ದೇಶದ ಹೆಸರನ್ನು ಅಧಿಕೃತವಾಗಿ ‘ಇಂಡಿಯಾ’ ಎಂದು ಕರೆಯದೇ ‘ಭಾರತ್’ ಎಂದು ಬದಲಿಸುವ ಬಗ್ಗೆ ಸಾಕಷ್ಟು ಪರ-ವಿರೋಧ ಚೆರ್ಚೆಗಳು ನಡೆಯುತ್ತಿವೆ. ಇದೇ ಹೊತ್ತಿನಲ್ಲಿ ʼಒಂದು ದೇಶ, ಒಂದು ಚುನಾವಣೆʼ ಎಂಬ ಪರಿಕಲ್ಪನೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಹವಣಿಸುತ್ತಿದೆ. ಕೇಂದ್ರ ಈ ಎರಡೂ ನಿರ್ಧಾರಗಳನ್ನು ವಿಪಕ್ಷಗಳು ತೀವ್ರವಾಗಿ ಖಂಡಿಸಿವೆ. ಆದರೆ, ಈ ನಡುವೆ ರಾಜ್ಯದ ಕಾಂಗ್ರೆಸ್ ಶಾಸಕರೊಬ್ಬರು ʼಒಂದು ದೇಶ ಒಂದು ಚುನಾವಣೆʼ ಪರಿಕಲ್ಪನೆಯನ್ನು ಸ್ವಾಗತಿಸಿದ್ದಾರೆ.
ದೇಶದ ಹೆಸರು ಬದಲಾವಣೆ ಹಾಗೂ ಒಂದು ದೇಶ ಒಂದು ಚುನಾವಣೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಜಯನಗರದ ಕಾಂಗ್ರೆಸ್ ಶಾಸಕ ಎಚ್ ಆರ್ ಗವಿಯಪ್ಪ, “ರಿಪಬ್ಲಿಕ್ ಆಫ್ ಇಂಡಿಯಾ ಬದಲು ʼಭಾರತ್ʼ ಎಂದು ಬಳಕೆ ಮಾಡಿದ್ದಾರೆ. ಒಂದು ದೇಶ ಒಂದು ಚುನಾವಣೆ ಒಳ್ಳೆಯ ವಿಚಾರವೇ. ನನ್ನ ವೈಯುಕ್ತಿಕ ವಿಚಾರದಲ್ಲಿ ಒಳ್ಳೆಯದು. ಹಣ ಉಳಿಯುತ್ತದೆ. ಅದರ ಜತೆಗೆ ಸಮಯವೂ ಉಳಿಯುತ್ತದೆ. ನನ್ನ ವೈಯುಕ್ತಿಕ ಅಭಿಪ್ರಾಯವನ್ನು ನಾನು ಹೇಳಿದ್ದೇನೆ. ಪಕ್ಷ ಏನು ತೀರ್ಮಾನ ಮಾಡುತ್ತದೆಯೋ ಅದಕ್ಕೆ ನಾವು ಬದ್ಧರಾಗಿರುತ್ತೇವೆ” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೀಸಲಾತಿ ಪ್ರಮಾಣವನ್ನು ಶೇ.50 ಕ್ಕಿಂತ ಹೆಚ್ಚಿಸಲು ಅಗತ್ಯ ಕ್ರಮ: ಸಿಎಂ ಭರವಸೆ