ವಿಜಯಪುರ | ಸಮರ್ಪಕ ವಿದ್ಯುತ್ ಪೂರೈಸುವಂತೆ ರೈತಸಂಘ ಒತ್ತಾಯ

Date:

ಪ್ರತಿನಿತ್ಯ ಸಮಯಕ್ಕೆ ಸರಿಯಾಗಿ ವಿದ್ಯುತ್ ಬಾರದೇ ರೈತರು ಬೆಳೆಗಳಿಗೆ ನೀರುಣಿಸಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ. ರಾತ್ರಿ ವೇಳೆಯೂ ಜಮೀನಿನಲ್ಲಿ ನೀರು ಹಾಯಿಸಲು ಹೋಗುವುದರಿಂದ, ಹಾವು-ಚೇಳುಗಳ ಭಯವೂ ಕಾಡುತ್ತಿದೆ. ಹೀಗಾಗಿ, ಬೆಳಗಿನ ವೇಳೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು ಎಂದು ರೈತಸಂಘ ಒತ್ತಾಯಿಸಿದೆ.

ರೈತಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ ಕುಬಕಡ್ಡಿ ಹಾಗೂ ಕಾರ್ಯಕರ್ತರು ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಹಕ್ಕೊತ್ತಾಯ ಸಲ್ಲಿಸಿದ್ದಾರೆ. “ಪ್ರತಿದಿನ 7 ಗಂಟೆಗಳ ಕಾಲ 3 ಫೆಸ್ ಹಾಗೂ ತೋಟದ ಮನೆಗಳಿಗೆ ರಾತ್ರಿ 1 ಪೇಸ್ ವಿದ್ಯುತ್‌ ಪೂರೈಸಬೇಕು” ಎಂದು ಒತ್ತಾಯಿಸಿದರು.

ಕೋಲಾರ ತಾಲೂಕು ಅಧ್ಯಕ್ಷ ಸೋಮು ಬಿರಾದಾರ ಮಾತನಾಡಿ, “ವಿಜಯಪುರ ಜಿಲ್ಲೆಯಲ್ಲಿ ಸಮಯಕ್ಕೆ ಸರಿಯಾಗಿ ವಿದ್ಯುತ್ ಕೊಡದೇ ಮನಸಿಗೆ ಬಂದ ಹಾಗೆ ಮಾಡುತ್ತಿದ್ದಾರೆ. ಅನ್ನದಾತರ ಜೀವನದ ಜೊತೆ ಚಲ್ಲಾಟ ಆಡುತ್ತಿದ್ದಾರೆ. ವಿದ್ಯುತ್ ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಮ ಕೈಕೊಳ್ಳಬೇಕು” ಎಂದು ಆಗ್ರಹಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಪ್ರತಿಭಟನೆಯಲ್ಲಿ ರೇಖಾ ಪಾಟೀಲ, ವಿಜಯಲಕ್ಷ್ಮಿ ಗಾಯಕವಾಡ, ಶಶಿಕಾಂತ ಬಿರಾದಾರ, ಸಿದ್ದು ನ್ಯಾಮಗೊಂಡ, ಕಲ್ಲಪ್ಪ ಪಾರಶೆಟ್ಟಿ, ರಾಮನಗೌಡ ಪಾಟೀಲ, ಶಾನೂರ ನಂದರಗಿ, ಮಹಾದೇವಪ್ಪ ತೇಲಿ, ಅರುಣಗೌಡ ತೇರದಾಳ, ನಜೀರ ನಂದರಗಿ, ಸಂಗು ಹುಣಸಗಿ, ಹಣಮಂತ ಬ್ಯಾಡಗಿ, ಸತ್ಯಪ್ಪ ಕುಳ್ಳೊಳ್ಳಿ, ಸುಭಾಸ ಸಜ್ಜನ, ಸಂಗಪ್ಪ ಠಕ್ಕೆ ಹಾಗೂ ರೈತರು ಉಪಸ್ಥಿತರಿದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ಕಾಂಗ್ರೆಸ್‌ನ ಅಭ್ಯರ್ಥಿ ರಾಜು ಆಲಗೂರ ನಾಮಪತ್ರ ಸಲ್ಲಿಕೆ

ವಿಜಯಪುರ ಲೋಕಸಭಾ ಕ್ಷೇತ್ರದ ಚುನಾವಣೆ ಅಧಿಕಾರಿಯಾಗಿರುವ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರಿಗೆ ಕಾಂಗ್ರೆಸ್‌ನ...

ವಿಜಯಪುರ | ಸಡಗರ ಸಂಭ್ರಮದ ರಂಜಾನ ಹಬ್ಬ ಆಚರಣೆ

ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದಲ್ಲಿ ರಂಜಾನ ಹಬ್ಬವನ್ನು ಮುಸ್ಲಿಂ...

ವಿಜಯಪುರ | ಮಹಾತ್ಮಾ ಜ್ಯೋತಿಬಾ ಫುಲೆ ಜಯಂತಿ ಆಚರಣೆ

ಸುಮಾರು 100 ವರ್ಷಗಳ ಹಿಂದಿನ ಸಮಾಜದಲ್ಲಿ ಜಾತಿ ವವ್ಯಸ್ಥೆ ಬೇರೆ ಬಿಟ್ಟು...

ವಿಜಯಪುರ | ಬಿಟ್ಟಿ ಗ್ಯಾರಂಟಿ ಎನ್ನುತ್ತಿದ್ದವರಿಗೆ ವೇದಾಂತ್ ಉತ್ತರ: ಆಲಗೂರ್

ಕಲಾ ಮಾಧ್ಯಮದಲ್ಲಿ ರಾಜ್ಯದಲ್ಲಿಯೇ ಮೊದಲ ಸ್ಥಾನ ಪಡೆದಿರುವ ಬಿಎಲ್‌ಡಿಇ ಸಂಸ್ಥೆಯ ಎಸ್...