ರಾಯಚೂರು | ವಿಚ್ಛೇದನ ಪ್ರಕರಣ; ರಾಜಿ ಸಂಧಾನದಿಂದ ಎಂಟು ಜೋಡಿಗಳ ಮರುಮದುವೆ

Date:

Advertisements

ಕೌಟುಂಬಿಕ ನ್ಯಾಯಾಲಯದಲ್ಲಿ ವಿವಾಹ ವಿಚ್ಛೇದನ ಪ್ರಕರಣಗಳ ಎಂಟು ಜೋಡಿಗಳು ರಾಜಿ ಸಂಧಾನದ ಮೂಲಕ ಸ್ವ ಇಚ್ಛೆಯಿಂದ ಪರಸ್ಪರ ಒಪ್ಪಿಕೊಂಡು ಹಾರ ಬದಲಾಯಿಸುವ ಮೂಲಕ ನ್ಯಾಯಾಲಯದ ಆವರಣದಲ್ಲಿ ಮರು ಮದುವೆಯಾದ ಕಾರ್ಯಕ್ರಮ ನಡೆಯಿತು ರಾಯಚೂರಿನಲ್ಲಿ ನಡೆಯಿತು.

ನಗರದ ಜಿಲ್ಲಾ ಕೌಟುಂಬಿಕ ನ್ಯಾಯಾಲಯದ ಆವರಣದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕೌಟುಂಬಿಕ ನ್ಯಾಯಾಲಯದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಎಂಟು ಜೋಡಿಗಳಿಗೆ ರಾಜಿ ಸಂಧಾನದ ಮೂಲಕ ಮರು ಮದುವೆ ಮಾಡಿಸಿದರು.

ಜಿಲ್ಲಾ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಾರುತಿ ಬಗಾಡೆ ಮಾತನಾಡಿ, “ರಾಜಿಯಾಗಿ ಮರು ಮದುವೆಯಾಗಿರುವ ಜೋಡಿಗಳು ಯಾವುದೇ ಸಮಸ್ಯೆ ಬಂದರೂ ಸರಿಪಡಿಸಿಕೊಂಡು ಜೀವನ ಸಾಗಿಸಬೇಕು. ಹಲವು ಪ್ರಕರಣಗಳನ್ನು ಬಹಿರಂಗವಾಗಿ ರಾಜಿ ಸಂದಾನ ಮಾಡಿ ಪಾರದರ್ಶಕತೆಯಿಂದ 08 ಜೊಡಿಗಳು ಸ್ವ ಇಚ್ಛೆಯಿಂದ ಪರಸ್ಪರವಾಗಿ ಒಪ್ಪಿಕೊಂಡಿದ್ದು, ಸಂಸಾರದ ಜವಾಬ್ದಾರಿ ವಹಿಸಿಕೊಂಡು ಬದುಕಬೇಕು” ಎಂದು ತಿಳಿಸಿದರು.

Advertisements

“ಎಲ್ಲರೂ ಯುವ ಜೋಡಿಗಳಾಗಿದ್ದು, ಕೆಲವರಿಗೆ ಮಕ್ಕಳಾಗಿವೆ. ಇನ್ನೂ ಕೆಲವರಿಗೆ ಮಕ್ಕಳಾಗಿಲ್ಲ. ಸಣ್ಣಪುಟ್ಟ ಭಿನ್ನಾಭಿಪ್ರಾಯದಿಂದ ಐದಾರು ವರ್ಷಗಳಿಂದ ದೂರವಿದ್ದು, ಕೌಟುಂಬಿಕ ನ್ಯಾಯಾಲಯದಲ್ಲಿ ಕೌಟುಂಬಿಕ ವ್ಯಾಜ್ಯ ಪರಿಹಾರ ಕೇಳಲು ಬಂದಿದ್ದಾರೆ” ಎಂದರು.

ನ್ಯಾಯಾಧೀಶರ ಪರಿಶ್ರಮದಿಂದ ಅವರ ಮನ ಪರಿವರ್ತಿಸಿ ಅವರಿಗೆ ಒಂದಾಗಿ ಹೋಗುವಂತೆ ಮನವರಿಕೆ ಮಾಡಲಾಗಿದೆ, ಇಂದು ಹಾರ ಬದಲಾಯಿಸಿಕೊಂಡು ಮರು ಮದುವೆ ಮಾಡಿಕೊಂಡಿದ್ದಾರೆ, ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆ ಬಂದಲ್ಲಿ ಸರಿಪಡಿಸಿಕೊಂಡು ಹೋಗಬೇಕು ಎಂದು ತಿಳಿಸಿದರು.

