ರಾಜ್ಯದ 600 ಸಣ್ಣ ಗ್ರಾಮ ಪಂಚಾಯತಿಗಳಲ್ಲಿ ಮದ್ಯ ಮಾರಾಟಕ್ಕೆ ಪರವಾನಿಗೆ ಕೊಡುವ ರಾಜ್ಯ ಸರ್ಕಾರದ ನಿರ್ಧಾರ ಖಂಡನೀಯವಾದದ್ದು, ಕೂಡಲೇ ಮದ್ಯಮಾರಾಟದ ಪರವಾನಿಗೆಗೆ ರದ್ದುಗೊಳಿಸುವಂತೆ ರಾಜ್ಯ ಮಹಿಳಾ ಒಕ್ಕೂಟ ಮತ್ತು ಮದ್ಯನಿಷೇಧ ಆಂದೋಲನ ಕಾರ್ಯಕರ್ತರು ಒತ್ತಾಯಿಸಿದರು.
ಈ ಕುರಿತು ಕಲಘಟಗಿ ತಾಲೂಕು ಘಟಕದ ಕಾರ್ಯಕರ್ತರು ಮದ್ಯಮಾರಾಟ ನಿಷೇಧಿಸುವಂತೆ ತಹಶಿಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
“ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತ್ರತ್ವದ ರಾಜ್ಯ ಸರ್ಕಾರ ನಮಗೆ ಐದು ಗ್ಯಾರಂಟಿ ಯೋಜನೆ ನಮಗೆ ಕೊಡದಿದ್ದರೂ ಪರವಾಗಿಲ್ಲ, ಆದರೆ ಮದ್ಯಮಾರಾಟ ಮಾತ್ರ ಸಂಪೂರ್ಣ ಬಂದ್ ಮಾಡಲೇಬೇಕು ಎಂದು ಆಗ್ರಹಿಸಿದ್ದಾರೆ. ಸಾರಾಯಿ ಬಂದ್ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಮದ್ಯ ಮಾರಾಟ ನಿಷೇಧಿಸಬೇಕೆಂದು” ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಪಂಚಾಯತಿ ಮಟ್ಟದಲ್ಲಿ ಸಾವಿರ ಹೊಸ ಮದ್ಯದಂಗಡಿಗಳಿಗೆ ಸರ್ಕಾರದಿಂದ ಪ್ರಸ್ತಾವ: ಸಾಣೇಹಳ್ಳಿ ಶ್ರೀ ವಿರೋಧ
ಈ ಬಗ್ಗೆ ಈದಿನ.ಕಾಮ್ ಜೊತೆಗೆ ಕಾರ್ಯಕರ್ತೆ ನಿಂಗಮ್ಮ ಸವಣೂರ ಮಾತನಾಡಿ, ” ಮದ್ಯ ಮಾರಾಟದಿಂದ ಹಲವರು ಕುಡಿತಕ್ಕೆ ಬಲಿಯಾಗಿದ್ದಾರೆ, ಇದರಿಂದ ಅನೇಕ ಸಂಸಾರಗಳು ಬೀದಿಗೆ ಬಂದಿವೆ. ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಎಂಬುದು ಗೊತ್ತಿದ್ದರೂ ಅನೇಕ ಸೇವಿಸುತ್ತಾರೆ. ಇತ್ತೀಚೆಗೆ ನಮ್ಮ ಸಮಾಜ ಕುಡುಕರ ಸಾಮ್ರಾಜ್ಯವೆಂಬಂತೆ ರೂಪುಗೊಳ್ಳುತ್ತಿರುವುದು ದುರಂತ. ಅಪ್ರಾಪ್ತ ವಯಸ್ಸಿನವರು ಮದ್ಯಪಾನ ದುಶ್ಚಟಕ್ಕೆ ಸಿಲುಕಿ ತಮ್ಮಬದುಕನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಸಂಘಟನೆ, ಮದ್ಯಪಾನ ನಿಷೇಧ ಆಂದೋಲನ ಹಾಗೂ ಗ್ರಾಮೀಣ ಕೂಲಿ ಕಾರ್ಮಿಕ ಸಂಘಟನೆಯ ಮಹಿಳೆಯರು ಇದ್ದರು.