ಗುರುಗ್ರಾಮ | ‘ನಿಮಗಿರುವುದು ಕೇವಲ 2 ದಿನ’; ಮುಸ್ಲಿಮರ ಏರಿಯಾದಲ್ಲಿ ಬೆದರಿಕೆಯ ಪೋಸ್ಟರ್‌ಗಳು

Date:

Advertisements

ಹರಿಯಾಣದ ಗುರುಗ್ರಾಮದ ‘ಮೆಗಾ ಸಿಟಿ’ಯ ಸೆಕ್ಟರ್ 69A ರಲ್ಲಿನ ಮುಸ್ಲಿಂ ಸಮುದಾಯ ವಾಸಿಸುವ ಹಾಗೂ ಕೆಲಸ ಮಾಡುವ ಕೊಳಗೇರಿ ಪ್ರದೇಶಗಳಲ್ಲಿ ಬೆದರಿಕೆ ಒಡ್ಡುವ ಪೋಸ್ಟರ್‌ಗಳನ್ನು ಅಂಟಿಸಲಾಗಿದ್ದು, ಸ್ಥಳೀಯ ನಿವಾಸಿಗಳು ಆತಂಕಕ್ಕೀಡಾಗಿದ್ದಾರೆ.

“ಸ್ಲಂ ನಿವಾಸಿಗಳೇ… ನೀವು ಬೇಗ ಮನೆಗಳನ್ನು ಖಾಲಿ ಮಾಡಿ ಹೊರಡಬೇಕು. ಇಲ್ಲದಿದ್ದರೆ ನೀವು ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ನೀವು ಹೊರಟು ನಿಮ್ಮ ಜೀವವನ್ನು ಉಳಿಸಿಕೊಳ್ಳಿ. ನಿಮಗೆ 2 ದಿನಗಳು ಮಾತ್ರ ಬಾಕಿಯಿವೆ” ಎನ್ನುವ ಪೋಸ್ಟರ್‌ಗಳು 69A ನಲ್ಲಿನ ಕೊಳಗೇರಿ ಪ್ರದೇಶದಲ್ಲಿ ಅಂಟಿಸಲಾಗಿದೆ.

ನಿರ್ದಿಷ್ಟವಾಗಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ಪೋಸ್ಟರ್‌ಗಳು ಅಂಟಿಸಲಾಗಿದೆ. ಇದು ನೆರೆಯ ನುಹ್ ಜಿಲ್ಲೆಯಲ್ಲಿ ಕೋಮು ಘರ್ಷಣೆ ಉಂಟಾದ ಕೆಲವು ದಿನಗಳ ನಂತರದಲ್ಲಿ ಪೋಸ್ಟರ್‌ಗಳು ಕಂಡುಬಂದಿವೆ.

Advertisements

ಸ್ಥಳೀಯ ಪೊಲೀಸರು ಪೋಸ್ಟರ್‌ಗಳನ್ನು ತೆರವುಗೊಳಿಸಿ ಪ್ರಕರಣ ದಾಖಲಿಸಿದ್ದಾರೆ. ಆದರೆ ಸಮುದಾಯದಲ್ಲಿ ಭಯ ಮಾತ್ರ ಕಡಿಮೆಯಾಗಿಲ್ಲ. “ನಾವು ಪೋಸ್ಟರ್‌ಗಳನ್ನು ತೆಗೆದುಹಾಕಿದ್ದೇವೆ ಮತ್ತು ಈ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದ್ದೇವೆ. ಇದುವರೆಗೆ ಯಾರನ್ನೂ ಬಂಧಿಸಿಲ್ಲ ಮತ್ತು ಹೊಣೆಗಾರರನ್ನು ಗುರುತಿಸಲು ಸಾಧ್ಯವಾಗಿಲ್ಲ” ಎಂದು ಸಹಾಯಕ ಪೊಲೀಸ್ ಆಯುಕ್ತ ಮನೋಜ್ ಕುಮಾರ್ ಸುದ್ದಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಕೇಜ್ರಿವಾಲ್‌ ಪ್ರಧಾನಿ ಅಭ್ಯರ್ಥಿ: ಮುಂಬೈ ‘ಇಂಡಿಯಾ’ ಸಭೆಗೂ ಮುನ್ನ ಎಎಪಿ ನಾಯಕರ ಇಂಗಿತ

‘ಮೆಗಾ ಸಿಟಿ’ಯ ಸೆಕ್ಟರ್ 69A ಕೊಳಗೇರಿಯಲ್ಲಿ, ಬಹುಮಹಡಿ ಅಪಾರ್ಟ್ಮೆಂಟ್ ಸಂಕೀರ್ಣಗಳಲ್ಲಿ ಮನೆಯ ಸಹಾಯಕರಾಗಿ ಕೆಲಸ ಮಾಡುವವರು ಹಾಗೂ ಕೂಲಿಕಾರರು ವಾಸ ಮಾಡುತ್ತಿದ್ದಾರೆ. ಪೋಸ್ಟರ್‌ಗಳು ಈ ಪ್ರದೇಶದಲ್ಲಿ ಕಾಣಿಸಿಕೊಂಡ ನಂತರ ಪ್ರದೇಶದಲ್ಲಿ ವಾಸಿಸುವ ಜನರು ಭಯಭೀತಿಯಿಂದ ದಿನದೂಡುವಂತಾಗಿದೆ.   

