- ವಂಚನೆ ಪ್ರಕರಣದ ಎ1 ಆರೋಪಿ ಚೈನ್ ಚೈತ್ರ ಎಬಿವಿಪಿ ಕಾರ್ಯಕರ್ತೆ ಎಂದ ಕಾಂಗ್ರೆಸ್
- ಸಂಬಂಧವಿಲ್ಲ ಎಂದು ಕೈತೊಳೆದುಕೊಳ್ಳುವುದು ಬಿಜೆಪಿಯವರ ಆತ್ಮವಂಚನೆ ಅಲ್ಲವೇ?
ವಂಚನೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಚೈತ್ರಾ ಕುಂದಾಪುರ ಪ್ರಕರಣಕ್ಕೂ ಬಿಜೆಪಿಗೂ ಸಂಬಂಧವಿಲ್ಲ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನೀಡಿರುವ ಹೇಳಿಕೆಗೆ ಕಾಂಗ್ರೆಸ್ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದೆ.
ಶುಕ್ರವಾರ ಟ್ವೀಟ್ ಮಾಡಿರುವ ಕಾಂಗ್ರೆಸ್ ಐಟಿ ಸೆಲ್, ಬೊಮ್ಮಾಯಿಯವರು ಟಿಕೆಟ್ ವಂಚನೆ ಪ್ರಕರಣಕ್ಕೂ ಬಿಜೆಪಿಗೂ ಸಂಬಂಧವಿಲ್ಲ ಎಂದಿದ್ದಾರೆ. ಯಾವುದಾದರೂ ಹೆಣ ಕಂಡರೆ ಹಿಂದೂ ಕಾರ್ಯಕರ್ತರು ಎಂದು ಬೊಬ್ಬೆ ಹೊಡೆಯುವ ಬಿಜೆಪಿ, ತನ್ನ ಕಾರ್ಯಕರ್ತರು ಅಕ್ರಮ, ಅನಾಚಾರ ನಡೆಸಿದಾಗ ಜಾರಿಕೊಳ್ಳುವುದೇಕೆ? ಎಂದು ಬಿಜೆಪಿಗೆ ಪ್ರಶ್ನೆ ಹಾಕಿದೆ.
ಟಿಕೆಟ್ ವಂಚನೆ ಪ್ರಕರಣಕ್ಕೂ ಬಿಜೆಪಿಗೂ ಸಂಬಂಧವಿಲ್ಲ ಎಂದಿದ್ದಾರೆ @BSBommai ,
— Karnataka Congress (@INCKarnataka) September 15, 2023
ಯಾವುದಾದ್ರೂ ಹೆಣ ಕಂಡರೆ ಹಿಂದೂ ಕಾರ್ಯಕರ್ತರು ಎಂದು ಬೊಬ್ಬೆ ಹೊಡೆಯುವ ಬಿಜೆಪಿ ತನ್ನ ಕಾರ್ಯಕರ್ತರು ಅಕ್ರಮ, ಅನಾಚಾರ ನಡೆಸಿದಾಗ ಜಾರಿಕೊಳ್ಳುವುದೇಕೆ?
🔹ಆರೋಪಿ ಚೈನ್ ಚೈತ್ರ ಎಬಿವಿಪಿ ಕಾರ್ಯಕರ್ತೆಯಾಗಿದ್ದಾಳೆ.
🔹ಮತ್ತೊಬ್ಬ ಆರೋಪಿ ಗಗನ್ ಕಡೂರು ಬಿಜೆಪಿ…
ಆರೋಪಿ ಚೈನ್ ಚೈತ್ರ ಎಬಿವಿಪಿ ಕಾರ್ಯಕರ್ತೆಯಾಗಿದ್ದಾಳೆ. ಮತ್ತೊಬ್ಬ ಆರೋಪಿ ಗಗನ್ ಕಡೂರು ಬಿಜೆಪಿ ಯುವಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿದ್ದ. ವಂಚನೆ ನಡೆಸಿದ್ದು ಬಿಜೆಪಿ ಟಿಕೆಟ್ ಹೆಸರಲ್ಲಿ. ಶಿವಮೊಗ್ಗ ಬಿಜೆಪಿ ಕಚೇರಿಯಲ್ಲಿ ಡೀಲ್ ನಡೆಸಲು ಬಳಸಿಕೊಳ್ಳಲಾಗಿತ್ತು ಎಂದಿರುವ ಕಾಂಗ್ರೆಸ್, ಹೀಗಿದ್ದೂ ಸಂಬಂಧವಿಲ್ಲ ಎಂದು ಕೈತೊಳೆದುಕೊಳ್ಳುವುದು ಬಿಜೆಪಿಯವರ ಆತ್ಮವಂಚನೆ ಅಲ್ಲವೇ ಎಂದು ಕಾಲೆಳೆದಿದೆ.