ಬೀದರ್‌ | ಸೂಕ್ತ ಸೌಲಭ್ಯ, ಗೌರವಧನ ಒದಗಿಸಲು ಬೆಳೆ ಸಮೀಕ್ಷೆದಾರರ ಒಕ್ಕೂಟ ಒತ್ತಾಯ

Date:

Advertisements
  • ಜಿಲ್ಲೆಯಲ್ಲಿ ಐನೂರಕ್ಕೂ ಅಧಿಕ ಬೆಳೆ ಸಮೀಕ್ಷೆದಾರರಿಂದ ಕಾರ್ಯ ನಿರ್ವಹಣೆ
  • ಎಲ್ಲ ಋತುಮಾನದಲ್ಲೂ ಸಮೀಕ್ಷೆ ನಡೆಸಿದರೂ ಕನಿಷ್ಠ ಗೌರವಧನ ಕೂಡ ಇಲ್ಲ

ಬೀದರ ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲಿ ಪ್ರತಿ ವರ್ಷ ಮುಂಗಾರು, ಹಿಂಗಾರು, ಬೇಸಿಗೆ ಋತುವಿನಲ್ಲಿ ಬೆಳೆ ಸಮಿಕ್ಷೆ ಕಾರ್ಯಕೈಗೊಳ್ಳುತ್ತೇವೆ. ಆದರೆ ಸದರಿ ಬೆಳೆ ಸಮೀಕ್ಷೆ ಕಾರ್ಯ ಸುಗಮ ರೀತಿಯಲ್ಲಿ ಮತ್ತು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಲ್ಲಿ ಹಲವು ಸಮಸ್ಯೆಗಳು ಎದುರಿಸುತ್ತಿದ್ದು, ಕೂಡಲೇ ಸಮಸ್ಯೆಗಳನ್ನು ಬಗೆಹರಿಸುವಂತೆ ಜಿಲ್ಲಾ ಬೆಳೆ ಸಮೀಕ್ಷೆದಾರರು (ಪಿ.ಆರ್)‌ ಆಗ್ರಹಿಸಿದರು.

ಈ ಸಂಬಂಧ ಬೀದರ್ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಹಾಗೂ ಕೃಷಿ ಜಂಟಿ ನಿರ್ದೇಶಕರಿಗೆ ಹಕ್ಕೊತ್ತಾಯ ಪತ್ರವನ್ನು ಸಲ್ಲಿಸಿದರು.

ಕರ್ನಾಟಕ ಸರಕಾರದ ಆದೇಶದಂತೆ ಪ್ರತಿ ವರ್ಷ ಬೀದರ ಜಿಲ್ಲೆಯ ರೈತರ ಪಹಣಿ ಪ್ರತಿಕೆಯಲ್ಲಿ ಬೆಳೆ ನಮೂದು ಆಗಲು ಹಾಗೂ ಪ್ರಧಾನ ಮತ್ರಿ ಫಸಲ್ ಬಿಮಾ ಯೋಜನೆ ಪಡೆಯಲು ಬೆಳೆ ವಿಮೆ ಪಡೆಯಲು ವಿವಿಧ ಬೆಳೆ ಹಾನಿ ಪ್ರಸಂಗಗಳಲ್ಲಿ ಬೆಳೆ ಹಾನಿ ಪರಿಹಾರ ಪಡೆಯಲು ಮಾರುಕಟ್ಟೆಯಲ್ಲಿ ಬೆಳೆ ಮಾರಾಟ ಮಾಡಲು ಬೆಳೆ ಸಮೀಕ್ಷೆ ಅತ್ಯಗತ್ಯವಾಗಿರುತ್ತದೆ. ಸರ್ಕಾರದ ಯೋಜನೆಗಳಿಗೆ ಬೆಳೆ ಸಮೀಕ್ಷೆ ನಡೆಸಲು ಜಿಲ್ಲಾದ್ಯಂತ ಸುಮಾರು ಐನೂರಕ್ಕೂ ಅಧಿಕ ಸಮೀಕ್ಷೆದಾರರು ಕಾರ್ಯ ನಿರ್ವಹಿಸುತ್ತಿದ್ದಾರೆ” ಎಂದು ಹೇಳಿದರು.

