ಬೆಳಗಾವಿ | ಅಸಮರ್ಪಕ ವಿದ್ಯುತ್ ಪೂರೈಕೆ; ಸಂಪಗಾಂವ ಕಚೇರಿಗೆ ರೈತರಿಂದ ಘೇರಾವ್

Date:

ಬೆಳಗಾವಿ ಜಿಲ್ಲೆಯ ಬೈಹೊಂಗಲ ತಾಲೂಕಿನ ಸಂಪಗಾಂವ ಗ್ರಾಮದ ಕೆಇಬಿಯಿಂದ ಗ್ರಾಮಗಳಿಗೆ ಅಸಮರ್ಪಕ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ ಎಂದು ರೈತರು ಆರೋಪಿಸಿದ್ದಾರೆ. ಸಂಪಗಾಂವದ ಹೆಸ್ಕಾಮ್ ಕಚೇರಿಗೆ ಘೇರಾವ್ ಹಾಕಿ ರೈತ ಸಂಘಟನೆಗಳು ಪ್ರತಿಭಟನೆ ಮಾಡಿದ್ದಾರೆ.

ಸಂಪಗಾಂವ ಕೆಇಬಿ ವ್ಯಾಪ್ತಿಯಲ್ಲಿರುವ ಚಿಕ್ಕಭಾಗೆವಾಡಿ, ಬೆನಚಿನಮರಡಿ, ಗೆದ್ಧಿರೆವನಕೊಪ್ಪ, ಮರಡಿನಾಗಲಾಪೂರ, ಸಂಪಗಾಂವ್ ಗ್ರಾಮಗಳಿಗೆ ಸರಿಯಾಗಿ ವಿದ್ಯುತ್‌ ಪೂರೈಕೆ ಮಾಡುತ್ತಿಲ್ಲ ಎಂದು ರೈತರು ಆರೋಪಿಸಿದ್ದಾರೆ.

ಪ್ರತಿಭಟನೆಯಲ್ಲಿ ಮಾತನಾಡಿದ ರೈತ ಮುಂಡ ಬೀರಪ್ಪ ದೇಶನೂರ, “ಸಂಪಗಾಂವ ಗ್ರಾಮದ ಸುತ್ತಲಿನ ಗ್ರಾಮಗಳಿಗೆ ಸರಿಯಾಗಿ ವಿದ್ಯುತ್ ನಿಡುತ್ತಿಲ್ಲ. ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ರೈತರ ಹಕ್ಕೊತ್ತಾಯ ಪತ್ರ ಸ್ವೀಕರಿಸಿ ಮಾತನಾಡಿದ ಹೆಸ್ಕಾಂನ ಎಇಇ ವೈಶಾಲಿ, “ರೈತರ ಸಮಸ್ಯೆ ಬಗ್ಗೆ ಅರಿತಿದ್ದೇವೆ. ನಾಳೆಯಿಂದ ವಿದ್ಯುತ್‌ ವ್ಯತ್ಯಯವಾಗದಂತೆ ಕ್ರಮ ವಹಿಸುತ್ತೇವೆ” ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಪ್ರಕಾಶಗೌಡ ಪಾಟಿಲ್, ಮಲ್ಲಿಕಾರ್ಜುನ್ ಹುಂಬಿ, ಮಲ್ಲಿಕಾರ್ಜುನ್ ಜುಟ್ಟನವವರ, ಬಸವರಾಜ್ ಹೆಣ್ಣಿಕೇರಿ, ಅರ್ಜುನ್ ಪಡೆನವರ್, ವೆಂಕನಗೌಡ ಪಾಟೀಲ್, ಬಾಹುಬಲಿ ಅಕ್ಕಿ, ಈರಣ್ಣಗೌಡ ದೇ ಪಾಟೀಲ್, ದೇಮನಗೌಡ ಪಾಟೀಲ್, ಉದಯ್ ಚೌಗಲೇ ಇದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳಗಾವಿ | ನೀರಿನ ಸಮಸ್ಯೆ; ಕಟ್ಟಡ ನಿರ್ಮಾಣಕ್ಕೂ ತಟ್ಟಿದ ಬಿಸಿ

ಬೆಳಗಾವಿ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರಿನ ಕೊರತೆಯಿಂದಾಗಿ ನಿರ್ಮಾಣ ಕಾರ್ಯಗಳಿಗೆ...

ಬೆಳಗಾವಿ | ಮನರೇಗಾದಡಿ ಮಹಿಳೆಯರಿಗೆ ಉದ್ಯೋಗ ನೀಡುವಂತೆ ಗ್ರಾ.ಪಂಚಾಯಿಗೆ ಮುತ್ತಿಗೆ

ಬೆಳಗಾವಿ ತಾಲೂಕಿನ ಕಾಳೇನಟ್ಟಿ ಗ್ರಾಮದ ಮಹಿಳೆಯರಿಗೆ ಮನರೇಗಾದಡಿ ಉದ್ಯೋಗ ನೀಡುವಂತೆ ಆಗ್ರಹಿಸಿ...

ಬೆಳಗಾವಿ | ರಾಜ್ಯದಲ್ಲಿ 15ರಿಂದ 20ಸ್ಥಾನ ಗೆಲ್ಲುವ ಗುರಿ ಹೊಂದಿದ್ದೇವೆ; ಸಚಿವ ಸತೀಶ ಜಾರಕಿಹೊಳಿ

ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 15ರಿಂದ 20ಸ್ಥಾನ ಗೆಲ್ಲುವ ಗುರಿ...

ಬೆಳಗಾವಿಗೆ ಜಗದೀಶ ಶೆಟ್ಟರ್‌ರಿಂದ ಅನ್ಯಾಯ: ಟಿಕೆಟ್ ನೀಡದಂತೆ ಒತ್ತಾಯ

ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಯಾಗಿದೆ. ಆದರೂ ಸಹ ಬೆಳಗಾವಿ ಲೋಕಸಭೆಯ ಬಿಜೆಪಿ...