ಪ್ರತಿಯೊಬ್ಬ ವಿಶೇಷಚೇತನರೂ ಐಡಿ ಕಾರ್ಡ್ ಹೊಂದಿಕೊಂಡು ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳಬೇಕು. ಜತೆಗೆ ಸಾವಲಂಬಿಯಾಗಿ ಬದುಕಬೇಕು ಎಂದು ಅರಸೀಕೆರೆ ನಗರಸಭೆ ಅಧ್ಯಕ್ಷ ಗಿರಿಶ್ ತಿಳಿಸಿದರು.
ಹಾಸನ ಜಿಲ್ಲೆ ಅರಸೀಕೆರೆ ನಗರಸಭೆ ಆವರಣದಲ್ಲಿ ಹಮ್ಮಿಕೊಂಡಿದ್ದ ಯುಡಿಐಡಿ ವಿತರಣಾ ಕಾರ್ಯಕ್ರಮ ಹಾಗೂ ಜಾತಾದ ಅದ್ಯಕ್ಷತೆ ವಹಿಸಿ ಮಾತನಾಡಿದರು.
“ಪ್ರತಿಯೊಬ್ಬ ಅಂಗವಿಕಲರಿಗೂ ಬಸ್ ಪಾಸ್, ಬೈಕ್‌ಗಳು ಮತ್ತು ಇತರ ಎಲ್ಲ ಸೌಲಭ್ಯಗಳನ್ನು ಜಾತ ಮಾಡುವುದರ ಮೂಲಕ ಸೌಲಭ್ಯಗಳನ್ನ ಕಲ್ಪಿಸಿಕೊಡುವುದುರ ಜತೆಗೆ ವಿಶೇಷಚೇತನರ ಸಮಸ್ಯೆಗಳನ್ನು ಪರಿಹರಿಸಿಕೊಡುತ್ತೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ನಗರ ಸಾರಿಗೆಗೂ ವಿದ್ಯುತ್ ಚಾಲಿತ ಬಸ್ ಒದಗಿಸುತ್ತೇವೆ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ
ನಗರಸಭಾ ಪೌರಾಯುಕ್ತ ಕೃಷ್ಣಮೂರ್ತಿ ಮಾತನಾಡಿ, “ನಮ್ಮ ಇಲಾಖೆಯಿಂದ ಏನೆಲ್ಲ ಅನುದಾನಗಳು ಬರುತ್ತವೋ ಅವೆಲ್ಲವನ್ನೂ ವಿಶೇಷಚೇತನರಿಗೆ ಮೀಸಲಿಡುವುದರ ಮೂಲಕ ಮತ್ತು ಬೈಕ್‌ಗಳನ್ನು ಕೊಡಿಸುವುದರ ಮೂಲಕ ವಿಶೇಷಚೇತನರಿಗೆ ಸ್ಪಂದಿಸುತ್ತೇವೆ. ಎಲ್ಲರೂ ಕೂಡ ಐಡಿ ಕಾರ್ಡ್ ಮಾಡಿಸುವುದರ ಮೂಲಕ ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳಬೇಕು” ಎಂದು ತಿಳಿಸಿದರು.