ಹಾಸನ ಜಿಲ್ಲಾ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಮೊಹಮ್ಮದ್ ಸುಜೀತ ಅವರು ನೇಮಕಗೊಂಡಿದ್ದಾರೆ. ಈಓ ಹಿಂದೆ ಇದ್ದ ಹರಿರಾಂ ಶಂಕರ್ ಅವರ ವರ್ಗಾವಣೆಯಿಂದ ತೆರವಾಗಿದ್ದ ಸ್ಥಾನಕ್ಕೆ ಸುಜೀತ್ ಅವರನ್ನು ನೇಮಿಸಿ ಸರ್ಕಾರ ಆದೇಶಿಸಿದೆ.
2014ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಮೊಹಮ್ಮದ್ ಸುಜೀತ ಅವರು ಈ ಹಿಂದೆ ಬೆಂಗಳೂರು ದಕ್ಷಿಣದ ಸಂಚಾರ ವಿಭಾಗದ ಡಿಸಿಪಿಯಾಗಿದ್ದರು.
ಹರಿರಾಂ ಶಂಕರ್ ಅವರನ್ನು ಗುಪ್ತಚರ ಇಲಾಖೆ ಎಸ್ಪಿಯಾಗಿ ನಿಯೋಜನೆ ಮಾಡಲಾಗಿದೆ.