ಬೀದರ್‌ | ಜಿಲ್ಲೆಗೆ ಸೈನಿಕ್‌ ಶಾಲೆ ಮಂಜೂರು; ಶೀಘ್ರದಲ್ಲೇ ಶಂಕುಸ್ಥಾಪನೆ: ಕೇಂದ್ರ ಸಚಿವ ಭಗವಂತ ಖೂಬಾ

Date:

Advertisements
  • ದೇಶದ 23 ನಗರಗಳಲ್ಲಿ ಸೇರಿದಂತೆ ರಾಜ್ಯದ ಏಕೈಕ ಬೀದರ್‌ ಜಿಲ್ಲೆಯಲ್ಲಿ ಸೈನಿಕ್‌ ಶಾಲೆ ಆರಂಭವಾಗಲಿದೆ.
  • ಜಿಲ್ಲೆಗೆ ಸೈನಿಕ್‌ ಶಾಲೆ ಮಂಜೂರಾತಿಯಾಗಿದ್ದು, ಎಂದಿಗೂ ಮರೆಯಲಾರದ ಐತಿಹಾಸಿಕ ದಿನವಾಗಿದೆ.

ಕೇಂದ್ರ ಸರ್ಕಾರದಿಂದ ದೇಶದಲ್ಲೆ ಪ್ರತಿಷ್ಠಿತ ಶಾಲೆಗಳ ಸಾಲಿನಲ್ಲಿರುವ ಸೈನಿಕ್ ಶಾಲೆ ಬೀದರ್‌ ಜಿಲ್ಲೆಗೆ ಮಂಜೂರಾತಿಯಾಗಿದೆ. ಅತಿ ಶೀಘ್ರದಲ್ಲೇ ಶಂಕುಸ್ಥಾಪನೆ ನೆರವೆರಿಸಿ ಮುಂದಿನ ವರ್ಷದಿಂದ ತರಗತಿಗಳು ಪ್ರಾರಂಭಿಸಲು ಸಿದ್ದತೆ ಮಾಡಿಕೊಳ್ಳಲಾಗುವುದು ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದ್ದಾರೆ.

“ದೇಶದ 23 ನಗರಗಳಲ್ಲಿ ಈ ಶಾಲೆಯೂ ಪ್ರಾರಂಭವಾಗಲಿದೆ, ಅದರಲ್ಲಿ ನಮ್ಮ ರಾಜ್ಯದ ಏಕೈಕ ಬೀದರ ಜಿಲ್ಲೆಗೆ ಮಾತ್ರ ಸೈನಿಕ ಶಾಲೆ ಮಂಜೂರಾಗಿದೆ. ಎಂದಿಗೂ ಮರೆಯಲಾರದ ಬೀದರ್‌ ಜಿಲ್ಲೆಗೆ ಐತಿಹಾಸಿಕ ದಿನವಾಗಿದೆ. ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ, ಬೀದರ ನಗರದ ಎಚ್.ಕೆ.ಇ ಸೊಸೈಟಿ ಅಡಿಯಲ್ಲಿ ನಡೆಯುತ್ತಿರುವ ನ್ಯಾಷನಲ್ ಇಂಗ್ಲಿಷ್ ಮೀಡಿಯಂ ಪಬ್ಲಿಕ್ ಶಾಲೆಯಲ್ಲಿ (ಬಿ.ವ್ಹಿ.ಬಿ ಕಾಲೇಜು ಆವರಣ) ಪ್ರಾರಂಭವಾಗಲಿದೆ. ಸುಮಾರು 8 ಎಕ್ಕರೆಗಳಲ್ಲಿ ಶಾಲೆ ನಿರ್ಮಾಣವಾಗಲಿದೆ, ಹಾಸ್ಟೆಲ್ ಸೇರಿದಂತೆ ಇನ್ನಿತರೆ ಸೌಕರ್ಯಕ್ಕಾಗಿ ಸುಮಾರು 24 ಎಕ್ಕರೆ ಜಮೀನು ಬಳಸಿಕೊಳಲಾಗುವುದು” ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

