721 ಮೀ. ಸುರಂಗ ಮಾರ್ಗವನ್ನು ಪೂರ್ಣಗೊಳಿಸಿ ಲ್ಯಾಂಗ್ಫೋರ್ಡ್ ಟೌನ್ ನಿಲ್ದಾಣದಲ್ಲಿ ಸುರಂಗ ಕೊರೆಯುವ ಯಂತ್ರ (ವಮಿಕ) ಆ. 30ರಂದು ಹೊರಬಂದಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್ಸಿಎಲ್), “ಆ. 30ರಂದು 721 ಮೀ ಸುರಂಗ ಮಾರ್ಗವನ್ನು ಪೂರ್ಣಗೊಳಿಸಿ ಲ್ಯಾಂಗ್ಫೋರ್ಡ್ ಟೌನ್ ನಿಲ್ದಾಣದಲ್ಲಿ ವಮಿಕ ಹೊರಬಂದಿದೆ. ಈ ಯಂತ್ರವು ಏ. 21 ರಂದು ಲಕ್ಕಸಂದ್ರ ನಿಲ್ದಾಣದಿಂದ ಕಾಮಗಾರಿ ಪ್ರಾರಂಭಿಸಿತ್ತು. ಈ ಹಿಂದೆ ವಮಿಕ ಟಿ.ಬಿಎಂ ಸೌತ್ ರ್ಯಾಂಪ್ ಮತ್ತು ಡೈರಿ ಸರ್ಕಲ್ ಸುರಂಗ ನಿಲ್ದಾಣಗಳ ನಡುವೆ 613.2 ಮೀ ಹಾಗೂ ಡೈರಿ ಸರ್ಕಲ್ ನಿಲ್ದಾಣದಿಂದ ಲಕ್ಕಸಂದ್ರ ನಿಲ್ದಾಣದ ನಡುವೆ 743.4 ಮೀ ಸುರಂಗ ಕಾಮಗಾರಿ ಪೂರ್ಣಗೊಳಿಸಿದೆ” ಎಂದು ಹೇಳಿದೆ.
ಈ ಸುದ್ದಿ ಓದಿದ್ದೀರಾ? ಬಿಬಿಎಂಪಿ ಅಗ್ನಿ ಅವಘಡ | ಮುಖ್ಯ ಎಂಜಿನಿಯರ್ ಪ್ರಹ್ಲಾದ್ಗೆ ಮತ್ತೊಮ್ಮೆ ನೋಟಿಸ್ ಜಾರಿ ಸಾಧ್ಯತೆ
“ಹಂತ-2, ರೀಚ್-6ರ 20.991 ಕಿ.ಮೀ ಸುರಂಗ ಮಾರ್ಗದಲ್ಲಿ, ಒಟ್ಟು 17.62ಕಿ.ಮೀ ಕಾಮಗಾರಿ ಪೂರ್ಣಗೊಂಡಿದೆ. ರೀಚ್-6 ಸುರಂಗ ಮಾರ್ಗದಲ್ಲಿ ನಿಯೋಜಿಸಲಾದ 9 ಟಿಬಿಎಂಗಳಲ್ಲಿ 6 ಟಿಬಿಎಂಗಳು ಸುರಂಗ ಕಾಮಗಾರಿಯನ್ನು ಪೂರ್ಣಗೊಳಿಸಿವೆ” ಎಂದು ತಿಳಿಸಿದೆ.