಾಖಲು
ಈ ಆರೋಪಿಗಳು ರಿಸರ್ವ್ ಬಸ್‌ಗಳನ್ನು ಟಾರ್ಗೆಟ್ ಮಾಡುತ್ತಿದ್ದರು. ಇವರು ಕೂಡ ಪ್ರಯಾಣಿಕರ ಸೋಗಿನಲ್ಲಿ ಬಸ್ ಬುಕ್ ಮಾಡಿ ಪ್ರಯಾಣ ಬೆಳೆಸುತ್ತಿದ್ದರು.
ಈ ಬಗ್ಗೆ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ಮಾಡುತ್ತಿದ್ದಾರೆ.