“ಸೈನಿಕ ಶಾಲೆ ನಮ್ಮ ಲೋಕಸಭಾ ಕ್ಷೇತ್ರದ ಹಿರಿಮೆಯನ್ನು ಹೆಚ್ಚಿಸಲಿದೆ, ಜೊತೆಗೆ ಸೈನಿಕ ಶಾಲೆಗಳ ಪ್ರಾಥಮಿಕ
ಉದ್ದೇಶ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ, ಮಾನಸಿಕವಾಗಿ ಮತ್ತು ದೈಹಿಕವಾಗಿ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ಭಾರತೀಯ ನೌಕಾ ಅಕಾಡೆಮಿಗೆ ಪ್ರವೇಶಿಸಲು ಸಿದ್ಧಪಡಿಸುವುದು. ಈ ನಿಟ್ಟಿನಲ್ಲಿ ನಮ್ಮ ಭಾಗದ ಮಕ್ಕಳು ಸಹ ಭವಿಷ್ಯದಲ್ಲಿ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ಭಾರತೀಯ ನೌಕಾ ಅಕಾಡೆಮಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭರ್ತಿಯಾಗಲು ಈ ಶಾಲೆಯಿಂದ ಅನುಕೂಲವಾಗಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisements

ಈ ಸುದ್ದಿ ಓದಿದ್ದೀರಾ? ಕಲ್ಯಾಣ ಕರ್ನಾಟಕ | ಹೆಸರು ಬದಲಾದರೂ ಹಸನಾಗದ ಬದುಕು

“ಬೀದರನಲ್ಲಿ ಸೈನಿಕ್ ಶಾಲೆಗಾಗಿ ಎಚ್.ಕೆ.ಇ ಸೊಸೈಟಿಯವರು ಸಹ ಅಗತ್ಯ ಸಹಕಾರ ನೀಡಿದ್ದಾರೆ, ಕಳೆದ ವರ್ಷ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರಿಗೆ ಭೇಟಿಯಾಗಿ, ಸದರಿ ಶಾಲೆಗಾಗಿ ಪ್ರಸ್ತಾವನೆ ಸಲ್ಲಿಸಲಾಗಿತ್ತು, ಮಂಜೂರಾತಿ ಮಾಡಿಕೊಡಬೇಕೆಂದು ನಾನು ಹಾಗೂ ಎಚ್.ಕೆ.ಇ. ಸೊಸೈಟಿ ಅಧ್ಯಕ್ಷರು ಮನವಿ ಮಾಡಿದ್ದೇವು, ಅದರಂತೆ ಈ ಸಾಲಿನಲ್ಲಿ ಬೀದರ ಜಿಲ್ಲೆಗೆ ಸೈನಿಕ ಶಾಲೆ ಮಂಜೂರಾತಿಯಾಗಿದೆ” ಎಂದಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು | ಜಿ ಟಿ ದೇವೇಗೌಡರ ದಲಿತ ವಿರೋಧಿ ಹೇಳಿಕೆ ಖಂಡಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಮೈಸೂರು ವಿಶ್ವವಿದ್ಯಾನಿಲಯದ ಸಂಶೋಧಕರ ಸಂಘ ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟದ ವಿದ್ಯಾರ್ಥಿಗಳು...

ಹಾವೇರಿ | ಗಣೇಶ ಚತುರ್ಥಿ ಪ್ರಯುಕ್ತ 265 ಹೆಚ್ಚುವರಿ ಸಾರಿಗೆ ಸೌಲಭ್ಯ

ಚತುರ್ಥಿಯ ಪ್ರಯುಕ್ತ ಸಾರ್ವಜನಿಕರು ತಮ್ಮ ಸ್ವಂತ ಊರುಗಳಿಗೆ ತೆರಳಲು ಅನುಕೂಲವಾಗುವಂತೆ ವಾಯವ್ಯ...

ಗದಗ | ಆಗಸ್ಟ್ 25ಕ್ಕೆ ಲೋಕಾಯುಕ್ತ ಜನ ಸಂಪರ್ಕ ಸಭೆ

ಸಾರ್ವಜನಿಕ ಕುಂದು-ಕೊರತೆಗಳ ಅಹವಾಲು ಸ್ವೀಕರಿಸಲು ಆಗಸ್ಟ್ 25 ಸೋಮವಾರದಂದು  ಗದಗ ಶಿರಹಟ್ಟಿ...

ಬೀದರ್‌ | ಅತಿವೃಷ್ಟಿ : ತ್ವರಿತ ಬೆಳೆ ಹಾನಿ ಪರಿಹಾರಕ್ಕೆ ಕಿಸಾನ್‌ ಸಭಾ ಒತ್ತಾಯ

ಮೇ ತಿಂಗಳಿಂದ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಉದ್ದು, ಹೆಸರು, ತೊಗರಿ ಸೇರಿದಂತೆ ಹಲವು...

Download Eedina App Android / iOS

X