- ವೈದ್ಯರ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪಿಗಳಿಗೆ ಬಂಧಿಸಿದ ರಾಯಚೂರು ಪೊಲೀಸರು.
- ರಾಯಚೂರುನ ಬೆಟ್ಟದೂರು ಆಸ್ಪತ್ರೆ ವೈದ್ಯ ಡಾ.ಜಯಪ್ರಕಾಶ ಪಾಟೀಲ್ ರವರ ಮೇಲೆ ಗುಂಡಿನ ದಾಳೆ ಪ್ರಕರಣ
ರಾಯಚೂರು ನಗರದ ಬೆಟ್ಟದೂರು ಆಸ್ಪತ್ರೆಯ ಡಾ.ಜಯಪ್ರಕಾಶ ಪಾಟೀಲ್ ರವರ ಮೇಲೆ ಗುಂಡಿನ ದಾಳಿ ಮಾಡಿ ಪರಾರಿಯಾಗಿದ್ದ ಇಬ್ಬರು ಆರೋಪಿತರನ್ನು ಬಂಧಿಸಲಾಗಿದೆ ಎಂದು ಬಳ್ಳಾರಿ ವಲಯ ಐಜಿಪಿ ಲೋಕೇಶ ಕುಮಾರ ಹೇಳಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇ ರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಆ.31ರಂದು ಬೆಟ್ಟದೂರು ಆಸ್ಪತ್ರೆಯಿಂದ ಮಾನ್ವಿ ಕಡೆಗೆ ಹೋಗುತ್ತಿರುವ ವೇಳೆ ವೈದ್ಯರ ಮೇಲೆ ಬೈಕ್ ಮೇಲೆ ಬಂದ ಇಬ್ಬರು ದುಷ್ಕರ್ಮಿಗಳು ಸಾಥ್‌ಮೈಲ್ ಹತ್ತಿರ ಪಿಸ್ತೂಲ್ ನಿಂದ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದರು, ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ದುಷ್ಕರ್ಮಿಗಳ ಬಂಧನಕ್ಕೆ ತಂಡ ರಚಿಸಿ ಇಬ್ಬರು ಆರೋಪಿಗಳಿಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ “ಎಂದರು.
“ಶರ್ಫುದ್ದಿನ್ ಮತ್ತು ಕಮರುದ್ದೀನ್ ಬಂಧಿತ ಆರೋಪಿಗಳಾಗಿದ್ದಾರೆ. ಡಾ.ಜಯಪ್ರಕಾಶ ಪಾಟೀಲ್ ಅವರು ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರೊಫೈಲ್ ಚೆಕ್ ಮಾಡಿದ್ದಾರೆ. ಪ್ರಸಿದ್ಧ ವೈದ್ಯರೆಂದು ತಿಳಿದು ಅವರ ಬಗ್ಗೆ ಮಾಹಿತಿ ಪಡೆದು ಆಸ್ಪತ್ರೆ ಮತ್ತು ಅವರ ಮೊಬೈಲ್ ನಂಬರ್ ಪಡೆದುಕೊಂಡು ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದರು. ವೈದ್ಯರು ಯಾವುದೇ ಪ್ರತಿಕ್ರಿಯೆ ನೀಡದೇ ಇರುವುದರಿಂದ ಅವರನ್ನು ಹಿಂಬಾಲಿಸಿಕೊಂಡು ಬಂದು ಹೆದರಿಸುವ ಉದ್ದೇಶದಿಂದ ಅಡ್ಡಗಟ್ಟಿ ಪಿಸ್ತೂಲ್ ನಿಂದ ಗುಂಡಿನ ದಾಳಿ ನಡೆಸಿದ್ದರು. ಬಂಧಿತ ಆರೋಪಿಗಳಿಂದ ಪಿಸ್ತೂಲ್ ಮತ್ತು ಬೈಕ್ ಮತ್ತು ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆದುಕೊಂಡು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಲಾಗಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಗೌರಿ ನೆನಪು | ಅನಾಮಿಕ ಅಮಾಯಕ ಜನಗಳ ಮನದಾಳದಲ್ಲಿ ಗೌರಿ
ಈ ಸಂದರ್ಭದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಬಿ.ನಿಖಿಲ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶಿವಕುಮಾರ, ಡಿ.ಎಸ್.ಪಿ ಎಸ್.ಬಿ.ಪತ.ನಾರಾಯಣ ರಾವ್, ಸಿಪಿಐ. ಉಪಸ್ಥಿತರಿದ್ದರು.
ವರದಿ: ಹಪ್ಪಿಜುಲ್ಲಾ, ಸಿಟಿಜನ್ ಜರ್ನಲಿಸ್ಟ್