ಸಂಸತ್ ವಿಶೇಷ ಅಧಿವೇಶನ | ಹಳೆಯ ಸಂಸತ್ ಕಟ್ಟಡದಲ್ಲಿ ಕೊನೆಯ ಭಾಷಣಗೈದ ಪ್ರಧಾನಿ ನರೇಂದ್ರ ಮೋದಿ

Date:

Advertisements
  • ಮಂಗಳವಾರ ನೂತನ ಸಂಸತ್ ಭವನಕ್ಕೆ ಸಂಸತ್ ಕಾರ್ಯ ಕಲಾಪಗಳು ವರ್ಗಾವಣೆ
  • ಮಾಜಿ ಪ್ರಧಾನಿಗಳಾದ ನೆಹರೂ, ವಾಜಪೇಯಿ ಸಹಿತ ಹಲವರನ್ನು ಭಾಷಣದಲ್ಲಿ ನೆನೆದ ಮೋದಿ

ಐದು ದಿನಗಳ ಕಾಲ ನಡೆಯಲಿರುವ ಸಂಸತ್‌ನ ವಿಶೇಷ ಅಧಿವೇಶನವು ಇಂದು ಸಂಸತ್‌ನ ಹಳೆಯ ಕಟ್ಟಡದಲ್ಲಿ ಆರಂಭವಾಗಿದ್ದು, ಈ ಕಟ್ಟಡದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕೊನೆಯ ಭಾಷಣಗೈದರು.

ಅಧಿವೇಶನದಲ್ಲಿ ಮಾತನಾಡಿದ ಅವರು, “ಮಂಗಳವಾರದಿಂದ ನೂತನ ಸಂಸತ್ ಭವನಕ್ಕೆ ಸಂಸತ್ತಿನ ಕಾರ್ಯ ಕಲಾಪಗಳು ವರ್ಗಾವಣೆ ಆಗಲಿವೆ. ಹಳೆಯ ಸಂಸತ್ ಭವನವು ಸ್ವಾತಂತ್ರ್ಯ ಸಂಗ್ರಾಮದ ಚಿಹ್ನೆ” ಎಂದು ಹೇಳಿದರು.

“ನಾವೀಗ ನೂತನ ಸಂಸತ್‌ ಭವನಕ್ಕೆ ಸ್ಥಳಾಂತರ ಆಗುವ ಹೊಸ್ತಿಲಲ್ಲಿದ್ದೇವೆ. ಈ ಸಂದರ್ಭದಲ್ಲಿ ನಾವು ಹಳೆಯ ಸಂಸತ್‌ ಭವನದ ಸವಿ ನೆನಪುಗಳು ಹಾಗೂ ಈ ಭವನ ನಮಗೆ ನೀಡಿದ ಸ್ಪೂರ್ತಿಗಳನ್ನು ನೆನಪಿಸಿಕೊಳ್ಳುವ ಸಮಯ” ಎಂದರು.

Advertisements

ಸೆ.19ರ ಮಂಗಳವಾರ ನೂತನ ಸಂಸತ್ ಭವನಕ್ಕೆ ಸಂಸದೀಯ ಕಾರ್ಯ ಕಲಾಪಗಳು ಸ್ಥಳಾಂತರ ಆಗಲಿವೆ.

“ಹಳೆಯ ಸಂಸತ್‌ ಭವನವು ಸ್ವಾತಂತ್ರ್ಯ ಪೂರ್ವದಲ್ಲಿ ಸಾಮ್ರಾಜ್ಯಶಾಹಿ ಶಾಸಕಾಂಗ ಭವನವಾಗಿತ್ತು. ಸ್ವಾತಂತ್ರ್ಯಾ ನಂತರ ಈ ಭವನಕ್ಕೆ ಸಂಸತ್‌ ಭವನ ಎಂಬ ಹೊಸ ಅಸ್ತಿತ್ವ ಸಿಕ್ಕಿತು. ನಾವು ಈಗಿರುವ ಹಳೆಯ ಕಟ್ಟಡವನ್ನು ನಿರ್ಮಿಸಿದ್ದು ವಿದೇಶೀ ಆಳ್ವಿಕೆದಾರರು. ಆದರೆ ಈ ಕಟ್ಟಡವನ್ನು ಕಟ್ಟಲು ಬಳಕೆಯಾದ ಹಣ, ಸಂಪನ್ಮೂಲ ಹಾಗೂ ಶ್ರಮ ಎಲ್ಲವೂ ಭಾರತೀಯರದ್ದು” ಎಂದು ಪ್ರಧಾನಿ ಮೋದಿ ಹೇಳಿದರು.

“ಜಿ – 20 ಶೃಂಗಸಭೆ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಇದರ ಯಶಸ್ಸು ಇಡೀ ದೇಶಕ್ಕೆ ಸಲ್ಲಬೇಕಾದದ್ದು. ಈ ಶೃಂಗಸಭೆಯಲ್ಲಿ ಭಾರತದ ವೈಭವದ ಅನಾವರಣವಾಯಿತು ಎಂದು ಹೇಳಿದ ಪ್ರಧಾನಿ ಮೋದಿ, ಸಭೆಯ ನಿರ್ಣಯದಲ್ಲಿ ಭಾರತದ ಶಕ್ತಿಯ ಅನಾವರಣವೂ ಆಗಿದೆ ಎಂದು ಹೇಳಿದರು

