ಬೀದರ್‌ | ಜಾನಪದ ಸಾಹಿತ್ಯದಲ್ಲಿ ನೆಲಮೂಲ ಸಂಸ್ಕೃತಿ ಅಡಗಿದೆ: ಸಂಗಮೇಶ ಜವಾದಿ

Date:

  • ಜಾನಪದ ಸಾಹಿತ್ಯ ಸಂರಕ್ಷಣೆಗೆ ನಾವೆಲ್ಲರೂ ಮುಂದಾಗಬೇಕು
  • ಮಹಿಳೆಯರಿಂದ ಜಾನಪದ ಸಾಹಿತ್ಶವನ್ನು ಹೆಚ್ಚು ಶ್ರೀಮಂತಗೊಳಿಸಬಹುದು

ಕವಿವಾಣಿ ಹೂವಾದರೆ ಜನವಾಣಿ ಬೇರು ಎಂಬಂತೆ ಯಾವುದೇ ಭಾಷೆಯಾಗಲಿ ಅದು ಸ್ವಯಂ ಸಹಜ ಭಾವದಿಂದ ಭಾವದೀಪ್ತಿಯಾಗಿ ಬಂದಿರುತ್ತದೆ, ಅದೇ ಜಾನಪದ ಸಾಹಿತ್ಯವಾಗಿ ರೂಪುಗೊಂಡಿದೆ ಎನಿಸುತ್ತದೆ ಎಂದು ವಿಶ್ರಾಂತ ಪ್ರಾಚಾರ್ಯ ಮಹಾದೇವಪ್ಪ ಉಪ್ಪಿನ ಹೇಳಿದರು.

ಚಿಟಗುಪ್ಪ ಪಟ್ಟಣದ ಸದ್ಬೋದಿನಿ ಮಹಿಳಾ ಕಲಾ ಮಹಾವಿದ್ಶಾಲಯದಲ್ಲಿ ತಾಲೂಕಾ ಜಾನಪದ ಪರಿಷತ್ತಿನ ವತಿಯಿಂದ ಹಮ್ಮಿಕೊಂಡ ವಿಶ್ವ ಜಾನಪದ ದಿನಾಚರಣೆ ಅಂಗವಾಗಿ ಅವರು ವಿಶೇಷ ಉಪನ್ಯಾಸ ನೀಡಿ,”ಜನಪದ ಸಾಹಿತ್ಶ ಜನಪದರ ಉಸಿರಿರುವವರೆಗೂ ಜೀವಂತವಿರುತ್ತದೆ ಮತ್ತು ಅದು ಗೇಯಗುಣ ಪ್ರಧಾನವಾಗಿದೆ” ಹೇಳಿದರು.

ತಾಲೂಕಾ ಜಾನಪದ ಪರಿಷತ್ತಿನ ಅಧ್ಶಕ್ಷ ಸಂಗಮೇಶ ಎನ್ ಜವಾದಿ, “ನಿಜವಾದ ಸಾಹಿತ್ಶವೆಂದರೆ ಜಾನಪದ ಸಾಹಿತ್ಶವೇ ಆಗಿದ್ದು, ಜನಪದ ಸಾಹಿತ್ಯ ರಕ್ಷಣೆ ಮಾಡಬೇಕಾಗಿದ್ದು ಎಲ್ಲರ ಆದ್ಯ ಕರ್ತವ್ಯವಾಗಿದೆ. ಹಳ್ಳಿ ಸಂಸ್ಕೃತಿ ಉಳಿಸಿ, ಬೆಳೆಸಬೇಕು, ಇದು ಈ ನಾಡಿನ ನೆಲದ ಮೂಲ ಸಂಸ್ಕೃತಿಯಾಗಿದೆ” ಎಂದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಸಂಸ್ಥೆಯ ಅಧ್ಯಕ್ಷ ಪ್ರಭುಶೆಟ್ಟಿ ತುಗಾಂವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, “ಮಹಿಳೆಯರಿಂದ ಜಾನಪದ ಸಾಹಿತ್ಶವನ್ನು ಹೆಚ್ಚು ಶ್ರೀಮಂತಗೊಳಿಸಬಹುದು” ಎಂದರು. 

ಪರಿಷತ್ತಿನ ಗೌರವ ಅಧ್ಶಕ್ಷ ಮಾರುದ್ರಪ್ಪ ಅಣದೂರೆ, ಪ್ರಾಂಶುಪಾಲೆ ಸಂಗೀತಾ ಪಾಟೀಲ ಮಾತನಾಡಿದರು.

ಈ ಸುದ್ದಿ ಓದಿದ್ದೀರಾ? ಬೀದರ್ | ಯುವ ಜೋಡಿಯ ಬದುಕು ಬೆಳಗಿದ ಎಲ್ಇಡಿ ಬಲ್ಬ್ ಉದ್ಯಮ

ಕಾರ್ಯಕ್ರಮದಲ್ಲಿ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ವಿಜಯಕುಮಾರ್ ಪಾಟೀಲ, ಮುಖ್ಯೋಪಾಧ್ಯಾಯ ರತ್ನಪ್ಪಾ ನೆಲ್ವಾಳೆ, ಉಪನ್ಯಾಸಕ ಶಾಹಿನ ,ತಬಸು ,ರಾಜಕುಮಾರ್ ಸೇರಿದಂತೆ ಪರಿಷತ್ತಿನ ಪದಾಧಿಕಾರಿಗಳು, ವಿದ್ಯಾರ್ಥಿನಿಯರು ಹಾಜರಿದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಎರಡು ಬಾರಿ ಮೋದಿ ಅಲೆಯಲ್ಲಿ ಗೆದ್ದ ಖೂಬಾ ಮತ್ತೆ ಅದೇ ಕನಸು ಕಾಣುತ್ತಿದ್ದಾರೆ : ಸಾಗರ್‌ ಖಂಡ್ರೆ

ಜನರ ಸಮಸ್ಯೆ ಆಲಿಸುವಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ವಿಫಲರಾಗಿದ್ದಾರೆ. ಎರಡು...

ಬೀದರ್‌ |‌ ಸಾಮರಸ್ಯ ಸಮಾಜ ನಿರ್ಮಾಣಕ್ಕೆ ಅಂಬೇಡ್ಕರ್ ಚಿಂತನೆ ಅಡಿಪಾಯ : ಜಗದೀಶ್ವರ ಬಿರಾದರ್

ರಾಷ್ಟ್ರದ ಪ್ರಜೆಗಳ ಸಮಾನತೆಗಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ವಿರಚಿತ ಸಂವಿಧಾನವನ್ನು ಗೌರವಿಸುವುದು...

ಬೀದರ್‌ | ರಾಜ್ಯದಲ್ಲಿ ಸಂಚಲನ ಮೂಡಿಸಿದ ಬಿಜೆಪಿ-ಜೆಡಿಎಸ್‌ ಮೈತ್ರಿ : ಭಗವಂತ ಖೂಬಾ

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ರಾಜ್ಯದಲ್ಲಿ ವಿಶೇಷ ಸಂಚಲನ ಮೂಡಿಸಿದೆ. ಅದು...