ನವದೆಹಲಿ ಮೆಟ್ರೋದಲ್ಲಿ ವೃದ್ಧ ಪ್ರಯಾಣಿಕನೊಬ್ಬ ಬೀಡಿ ಸೇದುತ್ತಿರುವ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ.
ದೆಹಲಿ, ಬೆಂಗಳೂರು ಸೇರಿದಂತೆ ಯಾವುದೇ ಮೆಟ್ರೋದಲ್ಲಿ ಧೂಮಪಾನಕ್ಕೆ ಅವಕಾಶವಿಲ್ಲ. ಜತೆಗೆ, ಮೆಟ್ರೋದಲ್ಲಿ ಕುಳಿತು ತಿಂಡಿ-ತಿನಿಸು ತಿನ್ನುವಂತಿಲ್ಲ. ಪಾನೀಯಗಳನ್ನು ಕುಡಿಯುವಂತಿಲ್ಲ. ಸ್ವಚ್ಛತೆಯ ದೃಷ್ಟಿಯಿಂದ ಈ ನಿಯಮಗಳನ್ನು ಮಾಡಲಾಗಿದೆ. ಇನ್ನೂ ಮೊನಚಾದ ಚಾಕು, ಚೂರಿ, ಕತ್ತರಿ ಸೇರಿದಂತೆ ಇನ್ನಿತರ ಹರಿತವಾದ ವಸ್ತುಗಳನ್ನು ತೆಗೆದುಕೊಂಡು ಹೋಗುವಂತಿಲ್ಲ. ಧೂಮಪಾನ, ಮದ್ಯಪಾನ, ತಂಬಾಕು ಬಳಕೆಗೆ ನಿಷೇಧವಿದೆ.
ಮೆಟ್ರೋ ನಿಲ್ದಾಣದಲ್ಲಿ ತಪಾಸಣೆ ಮಾಡುವಾಗ ಸಿಕ್ಕಿಬಿದ್ದರೆ ಬೀಡಿ, ಸಿಗರೇಟ್ ಜಪ್ತಿ ಮಾಡಿ, ನಿಗಮ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ. ಆದರೆ, ವೃದ್ಧನೊಬ್ಬ ನವದೆಹಲಿ ಮೆಟ್ರೋದಲ್ಲಿ ಪ್ರಯಾಣ ಮಾಡುವಾಗ ಬೀಡಿ ತೆಗೆದು, ಬೆಂಕಿ ಗೀರಿ ಸೇದಲು ಪ್ರಾರಂಭಿಸುತ್ತಾರೆ. ಈ ವೇಳೆ, ಪಕ್ಕದಲ್ಲಿ ಕುಳಿತ ವ್ಯಕ್ತಿಯೊಬ್ಬರು ಎದ್ದು ಹೋಗಿದ್ದಾರೆ. ಅಲ್ಲಿಯೇ ನಿಂತವರು ಒಬ್ಬರು ಬೀಡಿ ಸೇದದಂತೆ ತಡೆದಿದ್ದಾರೆ.
दिल्ली मेट्रो में खुल्लम खुल्ला किसिंग के बीच अब… बीड़ी का स्वैग#DelhiMetro pic.twitter.com/HDJk1rzl8b
— Manish Pandey (@joinmanishpande) September 25, 2023
ಮೆಟ್ರೋ ಆವರಣದೊಳಗೆ ಧೂಮಪಾನವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದ್ದು, ಅದು ಶಿಕ್ಷಾರ್ಹ ಅಪರಾಧವೂ ಆಗಿದೆ. ಇದೀಗ ವೃದ್ಧನೊಬ್ಬ ಬೀಡಿ ಸೇದುತ್ತಿರುವ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗಿದೆ. ಇದಕ್ಕೆ ನೆಟ್ಟಿಗರು ಬೀಡಿ ಸೇದಿದ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ದೆಹಲಿ ಮೆಟ್ರೋ ರೈಲು ನಿಗಮಕ್ಕೆ ಒತ್ತಾಯಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು ಬಂದ್ | 13 ದೇಶೀಯ ವಿಮಾನ ಹಾರಾಟ ರದ್ದು
“ಇಂತಹ ಘಟನೆಗಳು ನಡೆದಾಗ ಸಾರ್ವಜನಿಕರು ಕೂಡಲೇ ನಮಗೆ ಮಾಹಿತಿ ನೀಡಿ. ಇದರಿಂದ ತುರ್ತು ಕ್ರಮ ಕೈಗೊಳ್ಳಬಹುದು. ಆಕ್ಷೇಪಾರ್ಹ ನಡವಳಿಕೆಗಳನ್ನು ಪತ್ತೆಹಚ್ಚಲು ಫ್ಲೈಯಿಂಗ್ ಸ್ಕ್ವಾಡ್ಗಳನ್ನು ನೇಮಿಸಿದ್ದೇವೆ. ದೆಹಲಿ ಮೆಟ್ರೋದಲ್ಲಿ ಧೂಮಪಾನ ಮಾಡುವಂತಿಲ್ಲ. ಆ ವ್ಯಕ್ತಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ದೆಹಲಿ ಮೆಟ್ರೋ ನಿಗಮ ಹೇಳಿದೆ.