“ಜೋಡಿಗಳು ತಮ್ಮ ಮನವೊಲಿಸಿಕೊಳ್ಳಬೇಕು, ಅವಿದ್ಯಾವಂತರು ಹೊಂದಾಣಿಕೆ ಮಾಡಿಕೊಂಡು ಹೋಗುತ್ತಾರೆ. ವಿದ್ಯಾವಂತರಿಬ್ಬರಲ್ಲಿ ಸ್ವಪ್ರತಿಷ್ಠೆ ತೆಗೆದುಕೊಂಡು ಬೇರೆ ಬೇರೆಯಾಗಿದ್ದರಿಂದ ಇಬ್ಬರಿಗೆ ಹೆಚ್ಚಾಗಿ ಮನವರಿಕೆ ಮಾಡಿಕೊಡಲಾಗುವುದು, ನ್ಯಾಯಾಲಯದ ತೀರ್ಪುಗಳು ಏನೆ ಇದ್ದರೂ ಅದು ಮನಸ್ಸಿಗೆ ತಾಗುವಂತಿದ್ದರೆ ಮಾತ್ರ ಫಲ ಕೊಡುತ್ತದೆ. ಇಲ್ಲದಿದ್ದರೆ ಮುಂದಿನ ನ್ಯಾಯಾಲಯದವರೆಗೆ ಹೋಗುತ್ತದೆ” ಎಂದರು.

ಕುಟುಂಬ ನ್ಯಾಯಾಲಯದ ನ್ಯಾಯಾಧೀಶ ಜಗದೀಶ್ವರ ಮಾತನಾಡಿ, “ಎಂಟು ಜೋಡಿಗಳಲ್ಲಿ ಒಂದು ಜೋಡಿಗೆ 10 ವರ್ಷಗಳ ಹಿಂದೆ ಮದುವೆ ನಡೆದಿತ್ತು. ಇದೀಗ ಇತ್ಯರ್ಥ ಪಡಿಸಲಾಗಿದೆ. ಎರಡು ತಿಂಗಳ ಹಿಂದಿನ ಪ್ರಕರಣ ರಾಜಿ ಸಂಧಾನ ಮಾಡಿಸಲಾಗಿದ್ದು, ಮನವೊಲಿಸಿ ತಿಳಿ ಹೇಳಲಾಗಿದೆ. ಎಂಟು ಜೋಡಿಗಳ ಕುರಿತು ಮತ್ತೆ 15 ದಿನಗಳ ನಂತರ ಕರೆಸಿ ಜೀವನ ಹೇಗಿದೆ ಎಂಬುದನ್ನು ತಿಳಿದುಕೊಳ್ಳಲಾಗುತ್ತದೆ. ಸಣ್ಣಪುಟ್ಟ ಸಮಸ್ಯೆಗಳ ಬಗ್ಗೆ ಮಾರ್ಗದರ್ಶನ ನೀಡಲಾಗುತ್ತದೆ” ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ದೂರು ನೀಡಲು ಹೋದ ವಕೀಲರನ್ನೇ ಸೆಲ್ ಒಳಗೆ ಹಾಕಿದ ಪೊಲೀಸರು

ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ದಯಾನಂದ ಸೇರಿದಂತೆ ನ್ಯಾಯಾಧೀಶರು ಹಾಗೂ ವಕೀಲರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ನವಜಾತ ಶಿಶುವನ್ನು ರಸ್ತೆ ಬದಿ ಬಿಟ್ಟು ಹೋದ ಪೋಷಕರು!

ರಾಯಚೂರು ತಾಲೂಕಿನ ಕಲ್ಮಲಾ ಗ್ರಾಮದ ಕಲ್ಲೂರು ರಸ್ತೆಯ ಬಳಿಯಲ್ಲಿ ಇಂದು ಹೃದಯವಿದ್ರಾವಕ...

ರಾಯಚೂರು | ಗ್ರಾಮವನ್ನು ಪಟ್ಟಣ ಪಂಚಾಯತ್ ಮೇಲ್ದರ್ಜೆಗೆ ಏರಿಸಬಾರದು : ಗ್ರಾಮಸ್ಥರ ಪ್ರತಿಭಟನೆ

ಲಿಂಗಸೂಗೂರು ತಾಲ್ಲೂಕಿನ ಗುರುಗುಂಟ ಗ್ರಾಮವನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆರಿಸಬಾರದು ಎಂದು ರಾಜ್ಯ...

ರಾಯಚೂರು | ಶೀಲಹಳ್ಳಿ ಸೇತುವೆ ಮುಳುಗಡೆ : ನಾಲ್ಕು ಗ್ರಾಮಕ್ಕೆ ಸಂಪರ್ಕ ಕಡಿತ

ಲಿಂಗಸುಗೂರು ತಾಲ್ಲೂಕಿನ ಶೀಲಹಳ್ಳಿ ಸೇತುವೆ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ಮುಳುಗಿದ್ದು,...

ರಾಯಚೂರು | ನಿರಂತರ ಮಳೆ : ಸೂರ್ಯಕಾಂತಿ ಬೆಳೆಗೆ ಕೀಟ ಬಾಧೆ

ಜಿಲ್ಲೆಯಲ್ಲಿ ನಿರಂತರ ವಾರದಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆ ಸೂರ್ಯಕಾಂತಿ ಬೆಳೆಗಾರರ...

Download Eedina App Android / iOS

X