ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕು ಕುಂಚಿಟಿಗರ ಕ್ಷೇಮಾಭಿವೃದ್ಧಿ ಸಂಘ ಮತ್ತು ಕರ್ನಾಟಕ ರಾಜ್ಯ ಕುಂಚಿಟಿಗರ ಒಕ್ಕೂಟದ ಕಾರ್ಯಕರ್ತರು ಸೆಪ್ಟೆಂಬರ್ 6ರ ಬೆಳಿಗ್ಗೆಯಿಂದ ಸಂಜೆವರೆಗೆ ಹಿರಿಯೂರು ತಾಲೂಕು ಕಚೇರಿ ಮುಂಭಾಗ ಗಾಂಧೀವಾದಿ ಕಸವನಹಳ್ಳಿ ರಮೇಶ್ ನೇತೃತ್ವದಲ್ಲಿ ಸಮುದಾಯಕ್ಕಾಗಿ ಒಂದು ದಿನ ಕುಂಚಿಟಿಗ ಕುಲಶಾಸ್ತ್ರ ಅಧ್ಯಯನ ವರದಿ ಯಥಾವತ್ ಜಾರಿಗಾಗಿ ಹಕ್ಕೊತ್ತಾಯ ಮಾಡುವ ಉಪವಾಸ ಸತ್ಯಾಗ್ರಹಕ್ಕೆ ಕುಂಚಿಟಿಗ ಕುಲಶಾಸ್ತ್ರ ಅಧ್ಯಯನಕಾರ ಎಸ್ ವಿ ರಂಗನಾಥ್ ಚಾಲನೆ ನೀಡಿದರು.
ಕುಂಚಿಟಿಗ ಕುಲಶಾಸ್ತ್ರ ಅಧ್ಯಯನ ವರದಿ ಪ್ರಕಾರ ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿ, ರಾಜ್ಯ ಸರ್ಕಾರದ ಪ್ರವರ್ಗ-1ರಲ್ಲಿ ಮೀಸಲಾತಿ, ಕುಂಚಿಟಿಗರ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಬೇಕೆಂಬ ಬೇಡಿಕೆ ಇಟ್ಟು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕು ಕಚೇರಿ ಎದುರು ಸತ್ಯಾಗ್ರಹ ನಡೆಸಿದರು.
“ಉಪವಾಸ ಸತ್ಯಾಗ್ರಹಕ್ಕೆ ಚಿತ್ರದುರ್ಗ ಮಾಜಿ ಶಾಸಕ ಜಿ ಹೆಚ್ ತಿಪ್ಪಾರೆಡ್ಡಿ, ಮಾಜಿ ಸಂಸದ ಚಂದ್ರಪ್ಪ ಆಗಮಿಸಿ ಬೆಂಬಲ ಸೂಚಿಸಿದರು. ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಆಗಮಿಸಿ ಬೆಂಬಲ ನೀಡಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಕುಂಚಿಟಿಗ ಕುಲಶಾಸ್ತ್ರ ಅಧ್ಯಯನ ವರದಿ ಯಥಾವತ್ ಜಾರಿಗಾಗಿ ಸ್ಥಳದಲ್ಲಿಯೇ ಪತ್ರ ಬರೆದು ಬೆಂಬಲ ಸೂಚಿಸಿದರು.
“ಕುಂಚಿಟಿಗ ಸಮಾಜದ ಒಬಿಸಿ ಪ್ರಾತಿನಿಧ್ಯಕ್ಕೆ ಸತ್ಯಾಗ್ರಹ ನಡೆಸುತ್ತಿದ್ದು, ಸರ್ಕಾರ ಗಮನಹರಿಸಿ ಸಮಾಜಕ್ಕೆ ನ್ಯಾಯ ನೀಡಬೇಕು. ಈ ಹೋರಾಟಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸುಧಾಕರ್ ಸಕಾರಾತ್ಮಕವಾಗಿ ಸ್ಪಂದಿಸಿ ಮನವಿ ಪರಿಗಣಿಸುವುದಾಗಿ ತಿಳಿಸಿದ್ದಾರೆ. ಮಾಜಿ ಸಂಸದ ಚಂದ್ರಪ್ಪ,ಮಾಜಿ ಶಾಸಕ ತಿಪ್ಪಾರೆಡ್ಡಿ ಕೂಡ ಬೆಂಬಲ ಸೂಚಿಸಿದ್ದಾರೆ” ಎಂದು ಕುಂಚಿಟಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಂಗನಾಥ್ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಹಾವೇರಿ | ರೈತರ ಸಾಲ ಮನ್ನಾ ಮಾಡಿದರೆ ಮಾತ್ರ ಮೋದಿ ಮತ್ತೆ ಪ್ರಧಾನಿ ಆಗಲು ಸಾಧ್ಯ: ಉಡಚಪ್ಪ ಮಾಳಗಿ
ಕುಂಚಿಟಿಗರ ರಾಜ್ಯ ಒಕ್ಕೂಟದ ಅಧ್ಯಕ್ಷ ಕಸವನಹಳ್ಳಿ ರಮೇಶ್ ಮತ್ತು ಸಂಗಡಿಗರು ಉಪವಾಸ ಸತ್ಯಾಗ್ರಹ ನಡೆಸಿದರು. ಈ ಸಂದರ್ಭದಲ್ಲಿ ಕುಂಚಿಟಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಂಗನಾಥ್ ತಿಳಿಸಿದ್ದಾರೆ
ಪ್ರಧಾನ ಕಾರ್ಯದರ್ಶಿ ವಿ.ಕುಭೇರಪ್ಪ, ಗೌರವಾಧ್ಯಕ್ಷ ಯಳನಾಡು ಗಿರಿಸ್ವಾಮಿ, ನಗರಸಭೆ ಸದಸ್ಯರುಗಳಾದ ಪಾಂಡುರಂಗ ವಿಠಲ, ಈಶ್ವರ್ ದಗ್ಗೆ, ಉಚ್ಚವ್ವನಹಳ್ಳಿ ಅವಿನಾಶ, ಆಪ್ಟಿಕಲ್ಸ್ ರಾಜೇಶ್, ಜಯಪ್ರಕಾಶ, ಕಾತ್ರಿಕೇನಹಳ್ಳಿ ಶ್ರೀನಿವಾಸ ಮತ್ತು ಮಂಜುನಾಥ್ ದಿಂಡಾವರ, ಶಶಿಕಲಾ, ಕ್ಯಾದಿಗುಂಟೆ ಜಯರಾಯ್ಯ, ಹುಣಿಸೆಹಳ್ಳಿ ನಾಗರಾಜ, ದ್ಯಾಮಣ್ಣ, ಪೆಪ್ಸಿ ಹನುಮಂತರಾಯ, ಆಲೂರು ನರೇಂದ್ರ, ಹೊಸಯಳನಾಡು ಗ್ರಾ ಪಂ ಅಧ್ಯಕ್ಷೆ ಹೇಮಲತ, ಮಲ್ಲಪ್ಪನಹಳ್ಳಿ ಜೋಗೇಶ್, ದೇವರಕೊಟ್ಟ ರಂಗಸ್ವಾಮಿ ಸೇರಿದಂತೆ ಇತರರು ಇದ್ಧರು.