ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ ರಾತ್ರಿ ಜೋರು ಮಳೆ ಸುರಿದಿದೆ. ಈ ವೇಳೆ, ಫುಟ್‌ಪಾತ್ ಮೇಲೆ ತೆರಳುತ್ತಿದ್ದ ತಾಯಿ-ಮಗನ ಮೇಲೆ ಮರದ ಕೊಂಬೆ ಜತೆಗೆ ವಿದ್ಯುತ್ ಕಂಬ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.
ತಾಯಿ ಹೇಮಾವತಿ ಮತ್ತು ಐದು ವರ್ಷದ ಮಗು ಗಂಭೀರವಾಗಿ ಗಾಯಗೊಂಡವರು. ಬೆಂಗಳೂರಿನ ವಿಲ್ಸನ್ ಗಾರ್ಡನ್ನ ಏಳನೇ ಕ್ರಾಸ್ ಬಳಿ ಈ ಘಟನೆ ನಡೆದಿದೆ. ಸದ್ಯ ಗಾಯಾಳುಗಳನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ತಾಯಿ-ಮಗ ನಗರದ ವಿಲ್ಸನ್ ಗಾರ್ಡ್‌ನ ಏಳನೇ ಕ್ರಾಸ್‌ನ ಫುಟ್‌ಪಾತ್ ಮೇಲೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ, ಗಾಳಿಯ ರಭಸಕ್ಕೆ ದಿಢೀರನೇ ಬೃಹತ್ ಗಾತ್ರದ ಮರದ ಕೊಂಬೆ ಹೇಮಾವತಿ ಅವರ ತಲೆ ಮೇಲೆ ಬಿದ್ದಿದೆ. ಜತೆಗೆ ವಿದ್ಯುತ್ ಕಂಬವೂ ನೆಲಕ್ಕೊರಗಿದೆ. ಈ ವೇಳೆ, ಜತೆಯಲ್ಲಿಯೇ ಇದ್ದ ಮಗನಿಗೂ ಗಂಭೀರವಾದ ಗಾಯವಾಗಿದೆ ಎಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಎರಡು ಟೆಕ್ ಸಿಟಿ ಸಂಪರ್ಕಿಸುವ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು
ಸ್ಥಳಕ್ಕೆ ವಿಲ್ಸನ್ ಗಾರ್ಡನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.