ಕೆರೆಯಲ್ಲಿ ಈಜಲು ಹೋಗಿ ಇಬ್ಬರು ಬಾಲಕಿಯರು ಮೃತಪಟ್ಟ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಪುಲ್ದರ್ ವಾಡಿ ಗ್ರಾಮದಲ್ಲಿ ಬುಧುವಾರ ನಡೆಗಿದೆ.
ಸಕ್ಕುಬಾಯಿ (15) ಹಾಗೂ ಚಾಂದನಿ (15) ಎಂಬ ಇಬ್ಬರು ಹುಡುಗಿಯರು ಎಸ್.ಎಸ್.ಎಲ್ ಸಿ. ತರಗತಿಯಲ್ಲಿ ಓದುತ್ತಿದ್ದರು, ಬುಧುವಾರ ಮುಂಜಾನೆ ಬಟ್ಟೆ ಒಗೆಯಲು ಊರು ಪಕ್ಕದ ಕೆರೆಗೆ ಹೋದ ವೇಳೆ ಈ ದುರ್ಘಟನೆ ಸಂಭವಿಸಿದ್ದು, ಬಾಲಕಿಯರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ನೀರಿಗಿಳಿದು ಬಾಲಕಿಯರ ರಕ್ಷಣೆಗೆ ಮುಂದಾಗಿದ್ದರು, ಆದರೆ ಅಷ್ಟೊತ್ತಿಗೆ ಬಾಳಕಿಯರು ಕೊನೆಯುಸಿರೆಳೆದಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಸಂಬಂಧ ಮಂಠಾಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮೃತ ದೇಹ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂದು ಠಾಣೆಯ ಪೋಲಿಸ್ ರು ಈದಿನ.ಕಾಮ್ ಗೆ ತಿಳಿಸಿದ್ದಾರೆ.