2011ರಲ್ಲಿ ಅಲ್ ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ನನ್ನು ಕೊಂದಿರುವುದಾಗಿ ಹೇಳಿಕೊಂಡಿದ್ದ ಅಮೆರಿಕದ ನೌಕಾಪಡೆಯ ಮಾಜಿ ಅಧಿಕಾರಿಯನ್ನು ಪೊಲೀಸರು ಬಂಧಿಸಿದ್ದಾರೆ.
ಈ ವಾರದ ಆರಂಭದಲ್ಲಿ ಟೆಕ್ಸಾಸ್ನಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿ ಗಾಯಗೊಳಿಸಿದ ಆರೋಪದ ಮೇಲೆ ನೌಕಾಪಡೆಯ ಮಾಜಿ ಅಧಿಕಾರಿ ರಾಬರ್ಟ್ ಓ’ನೀಲ್ ಅವರನ್ನು ಬಂಧಿಸಲಾಗಿತ್ತು ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ರಾಬರ್ಟ್ ಓ’ನೀಲ್ ಅವರನ್ನು ಫ್ರಿಸ್ಕೊದಲ್ಲಿ ಬಂಧಿಸಲಾಗಿದ್ದು, ಅದೇ ದಿನ 3,500 ಡಾಲರ್ ಬಾಂಡ್ ಜಾಮೀನಿನ ಆಧಾರದ ಮೇಲೆ ಬಿಡುಗಡೆ ಮಾಡಲಾಯಿತು ಎಂದು ವರದಿ ಹೇಳಿದೆ.
ಈ ಸುದ್ದಿ ಓದಿದ್ದೀರಾ? ಅಸ್ಸಾಂ: ಬಿಜೆಪಿ ಸಂಸದನ ನಿವಾಸದಲ್ಲಿ 10 ವರ್ಷದ ಬಾಲಕನ ಶವ ಪತ್ತೆ
2011 ರಲ್ಲಿ ಪಾಕಿಸ್ತಾನದಲ್ಲಿ ಅಮೆರಿಕ ರಹಸ್ಯ ದಾಳಿಯ ಸಂದರ್ಭದಲ್ಲಿ 9/11ರ ದಾಳಿಯ ರೂವಾರಿ ಅಲ್ ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಅನ್ನು ಕೊಂದು ಗುಂಡು ಹಾರಿಸಿದ್ದು ತಾವೇ ಎಂದು ಓ’ನೀಲ್ ಹೇಳಿಕೊಂಡಿದ್ದರು. ಅವರು ತಮ್ಮ 2017 ರ ಆತ್ಮಚರಿತ್ರೆ “ದಿ ಆಪರೇಟರ್” ನಲ್ಲಿ ಈ ಕಥೆಯನ್ನು ವಿವರಿಸಿದ್ದಾರೆ. ಆದರೆ ಅವರ ಈ ಹೇಳಿಕೆಯನ್ನು ಅಮೆರಿಕ ಸರ್ಕಾರವು ಎಂದಿಗೂ ಖಚಿತಪಡಿಸಿಲ್ಲ ಅಥವಾ ನಿರಾಕರಿಸಿಯೂ ಇಲ್ಲ.
ರಾಬರ್ಟ್ ಓ’ನೀಲ್ ಅವರನ್ನು ಈ ಹಿಂದೆ ಅಂದರೆ 2016 ರಲ್ಲಿ, ಮೊಂಟಾನಾದಲ್ಲಿ ಕುಡಿದು ವಾಹನ ಚಲಾಯಿಸಿದ್ದಕ್ಕಾಗಿ ಬಂಧಿಸಲಾಗಿತ್ತು. ಆದರೆ ಪ್ರಾಸಿಕ್ಯೂಟರ್ಗಳು ಈತನ ಅಪರಾಧವನ್ನು ಸಾಬೀತುಪಡಿಸುವಲ್ಲಿ ವಿಫಲರಾಗಿದ್ದರು.