ಭಾರತ್ ಜೋಡೊ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಕಾಂಗ್ರೆಸ್ ಪಕ್ಷದ ಯುವನಾಯಕ ರಾಹುಲ್ ಗಾಂಧಿ ಅವರು ಪಾದಯಾತ್ರೆ ಮೂಲಕ ಜನರೊಂದಿಗೆ ʼನಾನು ಮತ್ತು ನನ್ನ ಪಕ್ಷದವರೆಲ್ಲೆರೂ ನಿಮ್ಮೊಂದಿಗೆ ಇದ್ದೇವೆʼ ಎಂಬ ಸಂದೇಶ ಸಾರುವ ಒಂದು ಮಹಾ ಆಂದೋಲನವಾಗಿದೆ. ಸಂಪೂರ್ಣ ದೇಶದ ಜನತೆಯ ಭರವಸೆಯ ಬೆಳಕಾಗಿ ರಾಹುಲ್ ಅವರ ಮೇಲೆ ದೇಶ ಬಾಂಧವರ ಬೆಂಬಲ, ಆಶೀರ್ವಾದ ಮೂಡಿತು ಎಂದು ಕೆಪಿಸಿಸಿ ವಕ್ತಾರ ಗಂಗಾಧರ ದೊಡವಾಡ ಹೇಳಿದರು.
ರಾಹುಲ್ ಪಾದಯಾತ್ರೆಯ ಮೊದಲನೇ ವರ್ಷಾಚರಣೆ ಕಾರ್ಯಕ್ರಮವನ್ನು ಧಾರವಾಡ ಜಿಲ್ಲಾ ಮತ್ತು ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜವನ್ನು ಪ್ರದರ್ಶಿಸಿ ಮಾತನಾಡಿದರು.
ಈ ಸುದ್ದಿ ಓದಿದ್ದೀರಾ? ಬಳ್ಳಾರಿ | ಬರಗಾಲ ಘೋಷಿಸಿ, ರೈತರನ್ನು ರಕ್ಷಿಸಿ; ಮಾಜಿ ಶಾಸಕ ಸೋಮಶೇಖರ ರೆಡ್ಡಿ
“ಪ್ರತಿ ಭಾಗದ ಜನತೆಯ ಸಂಕಷ್ಟಗಳನ್ನು ಕಣ್ಣಾರೆ ಕಂಡು ಬಿಜೆಪಿ ಸರ್ಕಾರದ ಬೆಲೆ ಏರಿಕೆ, ನಿರುದ್ಯೋಗ, ಬಡತನಕ್ಕೆ ಅಂಜದೆ ಧೈರ್ಯವಾಗಿ ಮುನ್ನಡೆಯಲು ಕಾಂಗ್ರೆಸ್ ಮೂಲಕ ತಮ್ಮ ಸೇವೆ ಗೈಯ್ಯುವೆಯಂದು ಜನತೆಗೆ ಅಭಯವನ್ನು ನೀಡಿದ್ದರಿಂದಲೇ ಜೋಡೊ ಯಾತ್ರೆ ಇತಿಹಾಸ ಸೇರಿತು” ಎಂದು ಗಂಗಾಧರ ದೊಡ್ಡವಾಡ ಹೇಳಿದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರುಗಳಾದ ಪ್ರಕಾಶ ಕುರಹಟ್ಟಿ, ಸುಪ್ರೀತ್ ಶೆಟ್ಟಿ ವಿ ಜಿ, ಕೊಂಗವಾಡ ನೂರಮ್ಮದ್ ನದಾಫ್, ಈಶ್ವರ ಶಿರಸಂಗಿ, ಶಾರುಖ್ ಮುಲ್ಲಾ ಸೇರಿದಂತೆ ಇತರರು ಇದ್ದರು.