ಸಾಲವನ್ನು ಪಡೆಯುವುದು ಈಗ ಸರಳ ಹಾಗೂ ಸುಲಭವಾಗಿದೆ. ಆ್ಯಪ್‌ಗಳ ಮುಖಾಂತರ ಕ್ಷಣ ಮಾತ್ರದಲ್ಲಿ ಲೋನ್ ಪಡೆಯುವಂತಹ ವ್ಯವಸ್ಥೆ ಇದೀಗ ಜಾರಿಯಲ್ಲಿದೆ. ಆದರೆ, ಇದರಿಂದ ಅನುಕೂಲ ಇರುವುದಕ್ಕಿಂತ ಜನರಿಗೆ ಅನಾನುಕೂಲವೇ ಹೆಚ್ಚಾಗಿದೆ.
ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಸ್ಟೋರ್‌ನಲ್ಲಿ ಚೈನಿ ಸೇರಿದಂತೆ ಹಲವಾರು ಅಕ್ರಮ ಸಾಲದ ಅಪ್ಲಿಕೇಶನ್‌ಗಳು ಲಭ್ಯವಿವೆ. ಅವಶ್ಯಕತೆಗೆ ಹಲವು ಜನ ಈ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು ಹಣ ಪಡೆಯುತ್ತಾರೆ. ಬಳಿಕ ಈ ಆ್ಯಪ್ ಕಂಪನಿಗಳು ಜನರಿಗೆ ಹೆಚ್ಚಿನ ಬಡ್ಡಿ ದರ ವಿಧಿಸಿ, ಕಟ್ಟದೆ ಇದ್ದಾಗ ಹಿಂಸೆ ನೀಡಲು ಪ್ರಾರಂಭ ಮಾಡುತ್ತವೆ. ಜತೆಗೆ ನಿಮ್ಮ ಫೋಟೋ ಎಲ್ಲ ದಾಖಲೆಗಳನ್ನು ಸಂಗ್ರಹಿಸಿಕೊಂಡು ಬ್ಲ್ಯಾಕ್ ಮೇಲ್ ಮಾಡಲು ಮುಂದಾಗುತ್ತವೆ. ಹಾಗಾಗಿ, ಇಂತಹ ಆ್ಯಪ್‌ಗಳಿಂದ ಸಾಲ ಪಡೆಯುವ ಮುನ್ನ ಎಚ್ಚರವಾಗಿರಿ ಎಂದು ಬೆಂಗಳೂರು ನಗರ ಪೊಲೀಸ್ ತಿಳಿಸಿದೆ.
Beware of Loan App Scams! Several apps are deceiving those in need, offering instant short-term loans with high processing fees. Tragically, scammers extort exorbitant by threatening.
— ಬೆಂಗಳೂರು ನಗರ ಪೊಲೀಸ್ BengaluruCityPolice (@BlrCityPolice) September 19, 2023
Bengaluru Police urges: Avoid unauthorized loan apps. Your safety matters. Our department is… pic.twitter.com/uKlVUA3lqt
ಈ ಬಗ್ಗೆ ಟ್ವೀಟ್ ಮಾಡಿದ ಬೆಂಗಳೂರು ನಗರ ಪೊಲೀಸ್, “ಹಲವಾರು ಅಪ್ಲಿಕೇಶನ್‌ಗಳ ಮೂಲಕ ಅಲ್ಪಾವಧಿಯ ಸಾಲಗಳನ್ನು ನೀಡಿ ನಂತರದಲ್ಲಿ ಸಾಲ ಪಡೆದವರಿಗೆ ಬೆದರಿಕೆ ಹಾಕಿ ವಿಪರೀತ ಬಡ್ಡಿ ದರ ವಿಧಿಸಿ ಸುಲಿಗೆ ಮಾಡುವ ವಂಚಕರ ಜಾಲದ ಕುರಿತಾಗಿ ಎಚ್ಚರವಿರಲಿ” ಎಂದು ತಿಳಿಸಿದೆ.
“ಇಂತಹ ಅನಧಿಕೃತ ಸಾಲದ ಆ್ಯಪ್‌ಗಳಿಂದ ಸುರಕ್ಷಿತವಾಗಿರುವುದು ಸಾರ್ವಜನಿಕರ ಹಿತದೃಷ್ಟಿಯಿಂದ ಮುಖ್ಯವಾಗಿದೆ. ಬೆಂಗಳೂರು ನಗರ ಪೊಲೀಸರು ಈ ಸಮಸ್ಯೆಗಳನ್ನು ಹತ್ತಿಕ್ಕಲು ಕ್ರಿಯಾಶೀಲವಾಗಿ ಕಾರ್ಯಪ್ರವೃತ್ತರಾಗಿದ್ದಾರೆ” ಎಂದು ಹೇಳಿದೆ.
ಈ ಸುದ್ದಿ ಓದಿದ್ದೀರಾ? ವಂಚನೆ ಪ್ರಕರಣ | ಓಡಿಶಾದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದ ಪ್ರಮುಖ ಆರೋಪಿ ಅಭಿನವ ಹಾಲಶ್ರೀ
“ಸಾರ್ವಜನಿಕರು ಈ ಕುರಿತಾಗಿ ಜಾಗರೂಕರಾಗಿರುವುದರ ಜತೆಗೆ ಇಂತಹ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳು ಗಮನಕ್ಕೆ ಬಂದಲ್ಲಿ ಕೂಡಲೇ ಪೊಲೀಸ್ ಇಲಾಖೆಗೆ ವರದಿ ಮಾಡಬೇಕು” ಎಂದು ಮನವಿ ಮಾಡಿದೆ.