ಕಲಬುರಗಿ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ನದಿ, ನಾಲೆಗಳು ತುಂಬಿ ಸೇತುವೆಗಳ ಮೇಲೆ ಹರಿಯುತ್ತಿವೆ. ಹರಿಯುತ್ತಿರುವ ನೀರಿನ ನಡುವೆ ಸೇತುವೆ ದಾಡುತ್ತಿದ್ದ ಯುವಕನೊಬ್ಬ ನೀರಿನಲ್ಲಿ ಕೊಚ್ಚಿಹೋಗಿದ್ದು, ಆತನನ್ನು ಬಲೆ ಹಾಕಿ ಗ್ರಾಮಸ್ಥರು ರಕ್ಷಿಸಿರುವ ಘಟನೆ ಚಿಂಚೋಳಿ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ದೋಟಿಕೋಳ ಗ್ರಾಮದ ಸೇತುವೆ ಮೇಲೆ ಬಿರುಸಾಗಿ ನೀರು ಹರಿಯುತ್ತಿತ್ತು. ಆ ನೀರಿಯಲ್ಲಿಯೇ ರಮೇಶ್ ಎಂಬ ಯುವಕ ಸೇತುವೆ ದಾಟಲು ಮುಂದಾಗಿದ್ದಾನೆ. ಈ ವೇಳೆ, ನೀರಿನ ರಭಸಕ್ಕೆ ಕೊಚ್ಚಿಹೋಗಿದ್ದಾನೆ.
ಇದನ್ನು ಗಮನಿಸಿದ ಗ್ರಾಮಸ್ಥರು ಕೂಡಲೇ ಹಂದಿ ಹಿಡಿಯುವ ಬಲೆ ಹಾಕಿ, ಆತನನ್ನು ರಕ್ಷಿಸಿದ್ದಾರೆ.