- ಪ್ರವರ್ಗ -1 ರಲ್ಲಿರುವ ಮೊಗೇರ ಜಾತಿ ಪರಿಶಿಷ್ಟ ಜಾತಿ ಪಟ್ಟಿಗೆ ಸೇರ್ಪಡೆ
- ಅಂಬೇಡ್ಕರ್ ಸ್ವಾಭಿಮಾನಿ ಸೇನೆಯಿಂದ ಬಿಸಿಎಂ ಅಧಿಕಾರಿಗೆ ಆಕ್ಷೇಪಣಾ ಪತ್ರ
ಕರ್ನಾಟಕ ರಾಜ್ಯ ವರ್ಗಗಳ ಜಾತಿ ಮೀಸಲಾತಿ ಪಟ್ಟಿಯ ಪ್ರವರ್ಗ -1ರಲ್ಲಿರುವ ಮೊಗೇರ ಜಾತಿಯನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರ್ಪಡೆ ಮಾಡಲಾಗಿದ್ದು, ಯಾವುದೇ ಕಾರಣಕ್ಕೂ ಪರಿಶಿಷ್ಟ ಜಾತಿಗೆ ಮೊಗೇರ ಜಾತಿಯನ್ನು ಸೇರ್ಪಡೆ ಮಾಡದೇ ಕೈಬಿಡಬೇಕೆಂದು ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಯಾದಗಿರಿ ಜಿಲ್ಲಾ ಸಮಿತಿ ಒತ್ತಾಯಿಸಿದೆ.
ಈ ಕುರಿತು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪನಿದೇರ್ಶಕರಿಗೆ ಹಕ್ಕೊತ್ತಾಯ ಪತ್ರವನ್ನು ಸಲ್ಲಿಸಿದರು.
“ರಾಜ್ಯದಲ್ಲಿ ಪ್ರವರ್ಗ -1 ರಲ್ಲಿರುವ ಮೊಗೇರ ಜಾತಿಯನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರ್ಪಡೆ ಮಾಡಲಾಗಿದ್ದು , ಆಕ್ಷೇಪಣೆಗಳಿದ್ದಲ್ಲಿ ಅರ್ಜಿ ಸಲ್ಲಿಸಲು ಆಹ್ವಾನಿಸಿದ್ದು, ಮೊಗೇರ ಜಾತಿಯ ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿ ಪಟ್ಟಿಗೆ ಸೇರ್ಪಡೆ ಮಾಡುವುದು ಸರಿಯಲ್ಲ. ಈಗಾಗಲೇ ಪ.ಜಾತಿಯಲ್ಲಿ ಸುಮಾರು ಉಪಜಾತಿಗಳು ಸೇರಿದ್ದು, ಪ್ರಬಲ ಪಂಗಡಗಳು ಮೀಸಲಾಯಿತಿಯಿಂದ ವಂಚಿತವಾಗುತ್ತಿದ್ದಾರೆ. ಯಾವುದೇ ಕಾರಣಕ್ಕೂ ಮೊಗೇರ ಜಾತಿಯನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಬಾರದು” ಎಂದು ಆಕ್ಷೇಪಿಸಿದರು.
“ಕೂಡಲೇ ಈ ನಿರ್ಧಾರವನ್ನು ಕೈ ಬಿಡಬೇಕು, ಒಂದು ವೇಳೆ ಸೇರ್ಪಡೆ ಮಾಡಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ ? ಯಾದಗಿರಿ | ಕಲುಷಿತ ನೀರಿನ ಬಾಟಲಿ ಹಿಡಿದು ಜಿ.ಪಂ. ಕಚೇರಿ ಎದುರು ಪ್ರತಿಭಟನೆ
ಈ ಸಂದರ್ಭದಲ್ಲಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಜಿಲ್ಲಾಧ್ಯಕ್ಷ ಕಾಶೀನಾಥ್ ನಾಟೇಕರ್ ಸೇರಿದಂತೆ ಸೇನೆಯ ಮೌನೇಶ ಯಡ್ಡಳ್ಳಿ, ಮಲ್ಲಿಕಾರ್ಜುನ ಕುಮನೂರ್, ಹಂಪಯ್ಯ ಶೆಂಗೀನೋರ್ , ಮರೆಪ್ಪ ಗುರಾಸುಣಿಗಿ, ಬಸವರಾಜ್ ಹೆಚ್ ಎನ್, ಹಣಮಂತ ನಾಯಕ, ಭೀಮರಾಯ ಕ್ಯಾತನಾಳ ಸೇರಿದಂತೆ ಇನ್ನಿತರರಿದ್ದರು.