ಹಳೆಯ ಸಂಸತ್ ಭವನಕ್ಕೆ ವಿದಾಯ ಹೇಳುತ್ತಿರುವುದು ನಿಜಕ್ಕೂ ಭಾವನಾತ್ಮಕ ಸನ್ನಿವೇಶ. ಈ ಕಟ್ಟಡದ ಜೊತೆ ಸಿಹಿ – ಕಹಿ ಅನುಭವಗಳು ಎರಡೂ ಇವೆ. ನಾನು ಈ ಕಟ್ಟಡಕ್ಕೆ ಮೊದಲ ಬಾರಿಗೆ ಸದಸ್ಯನಾಗಿ ಪ್ರವೇಶಿಸಿದಾಗ ದೇಶದ ಜನರು ನನಗೆ ಇಷ್ಟೊಂದು ಪ್ರೀತಿ ಕೊಡುತ್ತಾರೆ ಎಂದು ನಾನು ಭಾವಿಸಿರಲಿಲ್ಲ. ಹಳೆಯ ಕಟ್ಟಡವು ಮುಂದಿನ ಹಲವು ತಲೆಮಾರುಗಳಿಗೆ ಸ್ಪೂರ್ತಿ ತುಂಬಲಿದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಿಸಿದರು.

ಇದೇ ವೇಳೆ ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರೂ, ಅಟಲ್ ಬಿಹಾರಿ ವಾಜಪೇಯಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿ, ಮನಮೋಹನ್ ಸಿಂಗ್ ಅವರನ್ನು ನೆನಪಿಸಿದ ಪ್ರಧಾನಿ ಮೋದಿ, ಅವರ ಉಪಕ್ರಮಗಳು ಸಂಸತ್ತಿನಲ್ಲಿ ಹೇಗೆ ಸಾಕ್ಷಿಯಾಯಿತು ಎಂಬುದನ್ನು ಉಲ್ಲೇಖಿಸಿದರು.

ಸಂಸತ್‌ನಲ್ಲಿ ಮೊದಲು ಮಹಿಳಾ ಸದಸ್ಯರ ಸಂಖ್ಯೆ ಕಡಿಮೆ ಇತ್ತು. ಆದರೆ, ನಿಧಾನವಾಗಿ ಈ ಸದನದಲ್ಲಿ ಮಹಿಳಾ ಸಂಖ್ಯಾ ಬಲ ಹೆಚ್ಚಾಗುತ್ತಿದೆ. ಭಾರತದ ಇತ್ತೀಚಿನ ಹಲವು ಸಾಧನೆಗಳು ವಿಶ್ವ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ದೇಶದ ಸಂಸತ್‌ನ 75 ವರ್ಷಗಳ ಶ್ರಮದ ಪ್ರತಿಫಲ ಇದು ಎಂದು ತಿಳಿಸಿದರು.

ಚಂದ್ರಯಾನ – 3 ಯೋಜನೆ ಯಶಸ್ಸು ಭಾರತ ಮಾತ್ರವಲ್ಲ, ಇಡೀ ವಿಶ್ವಕ್ಕೇ ಹೆಮ್ಮೆ ಮೂಡಿಸಿದೆ. ಭಾರತವು ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ ಮಾಡುತ್ತಿರುವ ಸಾಧನೆಯ ಪ್ರತೀಕ ಇದು ಎಂದು ಹೇಳಿದ ಪ್ರಧಾನಿ ಮೋದಿ, ದೇಶದ ಎಲ್ಲ ವಿಜ್ಞಾನಿಗಳಿಗೂ ಅಭಿನಂದನೆ ಸಲ್ಲಿಸುವುದಾಗಿ ಇದೇ ವೇಳೆ ಹೇಳಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೀರತ್ ಗಡಿಯಾರ ಗೋಪುರ ಹತ್ತಿ ವಿಡಿಯೋ ಮಾಡುವ ಸಾಹಸ ಮಾಡಿದ ‘ಸ್ಪೈಡರ್‌ಮ್ಯಾನ್’ ಬಂಧನ!

'ಸ್ಪೈಡರ್‌ಮ್ಯಾನ್' ವೇಷಭೂಷಣವನ್ನು ಧರಿಸಿ ಮೀರತ್‌ನ ಐತಿಹಾಸಿಕ ಗಡಿಯಾರ ಗೋಪುರವನ್ನು ಹತ್ತಿ ಅಪಾಯಕಾರಿ...

ಸರ್ಕಾರದಿಂದ ನಷ್ಟ ಸರಿದೂಗಿಸಲಾಗದು, ರೈತರೇ ಕಷ್ಟಕ್ಕೆ ಒಗ್ಗಿಕೊಳ್ಳಬೇಕು: ಬಿಜೆಪಿ ನಾಯಕನ ಹೇಳಿಕೆಗೆ ತೀವ್ರ ಆಕ್ರೋಶ

ಇತ್ತೀಚಿಗೆ ಆದ ಅತಿವೃಷ್ಟಿಯಿಂದ ರೈತರಿಗೆ ಆಗಿರುವ ನಷ್ಟಕ್ಕೆ ಸರ್ಕಾರ ಪರಿಹಾರ ನೀಡಲು...

ಏನಿದು ಅನಿಲ್ ಅಂಬಾನಿ ಬ್ಯಾಂಕ್ ವಂಚನೆ? ಕ್ರಮ ಕೈಗೊಳ್ಳುತ್ತಾರ ಮೋದಿ?

ತನ್ನನ್ನು ತಾನು ದಿವಾಳಿ ಎಂದು ಘೋಷಿಸಿಕೊಂಡಿರುವ ಭಾರತದ ಭಾರೀ ಶ್ರೀಮಂತ ಉದ್ಯಮಿ...

Download Eedina App Android / iOS

X