ಚೆಸ್ ವಿಶ್ವಕಪ್ | 2ನೇ ಪಂದ್ಯವೂ​ ಡ್ರಾ: ನಾಳೆ ಟೈಬ್ರೇಕರ್‌ನಲ್ಲಿ ವಿಜೇತರ ನಿರ್ಧಾರ

Date:

Advertisements

ಭಾರತದ ಆರ್​. ಪ್ರಜ್ಞಾನಂದ ಹಾಗೂ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸೆನ್ ನಡುವೆ ಅಝರ್​ಬೈಜಾನ್​ನಲ್ಲಿ ನಡೆಯುತ್ತಿರುವ ಚೆಸ್ ವಿಶ್ವಕಪ್ 2023ರ​ ಫೈನಲ್​ನ 2ನೇ ಪಂದ್ಯ ಕೂಡ ಡ್ರಾನಲ್ಲಿ ಅಂತ್ಯಗೊಂಡಿದೆ.

ಈ ಪಂದ್ಯದ ಮೊದಲ ಪಂದ್ಯ​ ಕೂಡ ಡ್ರಾ ಆಗಿತ್ತು. ಇದೀಗ ಫೈನಲ್ ಪಂದ್ಯದ 2ನೇ ಕ್ಲಾಸಿಕ್ ಆಟ ಕೂಡ ಸಮಬಲದೊಂದಿಗೆ 1-1 ಅಂತರದಿಂದ ಅಂತ್ಯವಾಗಿದೆ. ಹೀಗಾಗಿ ಬುಧವಾರ(ಆಗಸ್ಟ್‌ 24) ನಡೆಯಲಿರುವ ಟೈಬ್ರೇಕರ್ ಪಂದ್ಯದ​ ಮೂಲಕ ಅಂತಿಮ ಫಲಿತಾಂಶವನ್ನು ನಿರ್ಧರಿಸಲಾಗುತ್ತದೆ.

ಮಂಗಳವಾರ ನಡೆದ ಫೈನಲ್ ಪಂದ್ಯದ ಮೊದಲ ಗೇಮ್​ನಲ್ಲಿ ನಾರ್ವೆಯ ಕಾರ್ಲ್​ಸೆನ್ ಅವರನ್ನು ಆರಂಭದಲ್ಲೇ ಪ್ರಜ್ಞಾನಂದ ಅವರು ಒತ್ತಡಕ್ಕೆ ಸಿಲುಕಿಸುವಲ್ಲಿ ಯಶಸ್ವಿಯಾಗಿದ್ದರು. ಅಲ್ಲದೆ ಮೊದಲ ಸುತ್ತು 35 ನಡೆಗಳ ನಂತರ ಡ್ರಾದಲ್ಲಿ ಕೊನೆಗೊಂಡಿತ್ತು.

Advertisements

ಈ ಸುದ್ದಿ ಓದಿದ್ದೀರಾ? ಚೆಸ್‌ನಲ್ಲಿ ಮಿಂಚುತ್ತಿರುವ ತಮಿಳುನಾಡಿನ ಯುವಕ ಪ್ರಜ್ಞಾನಂದ ಬಗ್ಗೆ ನಿಮಗೆಷ್ಟು ಗೊತ್ತು?

ಬುಧವಾರ ನಡೆದ 2ನೇ ಪಂದ್ಯದಲ್ಲಿ ಕಪ್ಪು ಕಾಯಿಗಳೊಂದಿಗೆ ಆಟ ಆರಂಭಿಸಿದ್ದ ಪ್ರಜ್ಞಾನಂದ ಆರಂಭದಲ್ಲೇ ಸಮಬಲದ ಹೋರಾಟ ನಡೆಸಿದ್ದರು. ಕಾರ್ಲ್​ಸೆನ್ ಆಟಕ್ಕೆ ಅತ್ಯುತ್ತಮ ಚೆಕ್​ ನಡೆಗಳ ಮೂಲಕ ಪ್ರಜ್ಞಾನಂದ ಎದುರೇಟು ನೀಡಿದ್ದರು. ಅಂತಿಮವಾಗಿ 22 ನಡೆಗಳ ನಂತರ ಪಂದ್ಯವು ಸಮವಾಗಿತ್ತು. ಈ ಸಮಬಲವನ್ನು ಕಾಯ್ದುಕೊಳ್ಳುವಲ್ಲಿ ಇಬ್ಬರು ಆಟಗಾರರು ಯಶಸ್ವಿಯಾದರು. ಅಲ್ಲದೆ 30 ನಡೆಗಳ ನಂತರ ಪಂದ್ಯವನ್ನು ಡ್ರಾಗೊಳಿಸಲು ಇಬ್ಬರೂ ಆಟಗಾರರು ನಿರ್ಧರಿಸಿದರು.

ಟೈಬ್ರೇಕ್​​ರ್​ನಲ್ಲಿ ಫಲಿತಾಂಶ ಹೇಗೆ?

