ಹಾಸನ | ಸೇಬು, ಮೋಸಂಬಿ ಹಣ್ಣಿನೊಳಗೆ ಗಾಂಜಾ; ಜೈಲಿನೊಳಗೆ ಎಸೆಯಲು ಯತ್ನಿಸಿದ ಇಬ್ಬರ ಬಂಧನ

Date:

Advertisements

ಜೈಲಿನಲ್ಲಿದ್ದ ಕೈದಿಗಳ ಬಳಿ ಮಾದಕ ವಸ್ತುಗಳನ್ನು ಪತ್ತೆಹಚ್ಚಿದ್ದ ಪೊಲೀಸರು ಇದೀಗ ಜೈಲಿನೊಳಗೆ ಮಾದಕ ವಸ್ತು ಹೋಗುವುದನ್ನೇ ತಡೆಯಲು ಮುಂದಾಗಿದ್ದು, ಹಣ್ಣುಗಳೊಳಗೆ ಗಾಂಜಾ ಇಟ್ಟು ಜೈಲಿನ ಕಾಂಪೌಂಡ್ ಒಳಗೆ ಎಸೆಯಲು ಯತ್ನಿಸಿದ ಇಬ್ಬರು ವ್ಯಕ್ತಿಗಳನ್ನು ಹಾಸನ ಪೊಲೀಸರು ಬಂಧಿಸಿದ್ದಾರೆ.

ಸೇಬು ಹಾಗೂ ಮೋಸಂಬಿ ಹಣ್ಣಿನ ಒಳಗೆ ಗಾಂಜಾ ಸೊಪ್ಪಿನ ಪ್ಯಾಕೆಟ್‌ಗಳನ್ನಿಟ್ಟು ಅವುಗಳಿಗೆ ಸ್ಟಿಕ್ಕರ್‌ನ್ನು ಅಂಟಿಸಿ, ಜೈಲಿನ ಕಾಂಪೌಂಟ್‌ ಒಳಗಡೆಗೆ ಎಸೆಯಲು ಹೋಗುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ, ತನಿಖೆ ನಡೆಸುತ್ತಿದ್ದಾರೆ. ಅಂಬೇಡ್ಕರ್ ನಗರದ ತರಕಾರಿ ವ್ಯಾಪಾರಿ ತಬ್ರೇಜ್ (28), ಪೆನ್‌ಷನ್ ಮೊಹಲ್ಲಾದ ಗುಜರಿ ಅಂಗಡಿ ವ್ಯಾಪಾರಿ ವಾಸಿಂ (21) ಬಂಧಿತ ಆರೋಪಿಗಳು.

ಈ ಸುದ್ದಿ ಓದಿದ್ದೀರಾ? ಸೌಜನ್ಯ ಪ್ರಕರಣ | ಮರು ತನಿಖೆಗೆ ಆಗ್ರಹಿಸಿ ಬಿಜೆಪಿ ನಿಯೋಗದಿಂದ ರಾಜ್ಯಪಾಲ, ಮುಖ್ಯಮಂತ್ರಿಗೆ ಮನವಿ

Advertisements

ಭಾನುವಾರ ಮಧ್ಯಾಹ್ನದ ವೇಳೆಯಲ್ಲಿ ಸೇಬು ಹಾಗು ಮೂಸಂಬಿ ಹಣ್ಣನ್ನು ಕೊರೆದು ಅದರೊಳಗೆ ಗಾಂಜಾಸೊಪ್ಪನ್ನು ಇಟ್ಟು, ಜೈಲಿನ ಹಿಂದಿಯಿಂದ ಕಾಂಪೌಂಡ್ ಒಳಗೆ ಎಸೆಯಲು ಇಬ್ಬರು ಆರೋಪಿಗಳು ಹೊಂಚು ಹಾಕುತ್ತ ಜೈಲು ಸಮೀಪದ ನಗರದ ಹಳೇಬಸವಣ್ಣ ವೃತ್ತದ ಬಳಿ ಓಡಾಡುತ್ತಿದ್ದರು. ಈ ವೇಳೆ ನಗರ ಠಾಣೆ ಪಿಎಎಸ್‌ಐ ರೇವಣ್ಣ ಹಾಗೂ ಸಿಬ್ಬಂದಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದವರನ್ನು ವಿಚಾರಿಸಿ ಅವರ ಬಳಿಯಿದ್ದ ಬ್ಯಾಗ್ ಪರಿಶೀಲಿಸಿದಾಗ ಗಾಂಜಾ ತುಂಬಿದ್ದ 3 ಸೇಬು ಮತ್ತು 2 ಮೋಸುಂಬಿ ಹಣ್ಣು ಪತ್ತೆಯಾಗಿವೆ. ಈ ಬಗ್ಗೆ ವಿಚಾರಣೆ ನಡೆಸಿದಾಗ ಜೈಲ್‌ನೊಳಗೆ ಎಸೆಯಲು ಯತ್ನಿಸುತ್ತಿದ್ದುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಗಾಂಜಾ ವಶಪಡಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾರೀ ಮಳೆ | ಸಕಲೇಶಪುರ, ಬೇಲೂರು, ಆಲೂರು ತಾಲೂಕಿನ ಅಂಗನವಾಡಿ, ಶಾಲೆಗಳಿಗೆ ರಜೆ ಘೋಷಣೆ

ಹಾಸನ ಜಿಲ್ಲಾದ್ಯಂತ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಸಕಲೇಶಪುರ, ಬೇಲೂರು ಹಾಗೂ...

ಸಕಲೇಶಪುರ | ಶಿರಾಡಿ ಘಾಟ್ ಬಳಿ ಗುಡ್ಡ ಕುಸಿತ: ವಾಹನ ಸಂಚಾರ ಸ್ಥಗಿತ, ಬದಲಿ ಮಾರ್ಗ ಬಳಕೆಗೆ ಸೂಚನೆ

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ(NH-75)ಯ ದೊಡ್ಡತಪ್ಪಲೆಯಲ್ಲಿ ಭಾರೀ...

ಪಕ್ಷದ ವಿಪ್ ಉಲ್ಲಂಘನೆ; ಹಾಸನದ ಪ್ರಥಮ ಮೇಯರ್ ಚಂದ್ರೇಗೌಡ ಅನರ್ಹ

ಪಕ್ಷಾಂತರ ನಿಷೇಧ ಕಾಯ್ದೆ ಉಲ್ಲಂಘನೆ ವಿಚಾರವಾಗಿ ಹಾಸನ ಮಹಾ ನಗರ ಪಾಲಿಕೆ...

ಹಾಸನ | ವರ್ಷಾಂತ್ಯದ ವೇಳೆಗೆ 2 ಲಕ್ಷ ಮಂದಿಗೆ ಭೂಮಿ ಮಂಜೂರು ಗುರಿ: ಸಚಿವ ಕೃಷ್ಣ ಬೈರೇಗೌಡ

ಈ ವರ್ಷಾಂತ್ಯದ ವೇಳೆಗೆ ರಾಜ್ಯದಲ್ಲಿ 2 ಲಕ್ಷ ದರಕಾಸ್ತು ಪೋಡಿ ಸರ್ವೆ...

Download Eedina App Android / iOS

X