Advertisements

ಎಲ್ಲ ಋತುಮಾನದಲ್ಲಿ ಕ್ಷೇತ್ರದಲ್ಲಿ ಬೆಳೆ ಸಮೀಕ್ಷೆ ನಡೆಸುವ ನಮಗೆ ಇಲಾಖೆಯಾಗಲಿ, ಸರ್ಕಾರವಾಗಲಿ ಯಾವುದೇ ಸಂರಕ್ಷಣೆ ನೀಡುತ್ತಿಲ್ಲ. ಅಷ್ಟೇ ಅಲ್ಲದೆ ಕನಿಷ್ಠ ಗೌರವಧನ ಕೂಡ ನೀಡುತ್ತಿಲ್ಲ. ಪಿಯುಸಿ, ಪದವಿ ಮುಗಿಸಿದ ನಮಗೆ ಜೀವನ ನಿರ್ವಹಣೆಗೆ ಸಂಕಷ್ಟ ಅನುಭವಿಸುತ್ತಿದ್ದೇವೆ. ಕೂಡಲೇ ನಮ್ಮ ಸಮಸ್ಯೆಗಳಿಗೆ ಬಗೆಹರಿಸಬೇಕೆಂದು ಒತ್ತಾಯಿಸಿದರು

ಬೇಡಿಕೆಗಳು:

  1. ಬೆಳೆ ಸಮೀಕ್ಷೆ ಕೈಗೊಳ್ಳಲು ಹೋದಾಗ ಹೊಲದಲ್ಲಿ ವಿವಿಧ ವಿಷಜಂತುಗಳಿಂದ ಸುರಕ್ಷಿತ ಕವಚಗಳನ್ನು (ಸೆಫ್ಟಿ ಶೂ ಹಾಗೂ ಇತ್ಯಾದಿಗಳು) ಕೊಡಬೇಕು.
  2. ಪಿ.ಆರ್‌.ಗಳಿಗೆ (PR) ಗುರುತಿನ ಚೀಟಿ ನೀಡಬೇಕು.
  3. ಸುಗಮ ರೀತಿಯಲ್ಲಿ ಬೆಳೆ ಸಮೀಕ್ಷೆ ಕೈಗೊಳ್ಳಲು ಸುಗಮ ರೀತಿಯಲ್ಲಿ ಜಿ.ಪಿ.ಎಸ್ (G.P.S) ನಕ್ಷೆ ವ್ಯವಸ್ಥೆ ಮಾಡಿಕೊಡಬೇಕು.
  4. ಜೀವ ಹಾನಿ ಸಂಭವಿಸಿದಲ್ಲಿ 5 ಲಕ್ಷ ರೂಪಾಯಿ ಜೀವ ವಿಮೆ ಒದಗಿಸಿಕೊಡಬೇಕು.
  5. ಪ್ರತಿ ಪ್ಲಾಟ್‌ ಗೆ 50 ರೂ. ನಿಗದಿಪಡಿಸುವುದು ಅಥವಾ ಪಿ.ಆರ್ ಗಳಿಗೆ ಪ್ರತಿ ತಿಂಗಳಿಗೆ ನಿರ್ದಿಷ್ಟ ಮೊತ್ತ (10,000) ನಿಗದಿಪಡಿಸಬೇಕು.
  6. ಪಿ.ಆರ್‌.ಗಳು ಬೆಳೆ ಸಮೀಕ್ಷೆ ಮಾಡುವ ಸಮಯದಲ್ಲಿ ಫೋನ್ ಹಾಗೂ ಚಾರ್ಚಿಂಗ್ ತೊಂದರೆ ಆಗುತ್ತಿದ್ದು, ಹೊಸ ಮೊಬೈಲ್‌, ಪವರ್‌ ಬ್ಯಾಂಕ್‌ ಕೊಡಿಸಬೇಕು.
  7. ಪ್ರತಿ ವರ್ಷ ಜಿ.ಪಿ.ಎಸ್ (GPS) ನಕ್ಷೆ ಸರ್ವೆ ನಂಬರ ಮೂಲಕ ಬೆಳೆ ಸಮೀಕ್ಷೆ ಮಾಡಲಾಗುತ್ತಿತ್ತು. ಆದರೆ ಈಗ ಹಿಸ್ಸಾ ನಂಬರ ಜಿ.ಪಿ.ಎಸ್ ಮಾಡಲು ತುಂಬಾ ತೊಂದರೆ ಹಾಗೂ ಸಮಯ ವರ್ಥವಾಗುತ್ತಿದೆ. ಈ ಸಮಸ್ಯೆ ಬಗೆಹರಿಸಬೇಕು.

