ಕವಯತ್ರಿ, ಪತ್ರಕರ್ತೆ ಗೊರೂರು ಪಂಕಜ ಅವರಿಗೆ ಪ್ರತಿಷ್ಠಿತ ಬೇಂದ್ರೆ ನುಡಿಸಿರಿ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಧಾರವಾಡದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಮತ್ತು ತನ ಫೌಂಡೇಶನ್ ಒಗ್ಗೂಡಿ ಆಯೋಜಿಸಿದ್ದ ‘ಧಾರವಾಡ ನುಡಿ ಸಡಗರ’ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಪ್ರಶಸ್ತಿ ನೀಡುವ ವೇಲೆ ಧಾರವಾಡದ ಹಿರಿಯ ಲೇಖಕಿ ಡಾ.ಹೇಮಾ ಪಟ್ಟಣಶೆಟ್ಟಿ, ಬೀದರ್ನ ಖ್ಯಾತ ಸಾಹಿತಿ ಡಾ.ಎಂ.ಜಿ.ದೇಶಪಾಂಡೆ, ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಡಾ.ಇಸಬೇಲಾ ಝೇವಿಯರ್, ಬೆಳಗಾವಿಯ ಸಾಹಿತಿ ಸುರೇಶ ಕೋರಕೊಪ್ಪ, ಹಾವೇರಿಯ ಪೊಲೀಸ್ ಅಧಿಕಾರಿ ಶಿವರಾಜ ಪಾಟೀಲ್, ಚೇತನ ಫೌಂಡೇಶನ್ ಅಧ್ಯಕ್ಷ ಚಂದ್ರಶೇಖರ ಮಾಡಲಗೆರೆ ಉಪಸ್ಥಿತರಿದ್ದರು.
“ವಿಶ್ವವಿದ್ಯಾಲಯ ಮತ್ತು ಎಲ್ಲರ ಪ್ರೋತ್ಸಾಹವೇ ನಮ್ಮ ಸಾಧನೆ ಮತ್ತು ದಿಟ್ಟ ಹೆಜ್ಜೆಗೆ ಪ್ರೇರಣೆ” ಎಂದು ಗೊರೂರು ಪಂಕಜ ಹೇಳಿದ್ದಾರೆ.