ಹಿಟ್ ಆ್ಯಂಡ್ ರನ್‌ಗೆ ಓರ್ವ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಗಾಣಕಲ್‌ನಲ್ಲಿ ನಡೆದಿದೆ.
ಅಜಯ್ ಕುಮಾರ್ ಸಾವನ್ನಪ್ಪಿದ ಬೈಕ್ ಸವಾರ. ಶನಿವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ ನಗರದ ಗಾಣಕಲ್ ರಸ್ತೆಯಲ್ಲಿ ಈ ಘಟನೆ ನಡೆದಿದೆ.
ಅಜಾಗರೂಕತೆ ಹಾಗೂ ವೇಗವಾಗಿ ಬಂದ KA 53 MH 9090 ಸಂಖ್ಯೆಯ ಕಾರ್ ಚಾಲಕ ಬೈಕ್ಗೆ ಡಿಕ್ಕಿಯಾಗಿ ಅಪಘಾತ ನಡೆಸಿ ಪರಾರಿಯಾಗಿದ್ದಾನೆ.
ಚಿಕ್ಕೇಗೌಡನಪಾಳ್ಯದಿಂದ ಉತ್ತರಹಳ್ಳಿ ಕಡೆಗೆ ಕಾರು ವೇಗವಾಗಿ ಚಲಿಸಿದೆ. ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಅಜಯ್ ಕುಮಾರ್ ತೀವ್ರ ಗಾಯಗಳಿಂದಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಕೆಂಗೇರಿ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಕಾರು ಚಾಲಕನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.