- ಹಬ್ಬಗಳನ್ನು ವೈಜ್ಞಾನಿಕವಾಗಿ ಆಚರಿಸುವಂತೆ ಸಲಹೆ
- ಭಾಲ್ಕಿಯ ಹಿರೇಮಠದಲ್ಲಿ ಬಸವ ಪಂಚಮಿ ಆಚರಣೆ
ಹಬ್ಬಗಳ ಹೆಸರಿನಲ್ಲಿ ಕಲ್ಲನಾಗರ, ಹುತ್ತಕ್ಕೆ ಹಾಲನ್ನು ಹಾಕದೇ ಬಡ ಮಕ್ಕಳು, ನಿರ್ಗತಿಕರಿಗೆ, ಹಿರಿಯರು, ರೋಗಿಗಳಿಗೆ ನೀಡಿದರೆ ಸಾರ್ಥಕವಾಗುತ್ತದೆ. ಹಾವು ಹಾಲು ಕುಡಿಯುವುದಿಲ್ಲ ಎಂಬುದು ವೈಜ್ಞಾನಿಕವಾಗಿ ಸತ್ಯವಾಗಿದೆ ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ನ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಅಭಿಪ್ರಾಯಪಟ್ಟರು.
ಭಾಲ್ಕಿ ಹಿರೇಮಠ ಸಂಸ್ಥಾನದಲ್ಲಿ ಸೋಮವಾರ ಬಸವ ಪಂಚಮಿ ಮತ್ತು ಅಕ್ಕನಾಗಮ್ಮ ಜಯಂತಿ ಕಾರ್ಯಕ್ರಮದಲ್ಲಿ ಹಾನಗಲ್ ಕುಮಾರೇಶ್ವರ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಹಾಲು ವಿತರಿಸಿ ಮಾತನಾಡಿದ ಅವರು, ” ಸಮಾಜದಲ್ಲಿ ಬಹಳಷ್ಟು ಬಡ ಜನರಿಗೆ ಕುಡಿಯಲು ಹಾಲು ಸಿಗುತ್ತಿಲ್ಲ. ಅನೇಕ ಮಕ್ಕಳು ಪೌಷ್ಟಿಕಾಂಶ ಕೊರತೆಯಿಂದ ಬಳಲುತ್ತಿದ್ದಾರೆ. ಮಕ್ಕಳು, ವಯೋವೃದ್ಧರು, ರೋಗಿಗಳು, ಬಡವರು, ನಿರ್ಗತಿಕರಿಗೆ ಹಾಲನ್ನು ನೀಡಿ ಮಾನವರಲ್ಲಿ ನಿಜವಾದ ದೇವರು ಕಾಣಬೇಕು. ನಮ್ಮಲ್ಲಿನ ಮೂಢನಂಬಿಕೆಗಳನ್ನು ತೊಡೆದು ಹಾಕುವ ಮೂಲಕ ವೈಜ್ಞಾನಿಕ ಮತ್ತು ವೈಚಾರಿಕವಾಗಿ ಹಬ್ಬಗಳನ್ನು ಆಚರಿಸಬೇಕು ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ‘ಕೆಕೆಆರ್‌ಡಿಬಿ’ಯಿಂದ ಕೌಶಲ್ಯ ತರಬೇತಿ ಕೇಂದ್ರ ಸ್ಥಾಪನೆ: ಸಚಿವ ಈಶ್ವರ ಖಂಡ್ರೆ
ಈ ಸಂದರ್ಭದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ, ಪ್ರಮುಖರಾದ ಸಂಗಮೇಶ ವಾಲೆ, ಸುನಿಲ ಹೊನ್ನಾಳೆ, ಬಾಬುರಾವ ಹುಣಜೆ, ಬಾಬು ಬೆಲ್ದಾಳ, ಮಲ್ಲಮ್ಮ ನಾಗನಕೇರೆ, ಕೀರ್ತಿ ಶಶಿಧರ ಸೇರಿದಂತೆ ಹಲವರು ಇದ್ದರು