“ಹಲವು ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದೇವೆ. ನಾವು ನಮ್ಮ ಮಕ್ಕಳ ಬಗ್ಗೆ ಹೆಚ್ಚು ಭಯವಾಗಿದೆ. ನನ್ನ ಪತಿ ಮತ್ತು ನಾನು ಕೆಲಸಕ್ಕೆ ಹೋದಾಗ ಮಕ್ಕಳು ಇಲ್ಲಿ ಒಬ್ಬರೇ ಇರುತ್ತಾರೆ. ನಾವು ಗಲಭೆಯ ನಂತರ ಹಳ್ಳಿಗೆ ಹೋಗಿದ್ದೆವು. ಆದರೆ ಈಗ ಈ ಪೋಸ್ಟರ್‌ಗಳು ಕಾಣಿಸಿಕೊಂಡಿವೆ” ಎಂದು ಮಹಿಳೆಯೊಬ್ಬರು ಮಾಧ್ಯಮಗಳಿಗೆ ತಮ್ಮ ಆತಂಕದ ಬಗ್ಗೆ ತಿಳಿಸಿದ್ದಾರೆ.

ಕಳೆದ ಜುಲೈನಲ್ಲಿ ನುಹ್‌ನಲ್ಲಿ ನಡೆದ ಹಿಂಸಾಚಾರದ ನಂತರ ಈ ಪ್ರದೇಶದಲ್ಲಿ ಆರು ಜನರು ಸಾವನ್ನಪ್ಪಿದರು. ಈ ಪ್ರದೇಶವು ಗುರುಗ್ರಾಮ್‌ ನಗರದ ಅಂಚಿನಲ್ಲಿದೆ. ಕೋಮು ಹಿಂಸಾಚಾರ ಉಂಟಾದ ನಂತರ ಅನೇಕ ಕುಟುಂಬಗಳು ಪ್ರದೇಶವನ್ನು ತೊರೆದಿವೆ. ಇಲ್ಲಿಯೇ ಉಳಿದುಕೊಂಡಿರುವವರಿಗೆ ಈಗ ಆತಂಕ ಹೆಚ್ಚಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸರ್ಕಾರದಿಂದ ನಷ್ಟ ಸರಿದೂಗಿಸಲಾಗದು, ರೈತರೇ ಕಷ್ಟಕ್ಕೆ ಒಗ್ಗಿಕೊಳ್ಳಬೇಕು: ಬಿಜೆಪಿ ನಾಯಕನ ಹೇಳಿಕೆಗೆ ತೀವ್ರ ಆಕ್ರೋಶ

ಇತ್ತೀಚಿಗೆ ಆದ ಅತಿವೃಷ್ಟಿಯಿಂದ ರೈತರಿಗೆ ಆಗಿರುವ ನಷ್ಟಕ್ಕೆ ಸರ್ಕಾರ ಪರಿಹಾರ ನೀಡಲು...

ಏನಿದು ಅನಿಲ್ ಅಂಬಾನಿ ಬ್ಯಾಂಕ್ ವಂಚನೆ? ಕ್ರಮ ಕೈಗೊಳ್ಳುತ್ತಾರ ಮೋದಿ?

ತನ್ನನ್ನು ತಾನು ದಿವಾಳಿ ಎಂದು ಘೋಷಿಸಿಕೊಂಡಿರುವ ಭಾರತದ ಭಾರೀ ಶ್ರೀಮಂತ ಉದ್ಯಮಿ...

ತೆಲಂಗಾಣ | ಅಂತರ್ಜಾತಿ ವಿವಾಹದ ಕಾರಣಕ್ಕೆ ಸಾಮಾಜಿಕ ಬಹಿಷ್ಕಾರ

ಅಂತರ್ಜಾತಿ ವಿವಾಹವಾದ ಕಾರಣಕ್ಕಾಗಿ ಕುಟುಂಬವೊಂದಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ ಪ್ರಕರಣ ತೆಲಂಗಾಣದ...

Download Eedina App Android / iOS

X