ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಗಾಲ್ಫ್ ಆಟವಾಡಿದ ಧೋನಿ

Date:

Advertisements

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ ಎಸ್ ಧೋನಿ ಅವರು ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜೊತೆ ಗಾಲ್ಫ್ ಆಟವಾಡಿರುವ ದೃಶ್ಯ ಹಾಗೂ ಭಾವಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿವೆ.

ದುಬೈ ಮೂಲದ ಉದ್ಯಮಿಯಾಗಿರುವ ಸಾಂಘ್ವಿ ಅವರು ಎಂ ಎಸ್ ಧೋನಿ ಜೊತೆಗಿದ್ದರು ಮತ್ತು ಅವರ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಧೋನಿ ಹಾಗೂ ಟ್ರಂಪ್‌ ಅವರ ಹಲವಾರು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಒಂದು ದಿನದ ಹಿಂದೆ, ಧೋನಿ ಮತ್ತು ಸಾಂಘ್ವಿ ಇಬ್ಬರು ಯುಎಸ್ ಓಪನ್‌ ಟೆನಿಸ್‌ನಲ್ಲಿ ಕಾಣಿಸಿಕೊಂಡರು.

ಧೋನಿ ಅವರು ಅಮೆರಿಕ ಪ್ರವಾಸದಲ್ಲಿದ್ದಾರೆ ಎಂಬುದನ್ನು ಅರಿತು ಸ್ವತಃ ಟ್ರಂಪ್ ಅವರೇ ಧೋನಿಯನ್ನು ಗಾಲ್ಫ್ ಆಟಕ್ಕೆ ಆಹ್ವಾನಿಸಿದ್ದರು. ಸೆಪ್ಟೆಂಬರ್ 6 ರಂದು, ಪುರುಷರ ಸಿಂಗಲ್ಸ್ ಕ್ವಾರ್ಟರ್‌ ಫೈನಲ್ ಪಂದ್ಯದ ವೇಳೆ ಕಾರ್ಲೋಸ್ ಅಲ್ಕರಾಜ್ ಮತ್ತು ಅಲೆಕ್ಸಾಂಡರ್ ಜ್ವೆರೆವ್ ನಡುವಿನ ಟೆನಿಸ್ ಆಟವನ್ನು ವೀಕ್ಷಿಸಲು ಧೋನಿ ಆರ್ಥರ್ ಆ್ಯಶ್ ಸ್ಟೇಡಿಯಂನಲ್ಲಿ ಹಾಜರಿದ್ದರು. ಇದರ ವಿಡಿಯೋ ಕೂಡ ಎರಡು ದಿನಗಳ ಹಿಂದೆ ವೈರಲ್ ಆಗಿತ್ತು.

Advertisements

ಈ ಸುದ್ದಿ ಓದಿದ್ದೀರಾ? ಏಷ್ಯಾ ಕಪ್ ಕ್ರಿಕೆಟ್ | 10 ವಿಕೆಟ್ ಗೆಲುವಿನೊಂದಿಗೆ ಸೂಪರ್‌ 4 ಪ್ರವೇಶಿಸಿದ ಭಾರತ

ಎಂ ಎಸ್ ಧೋನಿ ಅಮೆರಿಕಾ ಪ್ರವಾಸದಿಂದ ಶೀಘ್ರದಲ್ಲೇ ಭಾರತಕ್ಕೆ ಮರಳಲಿದ್ದು, ಐಪಿಎಲ್‌ನ 2024ನೇ ಆವೃತ್ತಿಗಾಗಿ ತಯಾರಿ ಆರಂಭಿಸಲಿದ್ದಾರೆ. 2023 ರಲ್ಲಿ ಐದನೇ ಐಪಿಎಲ್ ಟ್ರೋಪಿಯನ್ನು ಗೆದ್ದ ನಂತರ, ಧೋನಿ ಅವರು ಲೀಗ್‌ನಿಂದ ಇನ್ನೂ ನಿವೃತ್ತಿಯಾಗಿಲ್ಲ ಎಂದು ಹೇಳಿದ್ದರು.

ಈ ವರ್ಷದ ಆರಂಭದಲ್ಲಿ, ಮಹೇಂದ್ರ ಸಿಂಗ್ ಧೋನಿ ಮುಂಬೈ ಆಸ್ಪತ್ರೆಯಲ್ಲಿ ಎಡ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಐದನೇ ಐಪಿಎಲ್ ಪ್ರಶಸ್ತಿ ದೊರಕಿಸಿಕೊಟ್ಟ ನಂತರ ಧೋನಿ ಅಹಮದಾಬಾದ್‌ನಿಂದ ಮುಂಬೈಗೆ ತೆರಳಿದ್ದರು. ಖ್ಯಾತ ಕ್ರೀಡಾ ಮೂಳೆ ಶಸ್ತ್ರಚಿಕಿತ್ಸಕ ಡಾ. ದಿನ್ಶಾ ಪಾರ್ದಿವಾಲಾ ಅವರನ್ನು ಭೇಟಿಯಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಪಾರ್ದಿವಾಲಾ ಅವರು ರಿಷಬ್ ಪಂತ್ ಸೇರಿದಂತೆ ಹಲವು ಕ್ರಿಕೆಟರಿಗೆ ಶಸ್ತ್ರಚಿಕಿತ್ಸೆ ನೆರವೇರಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಫ್ಘಾನಿಸ್ತಾನ | ಭೀಕರ ಅಪಘಾತ: ಹೊತ್ತಿ ಉರಿದ ಬಸ್, 17 ಮಕ್ಕಳು ಸೇರಿ 71 ಮಂದಿ ದಾರುಣ ಸಾವು

ಅಫ್ಘಾನಿಸ್ತಾನದ ಪಶ್ಚಿಮ ಹೆರಾತ್ ಪ್ರಾಂತ್ಯದಲ್ಲಿ ನಡೆದ ಭೀಕರ ಬಸ್ ಅಪಘಾತದಲ್ಲಿ ಬಸ್...

ಮಹಿಳಾ ವಿಶ್ವಕಪ್‌, ಆಸೀಸ್‌ ಪ್ರವಾಸಕ್ಕೆ ಟೀಂ ಇಂಡಿಯಾ ತಂಡ ಪ್ರಕಟ

ಮುಂದಿನ ತಿಂಗಳು ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯಲಿರುವ ಮಹಿಳೆಯರ ಏಕದಿನ ವಿಶ್ವಕಪ್‌ಗೆ...

ಏಷ್ಯಾಕಪ್​ಗೆ ಅಚ್ಚರಿಯ ಭಾರತ ತಂಡ ಪ್ರಕಟ; ಹಲವರಿಗೆ ಕೊಕ್‌, ಪ್ರಮುಖರ ಆಗಮನ

ಮಹತ್ವದ ಟಿ20 ಏಷ್ಯಾಕಪ್ ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರ...

ಏಷ್ಯನ್ ಚಾಂಪಿಯನ್‌ಶಿಪ್‌ | 10 ಮೀಟರ್ ಏರ್ ಪಿಸ್ತೂಲ್‌ನಲ್ಲಿ ಕಂಚು ಗೆದ್ದ ಮನು ಭಾಕರ್

ಕಝಾಕಿಸ್ತಾನದ ಶಿಮ್ಕೆಂಟ್‌ನಲ್ಲಿ ನಡೆದ ಏಷ್ಯನ್ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರ 10 ಮೀಟರ್...

Download Eedina App Android / iOS

X