ಈ ಸುದ್ದಿ ಓದಿದ್ದೀರಾ ? ಬೀದರ್‌ | ಅಪ್ರಾಪ್ತ ಮಕ್ಕಳ ಕೈಗೆ ವಾಹನ ನೀಡಿದವರಿಗೆ 25 ಸಾವಿರ ರೂ. ದಂಡ

ಈ ಸಂದರ್ಭದಲ್ಲಿ ಬೀದರ ಜಿಲ್ಲೆಯ ವಿವಿಧ ತಾಲೂಕಿನ ಪಿ.ಆರ್‌ ಗಳಾದ ಲೋಕೇಶ, ಬಸವರಾಜ ಕುಪ್ಪೆ, ಸಂಜುಕುಮಾರ, ವೀರಶೆಟ್ಟಿ, ಏಕನಾಥ ಮೇತ್ರೆ, ನಾಗಶೆಟ್ಟಿ, ಸಂತೋಷ, ಶ್ರೀಕಾಂತ, ಸುಂದರ, ರಮೇಶ, ಸೊಗೇಲ್‌, ದಾವುದ್‌ ಮಿಯ್ಯಾ, ನಾಗರಾಜ, ಕಲ್ಯಾಣಿ, ನರಸಪ್ಪ, ಪ್ರಕಾಶ, ಬಲಭೀಮ, ಮಧುಕರ, ಗುಂಡಪ್ಪ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕಿನ ಬೆಳೆ ಸಮೀಕ್ಷೆದಾರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ನಗರದ ವಿವಿಧ ಬಡಾವಣೆಗಳಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಅಡಿಗಲ್ಲು

ರಾಯಚೂರು ನಗರದ ವಾರ್ಡ್ ನಂ.34ರ ಬಂದೇನವಾಜ ಕಾಲೋನಿ, ದೇವರಾಜ ಅರಸ್ ಕಾಲೋನಿ,...

ಬಳ್ಳಾರಿ | ನಶಿಸಿ ಹೋಗುತ್ತಿರುವ ತೊಗಲುಗೊಂಬೆ ಪ್ರದರ್ಶನ ಉಳಿಸಿ ಬೆಳೆಸಬೇಕು: ಜೋಳದರಾಶಿ ತಿಮ್ಮಪ್ಪ

ನಶಿಸಿ ಹೋಗುತ್ತಿರುವ ತೊಗಲು ಗೊಂಬೆ ಪ್ರದರ್ಶನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ...

ಭಟ್ಕಳ | ಮಗಳ ಅಶ್ಲೀಲ ವಿಡಿಯೊ ವೈರಲ್ ಮಾಡುವುದಾಗಿ ಬೆದರಿಕೆ: ಮೂವರ ಬಂಧನ

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರದ ಕಿದ್ವಾಯಿ ರಸ್ತೆಯೊಂದರ ತರಕಾರಿ ವ್ಯಾಪಾರಿಯನ್ನು...

ಮಂಗಳೂರು | ಸ್ನಾತಕೋತ್ತರದತ್ತ ಮುಖಮಾಡದ ಪದವೀಧರರು: ಪ್ರವೇಶಾತಿ ಗಡುವು ವಿಸ್ತರಣೆ

ನಾಲ್ಕು ದಶಕಗಳಷ್ಟು ಹಳೆಯದಾದ ಮಂಗಳೂರು ವಿಶ್ವವಿದ್ಯಾಲಯ(MU), ನಿರೀಕ್ಷಿತ ಸಂಖ್ಯೆಯ ಪ್ರವೇಶಗಳನ್ನು ಪಡೆಯಲು...

Download Eedina App Android / iOS

X