ಎರಡು ಕ್ಲಾಸಿಕ್ ಗೇಮ್​ಗಳಲ್ಲೂ ಫಲಿತಾಂಶ ಹೊರಬರದ ಕಾರಣ ಪಂದ್ಯವನ್ನು ಟೈಬ್ರೇಕರ್​ನತ್ತ ಕೊಂಡೊಯ್ಯಲಾಗಿದೆ. ಇಲ್ಲಿ ಇಬ್ಬರು ಆಟಗಾರರಿಗೂ 10-10 ನಿಮಿಷಗಳ ರ‍್ಯಾಪಿಡ್ ಗೇಮ್​ಗಳನ್ನು ಆಡಿಸಲಾಗುತ್ತದೆ. ಇದರಲ್ಲೂ ವಿಜೇತ ಯಾರೆಂದು ನಿರ್ಧಾರವಾಗದಿದ್ದರೆ 5 ನಿಮಿಷಗಳ ಎರಡು ರ್‍ಯಾಪಿಡ್​ ಗೇಮ್​ಗಳ ಅವಕಾಶ ನೀಡಲಾಗುತ್ತದೆ.

ಈ ಸುದ್ದಿ ಓದಿದ್ದೀರಾ? ಏಷ್ಯಾ ಕಪ್‌ಗೆ ಭಾರತ ತಂಡ ಪ್ರಕಟ: 18ರ ಬಳಗದಲ್ಲಿ ಇಬ್ಬರು ಕನ್ನಡಿಗರಿಗೆ ಸ್ಥಾನ

ಇನ್ನು ರ‍್ಯಾಪಿಡ್​ ಗೇಮ್​ಗಳು ಕೂಡ ಡ್ರಾಗೊಂಡರೆ ಸಡನ್ ಡೆತ್ ಮೋಡ್‌ನಲ್ಲಿ ಒಂದೇ ಬ್ಲಿಟ್ಝ್ ಗೇಮ್​ ಆಡಲಾಗುತ್ತದೆ. ಇದರಲ್ಲಿ ಗೆದ್ದವರು ಚಾಂಪಿಯನ್ ಆಗಲಿದ್ದಾರೆ. ಹೀಗಾಗಿ ನಾಳಿನ ಪಂದ್ಯ ರೋಚಕತೆ ಪಡೆಯುವ ಸಾಧ್ಯತೆಯಿದೆ.

ಇದಕ್ಕೂ ಮುನ್ನ ವಿಶ್ವದ 3ನೇ ಚೆಸ್ ತಾರೆ ಫ್ಯಾಬಿಯಾನೊ ಕರುವಾನಾ ಅವರೊಂದಿಗೆ ನಡೆದ ಸೆಮಿಫೈನಲ್​ನಲ್ಲಿ ಪ್ರಜ್ಞಾನಂದ ಟೈಬ್ರೇಕರ್​ ಮೂಲಕವೇ ಗೆಲುವು ಸಾಧಿಸಿ ಫೈನಲ್‌ ಪ್ರವೇಶಿಸಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಏಷ್ಯನ್ ಚಾಂಪಿಯನ್‌ಶಿಪ್‌ | 10 ಮೀಟರ್ ಏರ್ ಪಿಸ್ತೂಲ್‌ನಲ್ಲಿ ಕಂಚು ಗೆದ್ದ ಮನು ಭಾಕರ್

ಕಝಾಕಿಸ್ತಾನದ ಶಿಮ್ಕೆಂಟ್‌ನಲ್ಲಿ ನಡೆದ ಏಷ್ಯನ್ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರ 10 ಮೀಟರ್...

ಬುಲಾ ಚೌಧರಿ ಪದ್ಮಶ್ರೀ ಪದಕ ಕಳವು: ‘ಎಲ್ಲವನ್ನೂ ಕಳೆದುಕೊಂಡೆ’ ಎಂದ ಈಜುಪಟು

ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ತಮ್ಮ ಪೂರ್ವಜರ ಮನೆಯಿಂದ ಪದ್ಮಶ್ರೀ ಪದಕ...

RCBಯದ್ದು ಕಳ್ಳ ಒಪ್ಪಂದ; ಆರ್‌ ಅಶ್ವಿನ್ ಬಹಿರಂಗ ಟೀಕೆ

2025ರ ಐಪಿಎಲ್‌ ಟೂರ್ನಿಗಾಗಿ ನಡೆದ ಮೆಗಾ ಹರಾಜಿನ ಸಮಯದಲ್ಲಿ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್...

ದಾವಣಗೆರೆ | ಸರ್ಕಾರಿ ಶಾಲೆ ಮಕ್ಕಳಿಗೆ ಸುಸಜ್ಜಿತ ವ್ಯವಸ್ಥೆ ಸಿಕ್ಕರೆ ಅತ್ಯುನ್ನತ ಸಾಧನೆ, ಸಾಮರ್ಥ್ಯ ಅನಾವರಣ

"ಖಾಸಗಿ ಶಾಲೆಗಳಲ್ಲಿ ಓದುವ ಮಕ್ಕಳಿಗಿಂತ ಸರ್ಕಾರಿ ಶಾಲೆಗಳ ಮಕ್ಕಳು ಯಾವುದರಲ್ಲಿಯೂ ಕಡಿಮೆ...

Download Eedina App Android / iOS

X