ರಾಯಚೂರು ನಗರದಲ್ಲಿ ಟಿಪ್ಪರ್ ಮತ್ತು ಟ್ರ‍್ಯಾಕ್ಟರಗಳು ಅತೀ ವೇಗದಿಂದ ಓಡಾಡುತ್ತಿರುವುದನ್ನು ನಿಯಂತ್ರಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ಮುಖಂಡರು ಒತ್ತಾಯಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.
ನಗರದ ಸುತ್ತ-ಮುತ್ತಲಿನ ಅರಣ್ಯ ಮತ್ತು ಸರ್ಕಾರದ ಗೈರಾಣಿ ಭೂಮಿಯಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ ದಂಧೆ ನಡೆಯುತ್ತಿದೆ. ಕೆಲ ಭೂಮಾಫೀಯ ದಂದೆಕೋರರು ಅಕ್ರಮ ಕೂಟ ರಚನೆ ಮಾಡಿಕೊಂಡು ಸರ್ಕಾರಕ್ಕೆ ಪೆನಾಲ್ಟಿ ಕಟ್ಟದೆ ಸರ್ಕಾರ ಖನಿಜ ಸಂಪತ್ತು ಮರಳನ್ನು ಅಕ್ರಮವಾಗಿ ಕಳ್ಳ ಸಾಗಾಣೆ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
“5 ರಂದ 10 ಟಿಪ್ಪರುಗಳನ್ನು ಇಟ್ಟುಕೊಂಡು ಕೆಲವರು ಮರಳು ಮತ್ತು ಜಲ್ಲಿಯನ್ನು ಓವರ್ ಲೋಡ್ ಹಾಕಿಕೊಂಡು ಸಾಗಿಸುತ್ತಿದ್ದಾರೆ. ಇದರಿಂದ ರಸ್ತೆಗಳು ಹಾಳಾಗುತ್ತಿವೆ. ಅಲ್ಲದೆ, ವಾಹನಗಳು ವೇಗವಾಗಿ ಹೋಗುತ್ತಿರುವುದರಿಂದ ಬೈಕ್ ಸವಾರರಿಗೆ ಮತ್ತು ನಡೆದಾಡುವ ಸಾರ್ವಜನಿಕರಿಗೆ ಕಣ್ಣಲ್ಲಿ ಧೂಳು ಬಿದ್ದು, ರಸ್ತೆ ಅಘಾತಗಳು ಸಂಭವಿಸುತ್ತಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಸಾರಿಗೆ ಅಧಿಕಾರಿಗಳು ಕೂಡ ಕಳ್ಳ ಧಂದೆಕೋರರ ಜೊತೆ ಶಾಮೀಲಾಗಿದ್ದು, ಅಕ್ರಮಗಳನ್ನು ತಡೆಯುವಲ್ಲಿ ವಿಫಲರಾಗಿದ್ದಾರೆ” ಎಂದು ಆರೋಪಿಸಿದ್ದಾರೆ.
ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ತಿಮ್ಮಪ್ಪ ಸ್ವಾಮಿ, ಕಾರ್ಯಾದ್ಯಕ್ಷ ನರಸಿಂಹಲು, ವಿಭಾಗೀಯ ಅಧ್ಯಕ್ಷ ಪ್ರಕಾಶ ಕುಮಾರ, ವಿ.ಎಸ್. ಯಲ್ಲಪ್ಪ, ನವೀನ್ ಕುಮಾರ, ಗೋವಿಂದ, ಸಿದ್ದಪ್ಪ, ನರಸಿಂಹಲು ಸೇರಿದಂತೆ ಅನೇಕರು ಇದ್ದರು.