ಅಕ್ರಮ ಮರಳುಗಾರಿಕೆ ಆರೋಪದ ಮೇಲೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಬಜ್ಪೆ ಪೊಲೀಸ್ ಠಾಣೆಯಲ್ಲಿ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಾಗಿದೆ.
“ಮುಂಜಾನೆ 4 ಗಂಟೆ ಸುಮಾರಿಗೆ ಪೊಲೀಸರು ಗಸ್ತು ತಿರುಗುತ್ತಿದ್ದ ವೇಳೆ ಅಡ್ಡೂರಿನ ನಂದ್ಯ ತಲುಪಿದಾಗ ಎರಡು ಟಿಪ್ಪರ್ ಲಾರಿಗಳು ಬರುತ್ತಿರುವುದು ಕಂಡುಬಂದಿದೆ. ವಾಹನವನ್ನು ನಿಲ್ಲಿಸುವಂತೆ ಚಾಲಕರಿಗೆ ಸೂಚಿಸಿದರೂ ಕೂಡ ಚಾಲಕರು ಮರಳು ತುಂಬಿದ ಲಾರಿಯನ್ನು ಬಿಟ್ಟು ಪರಾರಿಯಾಗಿದ್ದಾರೆ. ಫಲ್ಗುಣಿ ನದಿ ತೀರಕ್ಕೆ ತೆರಳಿ ಮರಳು ಗಣಿಗಾರಿಕೆಗೆ ಬಳಸಿದ 15 ದೋಣಿಗಳನ್ನು ಪತ್ತೆಹಚ್ಚಿದ್ದು, ಸಮವಸ್ತ್ರದಲ್ಲಿದ್ದ ಪೊಲೀಸರನ್ನು ಗಮನಿಸಿದ ಇಬ್ಬರು ಆರೋಪಿಗಳು ನದಿಗೆ ಹಾರಿ ತಪ್ಪಿಸಿಕೊಂಡಿದ್ದಾರೆ” ಎಂದು ಪೊಲೀಸರು ತಿಳಿಸಿದ್ದಾರೆ.
“ಸುಮಾರು 15 ದೋಣಿಗಳನ್ನು ಪರಿಶೀಲಿಸಲಾಯಿತು. ಅವುಗಳಲ್ಲಿ ಒಂದು ದೋಣಿಯಲ್ಲಿ ಸಂಪೂರ್ಣವಾಗಿ ಮರಳು ತುಂಬಿದ್ದರೆ, ಇತರ ಎಂಟು ದೋಣಿಗಳಲ್ಲಿ ಭಾಗಶಃ ಮರಳು ತುಂಬಿತ್ತು. ಆರು ದೋಣಿಗಳು ಖಾಲಿಯಾಗಿದ್ದವು” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂ.ಗ್ರಾ | ಗೋಮಾಂಸ ಸಾಗಾಟಗಾರರ ಮೇಲೆ ಸಂಘಪರಿವಾರದವರ ವಿಕೃತ ಹಲ್ಲೆ
ರಿಯಾಜ್, ನೌಶಾದ್, ನೌಫಾಲ್, ಟಿಪ್ಪರ್ ಲಾರಿ ಮಾಲೀಕ, ಚಾಲಕ ಹಾಗೂ ದೋಣಿ ಮಾಲೀಕರ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾರೆ.