ದುಬೈನಿಂದ ಎಮಿರೇಟ್ಸ್ ವಿಮಾನದಲ್ಲಿ ಶನಿವಾರ ರಾತ್ರಿ ಬೆಂಗಳೂರಿಗೆ ಬಂದಿಳಿದ ಪ್ರಯಾಣಿಕರಿಬ್ಬರಿಂದ ಅಂದಾಜು ₹1.54 ಕೋಟಿ ಮೌಲ್ಯದ 2.8 ಕೆಜಿ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿರುವ ಘಟನೆ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಬೆಂಕಿ ಅವಘಡ; ಭಾರೀ ಅನಾಹುತ
ಪ್ರಯಾಣಿಕರಿಬ್ಬರು ಸೊಂಟದ ಬೆಲ್ಟ್‌ಗೆ ಇನ್ಸೂಲೇಷನ್ ಟೇಪ್‌ನಲ್ಲಿ ಮೆಟಲ್ ಪೇಸ್ಟ್ ರೂಪದ ಚಿನ್ನ ಸುತ್ತಿಕೊಂಡು ಕಳ್ಳಸಾಗಣೆಗೆ ಯತ್ನಿಸಿದ್ದರು. ತಪಾಸಣೆ ವೇಳೆ ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದು, ಇಬ್ಬರು ಪ್ರಯಾಣಿಕರನ್ನು ಬಂಧಿಸಿದ್ದಾರೆ.