ರಾಜ್ಯದೆಲ್ಲೆಡೆ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಜನರು ಸೆ.18 ರಂದು ಗಣೇಶನನ್ನು ಮನೆಗೆ ಕರೆದುಕೊಂಡು ಹೋಗಿ ಪೂಜಾ ಕಾರ್ಯಗಳನ್ನು ನೆರವೇರಿಸಿ, ಸಂಭ್ರಮಿಸಿದ್ದಾರೆ. ಕೆಲವು ಜನ ಆ ದಿನವೇ ಗಣಪನನ್ನು ವಿಸರ್ಜನೆ ಮಾಡಿದ್ದಾರೆ. ಇನ್ನೂ ಕೆಲವರು ಮುರು ದಿನ, ಐದು ದಿನ, ಒಂಬತ್ತು ದಿನ, ಅಂತೆಯೇ 11 ದಿನದವರೆಗೆ ಗಣೇಶನಿಗೆ ಪೂಜೆ ಸಲ್ಲಿಸಿ ವಿಸರ್ಜನೆ ಮಾಡುತ್ತಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸೆ.18 ರಂದು ಸಂಚಾರಿ/ಮೊಬೈಲ್ ಟ್ಯಾಂಕರ್ ಹಾಗೂ ಕೆರೆ ಅಂಗಳ/ತಾತ್ಕಾಲಿಕ ಕಲ್ಯಾಣಿಗಳಲ್ಲಿ ಒಟ್ಟು 1,53,965 ಗಣೇಶ ಮೂರ್ತಿ ವಿಸರ್ಜನೆ ಮಾಡಲಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಮಣ್ಣಿನ ಹಾಗೂ ಪ್ಲಾಸ್ಟರ್ ಆಫ್ ಪ್ಯಾರೀಸ್(ಪಿಓಪಿ) ಗಣೇಶ ಮೂರ್ತಿಗಳ ವಿಸರ್ಜನೆ ಮಾಡಲಾಗಿದೆ. ಪೂರ್ವ ವಲಯದಲ್ಲಿ 24,990 ಮಣ್ಣಿನ ಗಣೇಶ ಮೂರ್ತಿಗಳು, 206 ಪಿ.ಓ.ಪಿ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ.
ಪಶ್ಚಿಮ ವಲಯದಲ್ಲಿ 35,887 ಮಣ್ಣಿನ ಗಣೇಶ ಮೂರ್ತಿಗಳು, 134 ಪಿ.ಓ.ಪಿ ಗಣೇಶ ಮೂರ್ತಿಗನ್ನು ವಿಸರ್ಜನೆ ಮಾಡಿದ್ದರೆ, ದಕ್ಷಿಣ ವಲಯದಲ್ಲಿ 50,848 ಮಣ್ಣಿನ ಗಣೇಶ ಮೂರ್ತಿಗಳು, 8,992 ಪಿ.ಓ.ಪಿ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಅಲ್ಪಾವಧಿ ಸಾಲ ನೀಡುವ ಜಾಲದ ಕುರಿತು ಎಚ್ಚರವಿರಲಿ ಎಂದ ಪೊಲೀಸರು
ಬೊಮ್ಮನಹಳ್ಳಿ ವಲಯದಲ್ಲಿ 7,291 ಮಣ್ಣಿನ ಗಣೇಶ ಮೂರ್ತಿಗಳು, 147 ಪಿ.ಓ.ಪಿ ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಗಿದೆ. ದಾಸರಹಳ್ಳಿ ವಲಯದಲ್ಲಿ 1,138 ಮಣ್ಣಿನ ಗಣೇಶ ಮೂರ್ತಿಗಳು, 53 ಪಿ.ಓ.ಪಿ ಗಣೇಶ ಮೂರ್ತಿಗಳ ವಿಸರ್ಜನೆ ಆಗಿದೆ.
ಮಹದೇವಪುರ ವಲಯದಲ್ಲಿ 5,860 ಮಣ್ಣಿನ ಗಣೇಶ ಮೂರ್ತಿಗಳ ವಿಸರ್ಜನೆ ಆಗಿದ್ದರೆ, 18 ಪಿ.ಓ.ಪಿ ಗಣೇಶ ಮೂರ್ತಿಗಳ ವಿಸರ್ಜನೆ ಆಗಿದೆ. ಆರ್.ಆರ್.ನಗರ ವಲಯದಲ್ಲಿ 10,180 ಮಣ್ಣಿನ ಗಣೇಶ ಮೂರ್ತಿಗಳು, 152 ಪಿ.ಓ.ಪಿ ಗಣೇಶ ಮೂರ್ತಿಗಳು, ಯಲಹಂಕ ವಲಯದಲ್ಲಿ 7414 ಮಣ್ಣಿನ ಗಣೇಶ ಮೂರ್ತಿಗಳು, 546 ಪಿ.ಓ.ಪಿ ಗಣೇಶ ಮೂರ್ತಿಗಳ ವಿಸರ್ಜನೆ ಆಗಿವೆ.