- ಸುಬ್ಬಮ್ಮ ಎಂಬುವರು ಸುಧಾಕರ್ ವಿರುದ್ಧ ದೌರ್ಜನ್ಯ ಪ್ರಕರಣ ದಾಖಲಿಸಿದ್ದರು
- ಪ್ರಕರಣ ರದ್ದು ಕೋರಿ ಸಚಿವ ಡಿ. ಸುಧಾಕರ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು
ಸಚಿವ ಡಿ.ಸುಧಾಕರ್ ವಿರುದ್ಧದ ದಲಿತ ದೌರ್ಜನ್ಯ ಮತ್ತು ಭೂಹಗರಣ ಆರೋಪ ಪ್ರಕರಣದಲ್ಲಿ ಧಾರವಾಡ ಹೈಕೋರ್ಟ್ ತಡೆ ನೀಡಿದ್ದು, ಈ ಮೂಲಕ ಸಚಿವ ಸುಧಾಕರ್‌ಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.
ಸುಬ್ಬಮ್ಮ ಎಂಬುವರು ಸುಧಾಕರ್ ವಿರುದ್ಧ ದೌರ್ಜನ್ಯ ಪ್ರಕರಣ ದಾಖಲಿಸಿದ್ದರು. ದೂರಿನ ಮೇರೆಗೆ ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಸುಧಾಕರ್ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.
ಈ ಪ್ರಕರಣ ರದ್ದು ಕೋರಿ ಸುಧಾಕರ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಧಾರವಾಡ ಹೈಕೋರ್ಟ್‌ನಲ್ಲಿ ಶುಕ್ರವಾರ ವಿಚಾರಣೆ ನಡೆದು, ಪ್ರಕರಣಕ್ಕೆ ಕೋರ್ಟ್ ತಡೆ ನೀಡಿದೆ. ಹಾಗೆಯೇ ಈ ಬಗ್ಗೆ ಸರ್ಕಾರಕ್ಕೆ ತುರ್ತು ನೋಟಿಸ್ ನೀಡಿ ವಿಚಾರಣೆಯನ್ನು ಅಕ್ಟೋಬರ್ 3ಕ್ಕೆ ಮುಂದೂಡಿದೆ.
ಸುಧಾಕರ್ ಪ್ರತಿಕ್ರಿಯೆ
“ನನ್ನ ವಿರುದ್ಧದ ಪ್ರಕರಣ ರದ್ದತಿಗೆ ಅರ್ಜಿ ಸಲ್ಲಿಸಿದ್ದೆವು. ನನ್ನ ವಿರುದ್ಧದ ಪ್ರಕರಣಕ್ಕೆ ಇಂದು ಹೈಕೋರ್ಟ್ ತಡೆಯಾಜ್ಞೆ ನೀಡಿ ಆದೇಶಿಸಿದ್ದು, ನಮ್ಮ ವಕೀಲರಿಂದ ಈಗ ಮಾಹಿತಿ ಸಿಕ್ಕಿದೆ. ತಡೆಯಾಜ್ಞೆಯ ದಾಖಲೆ ನಮ್ಮ ವಕೀಲರ ಬಳಿ ಇದೆ” ಎಂದು ಸುಧಾಕರ್ ಚಿತ್ರದುರ್ಗದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರೈತರ ಆತ್ಮಹತ್ಯೆ ತೀವ್ರ ಹೆಚ್ಚಳ; ಅನ್ನದಾತರ ಬದುಕಿಗೆ ಬೇಕಿದೆ ಭರವಸೆ
ಪ್ರಕರಣದ ಹಿನ್ನೆಲೆ
ಡಿ. ಸುಧಾಕರ್ ಪಾಲುದಾರರಾಗಿರುವ ಸೆವೆನ್ ಹಿಲ್ಸ್ ಡೆವಲಪರ್ಸ್ ಅಂಡ್ ಟ್ರೇಡರ್ಸ್ ರಿಯಲ್ ಎಸ್ಟೆಟ್ ಕಂಪನಿ 2003 ರಲ್ಲಿ ಸುಬ್ಬಮ್ಮ ಎಂಬುವರಿಂದ ಯಲಹಂಕದ ಸರ್ವೆ ನಂಬರ್ 108/1ರ ಜಮೀನನ್ನು ಕೊಂಡುಕೊಳ್ಳುತ್ತದೆ. ಈ ಸಂದರ್ಭದಲ್ಲಿ ಜಮೀನಿಗೆ ಇದ್ದ ಬೆಲೆಯನ್ನು ಸುಬ್ಬಮ್ಮ ಅವರಿಗೆ ಕಂಪನಿ ನೀಡುತ್ತದೆ. ಮತ್ತು ಕ್ರಯಪತ್ರ ಮಾಡಿಕೊಂಡಿದೆ.
ಆದರೆ, ಇದೀಗ ಸುಬ್ಬಮ್ಮ ಅವರು ಅಂದು ಮಾರಿದ ಜಮೀನಿಗೆ ಇಂದಿನ ಬೆಲೆಗೆ ಹಣ ನೀಡಿ ಎಂದು ಡಿ. ಸುಧಾಕರ್ ಅವರ ಬಳಿ ಬಂದು ಪಟ್ಟು ಹಿಡಿದಿದ್ದಾರೆ. ಅಲ್ಲದೇ 11 ಜನರು ಜಾಗವನ್ನು ಅತಿಕ್ರಮಣ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಸುಬ್ಬಮ್ಮ ಮತ್ತು ಡಿ.ಸುಧಾಕರ್ ಮಧ್ಯೆ ಗಲಾಟೆ ನಡೆದಿದೆ. ಗಲಾಟೆ ನಂತರ ಸುಬ್ಬಮ್ಮ ಅವರು ಸೆ.10 ರಂದು ಬೆಂಗಳೂರಿನ ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಮಾರಾಟ ಮಾಡಿದಾಗ ನಿಮಗ ಗೊತ್ತಾಗಬೇಕಿತಲ್ವ ಮಾರುವಾಗ ನಿಮಗ ಹಣದ ಬೇಕಿತ್ತು ಇವಾಗ ಹಿನಾ ಹಣ ಬೇಕಂತ case ಮಾಡೋದು ಇದು ದಲಿತರಿಗೆ ಶೋಬೇ ತರುವಂಥ ಕೆಲಸವಲ್ಲ, ದಲಿತ ಅಂತ ಹೇಳಿ ಕಾನೂನು ದುರುಪಯೋಗ ಮಾಡ್ಕೊಬ್ಯಾಡ್ರಿ ದಲಿತ ಹೆಸರಿಗೆ ಮಶಿಬಡಿಯೋ ಕೆಲಸ ಮಾಡೋದು ಬಿಡ್ರಿ