- ಜಾನಪದ ಸಾಹಿತ್ಯ ಸಂರಕ್ಷಣೆಗೆ ನಾವೆಲ್ಲರೂ ಮುಂದಾಗಬೇಕು
- ಮಹಿಳೆಯರಿಂದ ಜಾನಪದ ಸಾಹಿತ್ಶವನ್ನು ಹೆಚ್ಚು ಶ್ರೀಮಂತಗೊಳಿಸಬಹುದು
ಕವಿವಾಣಿ ಹೂವಾದರೆ ಜನವಾಣಿ ಬೇರು ಎಂಬಂತೆ ಯಾವುದೇ ಭಾಷೆಯಾಗಲಿ ಅದು ಸ್ವಯಂ ಸಹಜ ಭಾವದಿಂದ ಭಾವದೀಪ್ತಿಯಾಗಿ ಬಂದಿರುತ್ತದೆ, ಅದೇ ಜಾನಪದ ಸಾಹಿತ್ಯವಾಗಿ ರೂಪುಗೊಂಡಿದೆ ಎನಿಸುತ್ತದೆ ಎಂದು ವಿಶ್ರಾಂತ ಪ್ರಾಚಾರ್ಯ ಮಹಾದೇವಪ್ಪ ಉಪ್ಪಿನ ಹೇಳಿದರು.
ಚಿಟಗುಪ್ಪ ಪಟ್ಟಣದ ಸದ್ಬೋದಿನಿ ಮಹಿಳಾ ಕಲಾ ಮಹಾವಿದ್ಶಾಲಯದಲ್ಲಿ ತಾಲೂಕಾ ಜಾನಪದ ಪರಿಷತ್ತಿನ ವತಿಯಿಂದ ಹಮ್ಮಿಕೊಂಡ ವಿಶ್ವ ಜಾನಪದ ದಿನಾಚರಣೆ ಅಂಗವಾಗಿ ಅವರು ವಿಶೇಷ ಉಪನ್ಯಾಸ ನೀಡಿ,”ಜನಪದ ಸಾಹಿತ್ಶ ಜನಪದರ ಉಸಿರಿರುವವರೆಗೂ ಜೀವಂತವಿರುತ್ತದೆ ಮತ್ತು ಅದು ಗೇಯಗುಣ ಪ್ರಧಾನವಾಗಿದೆ” ಹೇಳಿದರು.
ತಾಲೂಕಾ ಜಾನಪದ ಪರಿಷತ್ತಿನ ಅಧ್ಶಕ್ಷ ಸಂಗಮೇಶ ಎನ್ ಜವಾದಿ, “ನಿಜವಾದ ಸಾಹಿತ್ಶವೆಂದರೆ ಜಾನಪದ ಸಾಹಿತ್ಶವೇ ಆಗಿದ್ದು, ಜನಪದ ಸಾಹಿತ್ಯ ರಕ್ಷಣೆ ಮಾಡಬೇಕಾಗಿದ್ದು ಎಲ್ಲರ ಆದ್ಯ ಕರ್ತವ್ಯವಾಗಿದೆ. ಹಳ್ಳಿ ಸಂಸ್ಕೃತಿ ಉಳಿಸಿ, ಬೆಳೆಸಬೇಕು, ಇದು ಈ ನಾಡಿನ ನೆಲದ ಮೂಲ ಸಂಸ್ಕೃತಿಯಾಗಿದೆ” ಎಂದರು.
ಸಂಸ್ಥೆಯ ಅಧ್ಯಕ್ಷ ಪ್ರಭುಶೆಟ್ಟಿ ತುಗಾಂವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, “ಮಹಿಳೆಯರಿಂದ ಜಾನಪದ ಸಾಹಿತ್ಶವನ್ನು ಹೆಚ್ಚು ಶ್ರೀಮಂತಗೊಳಿಸಬಹುದು” ಎಂದರು.
ಪರಿಷತ್ತಿನ ಗೌರವ ಅಧ್ಶಕ್ಷ ಮಾರುದ್ರಪ್ಪ ಅಣದೂರೆ, ಪ್ರಾಂಶುಪಾಲೆ ಸಂಗೀತಾ ಪಾಟೀಲ ಮಾತನಾಡಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಯುವ ಜೋಡಿಯ ಬದುಕು ಬೆಳಗಿದ ಎಲ್ಇಡಿ ಬಲ್ಬ್ ಉದ್ಯಮ
ಕಾರ್ಯಕ್ರಮದಲ್ಲಿ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ವಿಜಯಕುಮಾರ್ ಪಾಟೀಲ, ಮುಖ್ಯೋಪಾಧ್ಯಾಯ ರತ್ನಪ್ಪಾ ನೆಲ್ವಾಳೆ, ಉಪನ್ಯಾಸಕ ಶಾಹಿನ ,ತಬಸು ,ರಾಜಕುಮಾರ್ ಸೇರಿದಂತೆ ಪರಿಷತ್ತಿನ ಪದಾಧಿಕಾರಿಗಳು, ವಿದ್ಯಾರ್ಥಿನಿಯರು ಹಾಜರಿದ್ದರು.